1.ನಾ ಸನಿಹ ಬಂದಷ್ಟೂ ,,,, ದೂರ ಓಡುತ್ತೀಯಲ್ಲ ! ನೀ ನನ್ನ ಬಳಿ ಇಲ್ಲದಿರೆ ಏನು ? ನಾನೊಂಟಿಯಲ್ಲ , ನಿನ್ನೊಂದಿಗೆ ಕಳೆದ ಮಧುರ ನೆನಪುಗಳಿವೆ ಗೆಳೆಯ ಸಾಕಲ್ಲ ?
1.ಎಂದೋ ಕಂಡ ಕನಸು ನೀನು ಹೃದಯದಿ ಮುಚ್ಚಿಟ್ಟು ಕಾದಿದ್ದೆ ನೀ ಮುಡಿಸೋ ಮಲ್ಲಿಗೆಗೆ ಹಂಬಲಿಸಿ ಏಳು ಹೆಜ್ಜೆ ನಿನ್ನೊಂದಿಗೆ ಹಾಕುವಾಸೆಯಲಿ ಕಾಯುತಲಿದ್ದೆ ಗೆಳೆಯಾ …. ವ್ಯರ್ಥವಾಗಲಿಲ್ಲ …. ಶಬರಿಯ ಕಾಯುವಿಕೆ , ನನ್ನದೂ ಸಹ …
2.ಅಲೆಯ ಹೊಡೆತಕ್ಕೆ ಮರಳ ಮೇಲಿನ ನಿನ್ನ ಹೆಸರು ಅಳಿಸಬಹುದು ,,,,, ನಿನ್ನನ್ನೇ ಪ್ರೀತಿಸುವ ನನ್ನ ಹೃದಯದಲಿ ಬರೆದ ನಿನ್ನ ಹೆಸರು ಅಳಿಸಲಾದೀತೆ ? ಮೋಹವೇನಲ್ಲ ಜೀವನ ಪ್ರೇಮ . ಎಲ್ಲವೂ ಬೇಕು ಬದುಕಿರುವ ತನಕ . ನೀನೂ ನಿನ್ನ ಪ್ರೀತಿಯೂ ..
1. ಭೂಕಂಪನವಾದಾಗ ಮಾತ್ರ ಭೂಮಿ ಕಂಪಿಸುವುದಲ್ಲಾ . ನನ್ನವ ಮುತ್ತು ಕೊಡುವೆನೆಂದಾಗ ನನ್ನೆದೆಯಲ್ಲಿ ಸಣ್ಣಗೆ ಕಂಪನ ತುಟಿ ಗಳು ಅದರುತ್ತವೆ ಆಗಲೂ ಭೂಕಂಪನದ ಅನುಭವ
2.ವಿರಹದುರಿಯಲಿ ಬೇಯುತ್ತಾ ಕೋಪದಲಿ ಧುಮುಗುಡುತ್ತಿರುವಾಗ ಸೀಲಿಂಗ್ ಫ್ಯಾನಿನ ರಭಸ ಗಾಳಿಯೊಂದಿಗೆ …. ಆ ಗಾಳಿಯೂ ನುಸುಳದಂತೆ ಬಿಗಿದಪ್ಪಿದ ನಿನ್ನ ತೋಳುಗಳು ನಾ ತಂಪನ್ನೀವೆ ಫ್ಯಾನಿನ ಗಾಳಿಯೇಕೆ ಎಂದು ಸವಾಲೆಸೆದ ಕ್ಷಣವೇ ….. ನಾ ಮಂಜಾಗಿ …. ನಿನ್ನೊಳು ಸೇರಿಹೋದೆ.