ಸುಜಾತಾ ಹೀಗಾ ಅಂತಾ ಯಾರಾದರೂ ಬಯ್ದುಕೊಳ್ಳಿ ಪರವಾಗಿಲ್ಲ ಹೇಳಿಬಿಡ್ತೇನೆ.
ನನಗೆ ಮುಸ್ಲಿಮ್ಸ್ ಕಂಡ್ರೆ ಭಯ. ಮಹಮ್ಮದ್ ಪೈಗಂಬರ್ ಯಾರು ? ಅವರಮ್ಮನ ಹೆಸರು ಏನು ? ....... ಈ ತರಹದ ಪ್ರಶ್ನೆಗಳ ಕೇಳಿ ಉತ್ತರಿಸದಿದ್ದವರನ್ನು ಗುಂಡಿಕ್ಕಿ ಸಾಯಿಸುವುದನ್ನು ಬೇರೆ ನೋಡಿ ದೇವರಾಣೆ ಎದೆ ನಡುಗಿತ್ತು. ವೈಟ್ ವಿಡೋ !!!!! ಅಬ್ಭಾ !!!!!
ಆದರೆ........
ಮೊನ್ನೆ ತೀವ್ರವಾಗಿ ಅನಾರೋಗ್ಯ. ಇದ್ದಕ್ಕಿದ್ದಂತೆ ಅನಿವಾರ್ಯವಾಗಿ ಹಾಸ್ಪಿಟಲ್ ಗೆ ಹೋಗಬೇಕಾಯ್ತು. ಅದೂ ಮುಸ್ಲಿಂ ಏರಿಯಾದಲ್ಲಿನ ಹಾಸ್ಪಿಟಲ್, ಅಲ್ಲಿನ ವೈದ್ಯರು ಸಹಾ ಮುಸ್ಲಿಂ Zameeruddin Ahmed
ಚಕಾ ಚಕ್ ಸೀರಿಯಸ್ ಅಂದ್ರು ಆಪರೇಶನ್ ರೆಡಿ ಮಾಡಿಯೇ ಬಿಟ್ರು. ನನಗೋ ಮನಸಿಲ್ಲ
ಆದರೂ .......
ವೈದ್ಯೋ ನಾರಾಯಣೋ ಹರಿ ಅಂತಾ ಸುಮ್ಮನೆ ಮಲಗಿದೆ.
ಯಾವುದಕ್ಕೂ ಭಯಪಡದ ನನ್ನ ನೋಡಿ ಅವರಿಗೆ ಅಚ್ಚರಿಯಾದರೆ .....
ಅವರು ಎಷ್ಟು ಚೆಂದ ಕನ್ನಡದಲ್ಲಿ ನನ್ನೊಡನೆ ಮಾತಾಡ್ತಿದಾರೆ ಅಂತಾ ನನಗೆ ಅಚ್ಚರಿ.
ಸಾಬ್ರು ಕನ್ನಡ ನಿರೀಕ್ಷಿಸಿದ್ದೆ, ಆದ್ರೆ ಶುದ್ದವಾಗಿ ಕನ್ನಡ ಮಾತಾಡುವ ಅವರು ನನಗೆ ಅಚ್ಚರಿ ಅನಿಸಿದ್ದ್ದು ಸುಳ್ಳಲ್ಲ.
ಆಪರೇಶನ್ ಶುರುವಾಗೋ ಮುನ್ನ - ನಿಮ್ ಕನ್ನಡ ನಂಗೆ ತುಂಬಾ ಇಷ್ಟ ಆಯ್ತು ಎಂದು ಮೆಚ್ಚುಗೆ ಸೂಚಿಸಿದೆ.
'ರೀ ಮ್ಯಾಡಂ ನಾನು ಕನ್ನಡ ಮೀಡಿಯಂ ನಲ್ಲೆ ಓದಿದ್ದುರೀ. ಸರ್ವಜ್ಞ ಗೊತ್ತು ನನಗೆ ಹೇಳಲಾ 'ಅಂದ್ರು .
ಆದರೇ, ನನಗೆ ಸ್ಪೈನಲ್ ಅನಸ್ತೇಶಿಯಾ ಕೊಟ್ಟಿದ್ದು , ಸೊ ಆಪರೇಶನ್ ಮುಗಿಯುವವರೆಗೂ ಕನ್ನಡ , ಕವನ , ಕಥೆ .........ಸಖತ್ ಹರಟೆ.
ನನ್ನ ಒಂದೇ ಒಂದು ಮೆಚ್ಚುಗೆಯ ಮಾತು ನಮ್ಮನ್ನು ಫ್ರೆಂಡ್ ಆಗಿಸಿಬಿಡ್ತು.
ಹಾಸ್ಪಿಟಲ್ ಅನಿಸಲಿಲ್ಲ, ಅಲ್ಲಿದಷ್ಟೂ ಸಮಯ ಒಳ್ಳೆಯ ಗೆಳೆಯನೊಂದಿಗೆ ಇರುವ ಕಂಫರ್ಟ್.
ಮನೆಗೆ ಬಂದ ಮೇಲೆಯೂ ಅವರೇ ಫೋನ್ ಮಾಡಿ ಆರೋಗ್ಯ ವಿಚಾರಿಸಿಕೊಂಡರು
೧. ಮನುಷ್ಯರನ್ನು ಮನುಷ್ಯರನ್ನಾಗೆ ನೋಡಬೇಕು.
೨. ಒಂದು ಒಳ್ಳೆಯ ಮಾತು ಎಂತಹಾ ಪರಿಣಾಮ ಬೀರುತ್ತೆ !!!
ಇಷ್ಟು ಮಾತ್ರಾ ನಾ ಹೇಳಿದ್ದರ ಉದ್ದೇಶ.