ಬರೀ ಮೋಡ......ಎಲ್ಲೆಲ್ಲ್ಲೂ .... ಸುರಿಯಬಾರದೇ ಮಳೆ ? ತಣಿಸಲಿ ನನ್ನ ,ಜೊತೆಗೆ ಇಳೆ . ಕೊಡೆ ಬಿಚ್ಚಿ ನೀರಲ್ಲಿ ಕಾಲು ನೆನೆಸುತ್ತಾ ನೆಡೆಯು ವಾಗ ..... ಮಲೆನಾಡ ಮಡಿಲಲ್ಲಿ ಕಳೆದ ಬಾಲ್ಯ ಮರುಕಳಿಸಲಿ ..... ಹರಿವ ನೀರಲ್ಲಿ ಕಾಗದದ ದೋಣಿ ತೇಲಿಸಿದ ನೆನಪು ಕಾಡಿದೆ ... ಇಂದೂ ಬಾರದ ಮಳೆಯ ಜೊತೆ ಕಳೆದ ಸುಂದರ ದಿನಗಳು . ಎಲ್ಲೆಲ್ಲೂ ಮೋಡ..... ಕವಿದಿದೆ ನನ್ನ ಮನಕ್ಕೂ . ಕಪ್ಪು ಮುಗಿಲು ಕರಗಲಿ ಸುರಿಯಲಿ ಜಲಧಾರೆ . ಪುಳಕಗೊಳ್ಳಲಿ ನನ್ನ ಹೃದಯ ,ಧರೆ .
'ಪ್ರಳಯ ' ಪ್ರಳಯ ಆಗೋದಾದ್ರೆ ಆಗಲಿ ಬಿಡಿ , ನನ್ನದೇನೂ ಅಭ್ಯಂತರವಿಲ್ಲ :-) ಪಟ್ ಅಂತಾ ಪ್ರಾಣ ಹೋಗಲೀ , ಒದ್ದಾಡಿ ಸಾಯೋಕೆ ನನಗೆ ಇಷ್ಟವಿಲ್ಲ :( ಅದಕ್ಕೂ ಮೊದಲು , ಒಂದೆರಡು ಆಸೆ ಗಳು ಇದೇ , ಹಿಮದ ಮಳೆಯಲ್ಲಿ ನಿನ್ನೊಡನೆ ನೆನೆದು ಗಡ ಗಡ ನಡುಗಬೇಕು :-) ಸಮುದ್ರದ ಅಲೆಗಳ ಹಿನ್ನೆಲೆಯಲ್ಲಿ ನಿನ್ನ ಹಾಡ ಕೇಳಬೇಕು ಆಮೇಲೆ ಏನಾದರೂ ಆಗಲಿ . ಜಗದ ಚಿಂತೆ ಬೇಡಾ ನನಗೆ ನಿನ್ನ ಮಡಿಲಲ್ಲಿರುವಾಗ ಆಗಲಿ ಬಿಡು ಪ್ರಳಯ .
ನನ್ನ ಹೆಸರು ಮರೆಯಬಹುದು ........ ನನ್ನ ಚಹರೆ ಬದಲಾಗಬಹುದು ....... ನನ್ನ ದ್ವನಿಯೂ ಮರೆತು ಹೋಗಬಹುದು ಆದರೆ ...... ನಾನು ಬರೆದ ಕವನದ ಸಾಲುಗಳು.. ನನ್ನ ನೆನಪನ್ನು ನಿಮ್ಮ ಹೃದಯದಲ್ಲಿ.. ಸವಿನೆನಪಾಗಿ ಇಡಬಹುದು....