Tuesday, 15 July 2014

ಅಮ್ಮನಿಗೆ ಹನ್ನೊಂದಕ್ಕೆ ಮದ್ವೆಯಾಗಿ ಹದಿನೆಂಟಕ್ಕೆ ಹುಟ್ಟಿದ ಅಣ್ಣ ಬೆಳ್ಳಗೆ ಸುಂದರ, ಮೊದಲನೆಯ ಮಗ ಸಹಜವಾಗೇ ಅಪಾರ ಪ್ರೀತಿ. ಅವನ ನಂತರ ೭ ವರ್ಚಕ್ಕೆ ಅಕ್ಕ, ಸುಂದರಿ. ಮಗ -ಮಗಳು ಸಾಕಿತ್ತು, ಆದ್ರೆ ನಾ ಹುಟ್ಟಿದ್ದು ೫ ವರ್ಷಗಳ ನಂತರ. ನಾ ಬಣ್ಣದಲ್ಲಿ ಕಪ್ಪು, ಮೊಂಡು ಮೂಗು, ಸ್ವಲ್ಪ ಡುಮ್ಮಗೆ. ತೀರಾ ಸೈಲೆಂಟ್. ನೀನು ನಮ್ಮ ಮಗುವಲ್ಲ ಎಂದು ನಗ್ತಿದ್ರು. ನಾ ಎಷ್ಟೋ ದಿನಗಳು ಹಾಗೇ ಅನ್ಕೊಂಡಿದ್ದೆ. ಯಾವುದನ್ನೂ ನನಗೆ ಬೇಕು ಎಂದು ಎಂದೂ ಕೇಳಲಿಲ್ಲ. ಆದರೇ.....
ನನ್ನನ್ನೂ ಸಹ ನನ್ನ ಹದಿನಾರರಲ್ಲಿ ಒಬ್ಬ ಪ್ರೀತಿಸಿದ  ಆಗ ಅವನಿಗೆ ಹದಿನೇಳು. ಮದುವೆಯೂ ಆಯ್ತು,ಮುದ್ದಾದ ಎರಡು ಮಕ್ಕಳೂ ಸಹ. ಭಗವಂತ ಸುಖ, ಸಂಪತ್ತು ......ಸಕಲವನ್ನೂ ನೀಡಿದ.
ನಾನೂ ಒಂದಿಷ್ಟು ಅರಳಿದೆ, ಬೀಗಿದೆ.
ನಾನು ಹದಿನಾರು ಸ್ವಲ್ಪ ಚೆಂದ ಆಗಿದ್ದೆ. ನಮ್ಮ ಹಳೆಯ ದಿನಗಳ ಫೋಟೋ ನೋಡಿ, ಅತ್ತಿಗೆ ಅದು ಹೆಂಗೆ ನಮ್ಮಣ್ಣನನ್ನು ಲವ್ ಮಾಡಿದರೋ ಎಂದು ನಗ್ತಾನೆ ನನ್ ಮೈದುನ. ಹೌದು ನನ್ನವ ನೋಡೋಕೆ ಚೆಂದ ಅನಿಸ್ತಿರಲಿಲ್ಲ. ಆದರೇ ತುಂಬಾ ಗಂಭೀರವಾದ ಮೆಲು ಮಾತಿನ ಒಳ್ಳೆಯ ಹುಡುಗ. ಬಹುಷಃ ನಾವಿಬ್ರೂ ನಮ್ಮ ರೂಪಕ್ಕೆ ಸೋತು ಒಂದಾಗಿರಲಿಲ್ಲ.
ಹೆಚ್ಚು ದಿನ ಚೆಂದ ಉಳಿಯಲಿಲ್ಲ. ತೀವ್ರ ಅನಾರೋಗ್ಯಕ್ಕೆ ಬಿದ್ದ ನಾನು, ನನ್ನ ಸುಂದರ ನಗು ೬೫ ಕೆ,ಜಿ ದೇಹದ ತೂಕ, ಉದ್ದನೆಯ ಜಡೆ, ಚೆಂದದ ಬಣ್ಣ, ಕೊನೆಗೆ ಬದುಕುವ ಆಸೆಯನ್ನೂ ಕಳೆದುಕೊಂಡಿದ್ದೆ. ತೊದಲುತ್ತಾ , ಕಷ್ಟಪಟ್ಟು ಏನು ಮಾತಾಡೋದು ಅಂತಾ ಮೂಕಳಾದೆ, ಬಹಳಷ್ಟು ಸಮಯ .....ನಿಷ್ಕ್ರಿಯಳಾಗಿ ಮಲಗಿದ್ದಲ್ಲೇ ಮಲಗಿದ್ದೆ ನಾನು.
ನಾಲ್ಕು ಗೋಡೆಗಳ ಮಧ್ಯೆ ಮೌನಕ್ಕೆ ಶರಣಾದೆ. ಆಡಿಕೊಳ್ಳುವ ಜನಗಳ ಎದುರಿಸಲು ಭಯ ಇರಬೇಕು. ಅಥ್ವಾ ಎಲ್ಲವನ್ನೂ ಕಳೆದುಕೊಂಡ ನೋವು-ನಿರಾಸೆ ಇರಬಹುದು, ಕುಗ್ಗಿದೆ.
ಕೊನೆಗೊಂದು ದಿನ ಇನ್ನು ಏಳೋಕೆ ಸಾಧ್ಯವೇ ಇಲ್ಲ ಎಂದಮೇಲೂ ಎದ್ದು ಮಗುವಿನ ಹಾಗೆ ಹೆಜ್ಜೆಯಿಡುವುದು ಕಲಿತೆ, ಕುಂಟುತ್ತಾ ನಡೆದೆ. ಅಯ್ಯೋ ಪಾಪ ಎಂದವರ ಮರುಕ ನನಗೆ ಬೇಡವಾಗಿತ್ತು. ಸಹಾಯ ಮಾಡುವವರಿದ್ರೆ ಅವಲಂಬನೆ ಜಾಸ್ತಿ, ಅಸಾಹಾಯಕರಾಗ್ತೇವ.
ದಿನ ಕಳೀತಾ ........
ಜೀವನದಲ್ಲಿ ಕಲಿತೆ.
"ಯಾವುದೂ ಶಾಶ್ವತ ಅಲ್ಲ , ಯಾವುದೂ ನಮ್ಮದಲ್ಲ".
ದೈಹಿಕ -ಮಾನಸಿಕ ನೋವುಗಳ ಸಾಕಷ್ಟು ಉಂಡ ನನಗೆ ನೋವಿನಲ್ಲಿರುವವರಿಗೆ ಸಹಾಯ, ಸಾಂತ್ವನ ನೀಡುವ ಧೈರ್ಯ ಬಂತು.
ಯಾರಾದರೂ ಅವ್ಳು ಚೆನ್ನಾಗಿದಾಳೆ ಅಂದ್ರೆ ನಗು ಬರುತ್ತೆ, ದೇಹದ ಸೌಂದರ್ಯ ಮಾಸೋದು ಎಷ್ಟ್ ಹೊತ್ತು ? ಇದು ಶಾಶ್ವತ ಅಲ್ಲ ಅಂತಾ ನಂಗೊತ್ತಿದೆ ಎನ್ನಬೇಕು ಅನಿಸುತ್ತೆ.
ಕಳೆದುಕೊಂಡಿದ್ರಿಂದಾ ಪಾಠ ಕಲಿತು....
ಅಂದು ಕಳೆದುಕೊಂಡಿದ್ದನ್ನು ಇಂದು ಮರಳಿ ಪಡೆದಿದ್ದೇನೆ. ಜನಗಳ ಜೊತೆ ಬೆರೆತು ಹೊಸದಾಗಿ ಪಡೆದುಕೊಂಡಿರೋದು 'ಆತ್ಮವಿಶ್ವಾಸ'.
"ನಾನು ಕುರೂಪಿ ನಿಜಾ ಆದರೇ ಮನಸ್ಸು ಸುಂದರವಾಗಿದೆ".
ಅಂತರಾಳದ ಸೌಂದರ್ಯವೇ ನಿಜವಾದ ಸೌಂದರ್ಯ.
Photo: ಏನೂ ಇಲ್ಲದಿದ್ರೆ ಪರವಾಗಿಲ್ಲ, ಇದ್ದಿದ್ದನ್ನು ಕಳೆದುಕೊಂಡರೆ ಆಗುವ ಸಂಕಟ ನನಗೆ ಗೊತ್ತು.
ಅಮ್ಮನಿಗೆ ಹನ್ನೊಂದಕ್ಕೆ  ಮದ್ವೆಯಾಗಿ ಹದಿನೆಂಟಕ್ಕೆ ಹುಟ್ಟಿದ  ಅಣ್ಣ ಬೆಳ್ಳಗೆ ಸುಂದರ, ಮೊದಲನೆಯ ಮಗ ಸಹಜವಾಗೇ ಅಪಾರ ಪ್ರೀತಿ. ಅವನ ನಂತರ ೭ ವರ್ಚಕ್ಕೆ ಅಕ್ಕ, ಸುಂದರಿ. ಮಗ -ಮಗಳು ಸಾಕಿತ್ತು, ಆದ್ರೆ ನಾ ಹುಟ್ಟಿದ್ದು ೫ ವರ್ಷಗಳ ನಂತರ. ನಾ ಬಣ್ಣದಲ್ಲಿ ಕಪ್ಪು, ಮೊಂಡು ಮೂಗು, ಸ್ವಲ್ಪ ಡುಮ್ಮಗೆ. ತೀರಾ ಸೈಲೆಂಟ್. ನೀನು ನಮ್ಮ ಮಗುವಲ್ಲ ಎಂದು ನಗ್ತಿದ್ರು. ನಾ ಎಷ್ಟೋ ದಿನಗಳು ಹಾಗೇ ಅನ್ಕೊಂಡಿದ್ದೆ. ಯಾವುದನ್ನೂ ನನಗೆ ಬೇಕು ಎಂದು ಎಂದೂ ಕೇಳಲಿಲ್ಲ. ಆದರೇ.....
ನನ್ನನ್ನೂ ಸಹ ನನ್ನ ಹದಿನಾರರಲ್ಲಿ   ಒಬ್ಬ ಪ್ರೀತಿಸಿದ :-) ಆಗ ಅವನಿಗೆ ಹದಿನೇಳು. ಮದುವೆಯೂ  ಆಯ್ತು,ಮುದ್ದಾದ ಎರಡು ಮಕ್ಕಳೂ ಸಹ. ಭಗವಂತ ಸುಖ, ಸಂಪತ್ತು ......ಸಕಲವನ್ನೂ ನೀಡಿದ. 
ನಾನೂ ಒಂದಿಷ್ಟು ಅರಳಿದೆ, ಬೀಗಿದೆ. 
ನಾನು ಹದಿನಾರು ಸ್ವಲ್ಪ ಚೆಂದ ಆಗಿದ್ದೆ. ನಮ್ಮ ಹಳೆಯ ದಿನಗಳ ಫೋಟೋ ನೋಡಿ, ಅತ್ತಿಗೆ ಅದು ಹೆಂಗೆ ನಮ್ಮಣ್ಣನನ್ನು ಲವ್ ಮಾಡಿದರೋ ಎಂದು ನಗ್ತಾನೆ ನನ್ ಮೈದುನ. ಹೌದು ನನ್ನವ ನೋಡೋಕೆ ಚೆಂದ ಅನಿಸ್ತಿರಲಿಲ್ಲ. ಆದರೇ ತುಂಬಾ ಗಂಭೀರವಾದ ಮೆಲು ಮಾತಿನ ಒಳ್ಳೆಯ ಹುಡುಗ. ಬಹುಷಃ ನಾವಿಬ್ರೂ ನಮ್ಮ ರೂಪಕ್ಕೆ ಸೋತು ಒಂದಾಗಿರಲಿಲ್ಲ.
ಹೆಚ್ಚು ದಿನ ಚೆಂದ ಉಳಿಯಲಿಲ್ಲ. ತೀವ್ರ ಅನಾರೋಗ್ಯಕ್ಕೆ ಬಿದ್ದ ನಾನು, ನನ್ನ ಸುಂದರ ನಗು ೬೫ ಕೆ,ಜಿ ದೇಹದ ತೂಕ, ಉದ್ದನೆಯ ಜಡೆ, ಚೆಂದದ ಬಣ್ಣ, ಕೊನೆಗೆ ಬದುಕುವ ಆಸೆಯನ್ನೂ ಕಳೆದುಕೊಂಡಿದ್ದೆ. ತೊದಲುತ್ತಾ , ಕಷ್ಟಪಟ್ಟು ಏನು ಮಾತಾಡೋದು ಅಂತಾ  ಮೂಕಳಾದೆ, ಬಹಳಷ್ಟು ಸಮಯ .....ನಿಷ್ಕ್ರಿಯಳಾಗಿ ಮಲಗಿದ್ದಲ್ಲೇ ಮಲಗಿದ್ದೆ ನಾನು.
ನಾಲ್ಕು ಗೋಡೆಗಳ ಮಧ್ಯೆ ಮೌನಕ್ಕೆ ಶರಣಾದೆ. ಆಡಿಕೊಳ್ಳುವ ಜನಗಳ ಎದುರಿಸಲು ಭಯ ಇರಬೇಕು. ಅಥ್ವಾ ಎಲ್ಲವನ್ನೂ ಕಳೆದುಕೊಂಡ ನೋವು-ನಿರಾಸೆ ಇರಬಹುದು, ಕುಗ್ಗಿದೆ.
ಕೊನೆಗೊಂದು ದಿನ  ಇನ್ನು ಏಳೋಕೆ ಸಾಧ್ಯವೇ ಇಲ್ಲ ಎಂದಮೇಲೂ  ಎದ್ದು ಮಗುವಿನ ಹಾಗೆ ಹೆಜ್ಜೆಯಿಡುವುದು ಕಲಿತೆ, ಕುಂಟುತ್ತಾ ನಡೆದೆ. ಅಯ್ಯೋ ಪಾಪ ಎಂದವರ ಮರುಕ ನನಗೆ ಬೇಡವಾಗಿತ್ತು. ಸಹಾಯ ಮಾಡುವವರಿದ್ರೆ ಅವಲಂಬನೆ  ಜಾಸ್ತಿ, ಅಸಾಹಾಯಕರಾಗ್ತೇವ.
ದಿನ ಕಳೀತಾ ........
ಜೀವನದಲ್ಲಿ ಕಲಿತೆ.
"ಯಾವುದೂ ಶಾಶ್ವತ ಅಲ್ಲ , ಯಾವುದೂ ನಮ್ಮದಲ್ಲ".
ದೈಹಿಕ -ಮಾನಸಿಕ ನೋವುಗಳ ಸಾಕಷ್ಟು ಉಂಡ ನನಗೆ ನೋವಿನಲ್ಲಿರುವವರಿಗೆ ಸಹಾಯ, ಸಾಂತ್ವನ ನೀಡುವ ಧೈರ್ಯ ಬಂತು.
ಯಾರಾದರೂ ಅವ್ಳು  ಚೆನ್ನಾಗಿದಾಳೆ ಅಂದ್ರೆ ನಗು ಬರುತ್ತೆ,   ದೇಹದ ಸೌಂದರ್ಯ  ಮಾಸೋದು ಎಷ್ಟ್ ಹೊತ್ತು ?  ಇದು ಶಾಶ್ವತ ಅಲ್ಲ ಅಂತಾ ನಂಗೊತ್ತಿದೆ ಎನ್ನಬೇಕು ಅನಿಸುತ್ತೆ. 
ಕಳೆದುಕೊಂಡಿದ್ರಿಂದಾ ಪಾಠ ಕಲಿತು....
ಅಂದು ಕಳೆದುಕೊಂಡಿದ್ದನ್ನು ಇಂದು ಮರಳಿ ಪಡೆದಿದ್ದೇನೆ. ಜನಗಳ ಜೊತೆ ಬೆರೆತು ಹೊಸದಾಗಿ ಪಡೆದುಕೊಂಡಿರೋದು 'ಆತ್ಮವಿಶ್ವಾಸ'.
"ನಾನು ಕುರೂಪಿ ನಿಜಾ ಆದರೇ ಮನಸ್ಸು ಸುಂದರವಾಗಿದೆ".
ಅಂತರಾಳದ ಸೌಂದರ್ಯವೇ ನಿಜವಾದ ಸೌಂದರ್ಯ.
ನೀನೆಷ್ಟೇ ದೂರ ಹೋದರೂ
ನನ್ನ ಮುಗ್ದ ಮೊಗದ ನೆನಪು 
ನಿನಗೆ ಕಾಡದೇ?
ಕೈ ಕೈ ಹಿಡಿದು ಜೊತೆಯಾಗಿ
ನಾವಿಬ್ಬರೂ ನಡೆದ ದಾರಿ
ಸಂಜೆಯಲಿ ಆಡಿದ ಪಿಸುಮಾತು
ಮರೆಯಲಾದೀತೇ?
ನಾವಿಬ್ಬರೂ ತಬ್ಬಿದ್ದು
ಮುತ್ತಿಟ್ಟಿದ್ದು
ಕಾಮವೂ ಅಲ್ಲ -ಪ್ರೇಮವೂ ಅಲ್ಲ
ಅದು ನಮ್ಮ ಉಸಿರಾಟ
ಅಗಲಲಾದೀತೆ ?
ನೀನಲ್ಲಿ ಈಗ ಚಂದಿರನ ನೋಡ್ತಾ ಇದ್ದೀಯ 
ಎನ್ನುವ ಕಾರಣಕ್ಕೆ ......
ನನಗಿಲ್ಲಿ ಹಿತವೆನಿಸುತ್ತಿದೆ -ಬೆಳದಿಂಗಳು.

நீ அங்கு சந்திரனை பார்த்துக்கொண்டிருக்கிறாய்
என்ற காரணத்திற்காக ......
எனக்கு இங்கே நிலா குளிர்கிறது 
-Sujatha Lokesh A kannada poem translated
ಮೊನ್ನೆಯೊಮ್ಮೆ ನಾನು ನನ್ನವ, ಮಗನೊಂದಿಗೆ ಅಮ್ಮನ ಮನೆಗೆ ಹೋಗಿ ರಾತ್ರಿ ಉಳಿದು, ಬೆಳಗ್ಗೆ ಬೇಗ ಹೊರಡಬೇಕಾಯ್ತು. ನಂ ರಿಷಿ ರಾತ್ರಿ ಬಹಳಾ ಹೊತ್ತು ತಂಗಿಯ (ನನ್ನಕ್ಕನ ಮಗಳು ) ಜೊತೆ ಆಟ. ತನ್ನ ಉಡುಪು ಅವಳಿಗೆ- ಅವಳ ಉಡುಪು ತಾನು ಹಾಕಿಕೊಂಡು, ಒಟ್ಟಿಗೇ ಊಟ ಮಾಡಿ, ಹಾಲು ಕುಡಿದು ಮಾತಾಡ್ತಾ ಇಬ್ರೂ ಜೊತೆಯಲ್ಲೇ ಮಲಗಿದರು. ಬೆಳಗ್ಗೆ ಕಣ್ಣು ಬಿಟ್ಟಿರಲಿಲ್ಲ, ಹಾಗೇ ಎತ್ತಿಕೊಂಡು ಬಂದು ಕಾರ್ ನಲ್ಲಿ ಮಲಗಿಸಿಕೊಂಡು ಹೊರಟ್ವಿ. ಅವನ ತಂಗಿ, ಮಲಗಿದಾಗ ಹೊಚ್ಚಿಕೊಂಡ ಒಂದು ತೆಳು ಹೊದಿಕೆಯನ್ನು ಕಾರ್ನಲ್ಲಿ ಮಲಗಿದ ಅಣ್ಣನಿಗೆ ಕೊಡ್ತು. ಕಣ್ಣು ಬಿಟ್ಟಾಗ ಬೆಂಗಳೂರು. ಹಿಂದಿನ ದಿನದ ಮಜಾ ನೆನಪಾದರೂ, ತಂಗಿಯನ್ನು ಬಿಟ್ಟು ಬಂದ ಬೇಸರ ಆದ್ರೂ ....ಅವಳು ಕೊಟ್ಟ ಹೊದಿಕೆ ಆ ಕ್ಷಣಕ್ಕೆ ಖುಷಿ ಅನಿಸ್ತು. ಮನೆಗೆ ಬಂದು ಇಷ್ಟು ದಿನಗಳಾದರೂ ದಿನಾ ಈಗ ಅವನ ಹೊದಿಕೆ ಬೇಡಾ, ತಂಗಿ ಕೊಟ್ಟಿದ್ದನ್ನೇ ಹೊಚ್ಚಿಕೊಂಡು ನಿದ್ರೆ ಮಾಡ್ತಾನೆ. ಎಂತಹಾ ಸೆಂಟಿಮೆಂಟ್ ಅಲ್ವಾ ? ಈ ನಿಷ್ಕಲ್ಮಶ ಪ್ರೀತಿ ನೋಡಿ ಕಣ್ ತುಂಬಿ ಬಂತು. ದೊಡ್ಡವರಾದಂತೆ .......ಈ ಮುಗ್ಧತೆ ....ಪ್ರೀತಿ ಯಾವತ್ತೂ ಕಳೆದುಹೋಗಬಾರ್ದೂ ಅಲ್ವಾ ?
Photo: ಮೊನ್ನೆಯೊಮ್ಮೆ  ನಾನು ನನ್ನವ, ಮಗನೊಂದಿಗೆ ಅಮ್ಮನ ಮನೆಗೆ ಹೋಗಿ ರಾತ್ರಿ ಉಳಿದು, ಬೆಳಗ್ಗೆ ಬೇಗ ಹೊರಡಬೇಕಾಯ್ತು. ನಂ ರಿಷಿ ರಾತ್ರಿ ಬಹಳಾ ಹೊತ್ತು ತಂಗಿಯ (ನನ್ನಕ್ಕನ ಮಗಳು ) ಜೊತೆ ಆಟ. ತನ್ನ ಉಡುಪು ಅವಳಿಗೆ- ಅವಳ ಉಡುಪು ತಾನು ಹಾಕಿಕೊಂಡು, ಒಟ್ಟಿಗೇ ಊಟ ಮಾಡಿ, ಹಾಲು ಕುಡಿದು ಮಾತಾಡ್ತಾ ಇಬ್ರೂ ಜೊತೆಯಲ್ಲೇ ಮಲಗಿದರು. ಬೆಳಗ್ಗೆ ಕಣ್ಣು ಬಿಟ್ಟಿರಲಿಲ್ಲ, ಹಾಗೇ ಎತ್ತಿಕೊಂಡು ಬಂದು ಕಾರ್ ನಲ್ಲಿ ಮಲಗಿಸಿಕೊಂಡು ಹೊರಟ್ವಿ. ಅವನ ತಂಗಿ, ಮಲಗಿದಾಗ ಹೊಚ್ಚಿಕೊಂಡ ಒಂದು ತೆಳು ಹೊದಿಕೆಯನ್ನು ಕಾರ್ನಲ್ಲಿ ಮಲಗಿದ ಅಣ್ಣನಿಗೆ ಕೊಡ್ತು. ಕಣ್ಣು ಬಿಟ್ಟಾಗ ಬೆಂಗಳೂರು. ಹಿಂದಿನ ದಿನದ ಮಜಾ ನೆನಪಾದರೂ, ತಂಗಿಯನ್ನು ಬಿಟ್ಟು ಬಂದ ಬೇಸರ ಆದ್ರೂ ....ಅವಳು ಕೊಟ್ಟ ಹೊದಿಕೆ ಆ  ಕ್ಷಣಕ್ಕೆ ಖುಷಿ ಅನಿಸ್ತು. ಮನೆಗೆ ಬಂದು ಇಷ್ಟು ದಿನಗಳಾದರೂ  ದಿನಾ  ಈಗ ಅವನ ಹೊದಿಕೆ ಬೇಡಾ, ತಂಗಿ ಕೊಟ್ಟಿದ್ದನ್ನೇ  ಹೊಚ್ಚಿಕೊಂಡು ನಿದ್ರೆ ಮಾಡ್ತಾನೆ.  ಎಂತಹಾ ಸೆಂಟಿಮೆಂಟ್ ಅಲ್ವಾ ? ಈ ನಿಷ್ಕಲ್ಮಶ  ಪ್ರೀತಿ  ನೋಡಿ ಕಣ್ ತುಂಬಿ ಬಂತು. ದೊಡ್ಡವರಾದಂತೆ .......ಈ ಮುಗ್ಧತೆ ....ಪ್ರೀತಿ  ಯಾವತ್ತೂ ಕಳೆದುಹೋಗಬಾರ್ದೂ ಅಲ್ವಾ ?
ಬಹುಷಃ ಮಕ್ಕಳ ಪ್ರಶ್ನೆಗಳಿಗೆ ನಾವು ಸುಳ್ಳು ಹೇಳಬೇಕಾದ ಅಥವಾ ಬೆಬ್ಬೆಬ್ಬೇ ಅನ್ನೋ ಪ್ರಸಂಗಗಳು ಜಾಸ್ತಿ ಅಲ್ವಾ ?
ನನ್ ಮಗನಿಗೆ ಪೂಜೆ ಮಾಡುವುದು , ಶ್ಲೋಕ ಹೇಳೋದು ತುಂಬಾ ಇಷ್ಟವಾದ ಕೆಲಸ. ನೈವೇದ್ಯಕ್ಕೆ ಬಾಳೆಹಣ್ಣು ಇಟ್ರೆ, ಪೂಜೆಯಾದ್ಮೇಲೆ ಡ್ಯಾಡೀ ಈಗ ಗಾಡ್ ಪೆರ್ಮಿಶನ್ ಕೊಡ್ತಾ ಬನಾನಾ ತಿನ್ನೋಕೆ ? ತಗೊಲ್ಲಲಾ ಅಂತಾ ತಗೊಂಡು, ಬಂದರ್ ಖೇಲಾ ತಿನ್ತಿದೆ ಅಂತಾ ಖುಷಿಯಾಗುವ ಮಗ.
ನೀನು ಪಂಚೆ ಉಟ್ಟ ಹಾಗೆ ನನಗೆ ಟವೆಲ್ ಉಡಿಸು ಎಂದು ಅಪ್ಪನೊಂದಿಗೆ ಪೂಜೆಗೆ ತಾನೂ ರೆಡಿ ಆಗ್ತಾನೆ.
ಇಂದು---
ಇದು ಸ್ವೋರ್ಡ್ ಪುರಾನಾ ಜಮಾನದ್ದಾ ಡ್ಯಾಡೀ ಅಂದ ಮಗ.
ಹೌದು ನಂ ತಾತನದ್ದು ಅಂದ್ರು ಅಪ್ಪ.
(ಚಿತ್ರದಲ್ಲಿರೋ ಕತ್ತಿ-ಬೆತ್ತ ನೋಡಿ, ಇದು ಲೋಕಿಯವರ ತಾತನ ಅಸೆಟ್, ನಮ್ಮನೆಯಲ್ಲಿ ದಿನವೂ ಪೂಜಿಸಲ್ಪಡುತ್ತೆ. ತಾತ ಇದನ್ನು ಉಪಯೋಗಿಸುತಿದ್ರು, ಇವರ ಕುಟುಂಬಕ್ಕೆ 'ಗಣಮಗಜ್ಜನ ಮನೆಯವರು ' ಅಂತಾನೆ ಕರೆಯೋದು. ವಿಶೇಷವಾದ ಗೌರವ , ನಂಬಿಕೆ , ಭಕ್ತಿ ಅದರ ಮೇಲೆ.ಒಂದು ದಿನವೂ ಪೂಜೆ ತಪ್ಪಿಸದೇ, ಹಣ್ಣು -ಕಾಯಿ ನೈವೇದ್ಯ ಇರಿಸಿ, ವಿಶೇಷ ದಿನಗಳಲ್ಲಿ ಬೆಲ್ಲದನ್ನ ಇರಿಸಿ ಪೂಜಿಸುವುದು ಪದ್ಧತಿ. )
ಇದನ್ನು ನಿಂಗೆ ಕೊಟ್ರಾ ? ಅಂದ ಮಗ .
ಮಾತಿಲ್ಲ .....
ಈ ಲಕಡೀ ಯಾರದು ?ಅಜ್ಜಿದಾ ? ಮಗ ಕೇಳಿದ.
ನಗೂ ಬರೋಕೆ ಶುರುವಾಯ್ತು ನಮಗೆ.
ಹ್ಮಂ ಡ್ಯಾಡೀ ಅಜ್ಜಿ ಲಕಡೀ ಹಿಡಿದುಕೊಂಡಾಗ ತಾತ ಸ್ವೋರ್ಡ್ ಹಿಡ್ಕೊತಿದ್ರು ತಾನೇ ? ಎಂದ .
ಅವನು ಹೇಳಿದ ಹಾಗೆ ಕಲ್ಪಿಸಿಕೊಂಡರೆ ......ಅಯ್ಯೋ ......
ಏನ್ ಹೇಳಬೇಕೂ ಅಪ್ಪ ?
ನಾವಿಬ್ರೂ ನಗ್ತಾನೆ ಇದ್ವಿ.
ಮಗಾ ಮಾತ್ರ ಆರಾಮಾಗಿ ಪೂಜೆ ಮುಗಿಸಿ , ಟವೆಲ್ ಉದುರಿಸಿ ಬಾಳೆಹಣ್ಣು ಮೆದ್ದ.

Photo: ಬಹುಷಃ ಮಕ್ಕಳ  ಪ್ರಶ್ನೆಗಳಿಗೆ ನಾವು ಸುಳ್ಳು ಹೇಳಬೇಕಾದ ಅಥವಾ  ಬೆಬ್ಬೆಬ್ಬೇ ಅನ್ನೋ ಪ್ರಸಂಗಗಳು ಜಾಸ್ತಿ ಅಲ್ವಾ ? 

ನನ್ನ ಕೊಲ್ಲಲು
ಯಾವುದೇ ಆಯುಧ ಬೇಕಿಲ್ಲ 
ನಿನ್ನ ನಿರ್ಲಕ್ಷ್ಯವೊಂದೇ ಸಾಕು.
ಮಳೆ ನಿಂತರೂ
ತೊಟ್ಟಿಕ್ಕುವ ಹನಿಗಳು ......
ನಿನ್ನ ನೆನಪುಗಳು
 — 
ಸಾಯುತ್ತಿರುವಾಗ 
ದೊರೆತು.....
ಜೀವವಿತ್ತ 
ಸಂಜೀವಿನಿ......
'ನಿನ್ನೊಲವು'.
ನಿಶ್ಯಬ್ದ ಮನದಲ್ಲಿ 
ಪ್ರಚಂಡ ಬಿರುಗಾಳಿ
ಅಲೆಯಂತೀಗ ತುಯ್ದಾಟ-
ದ ಬದುಕು
ಒಲವೇ .....
ನೀನೇಕೆ ಮೌನವಾಗಿರುವೇ
ನಿನ್ನನ್ನು ನೆನೆದಷ್ಟು 
ದೇವರನ್ನು ನೆನೆದಿದ್ದರೇ...
ಆ ದೇವರೇ ಪ್ರತ್ಯಕ್ಷನಾಗಿ 
ನಿನ್ನನ್ನೇ ಕೊಟ್ಟುಬಿಡುತ್ತಿದ್ದನೇನೋ !!!!!
ನಾವು ಚಿಕ್ಕಂದಿನಲ್ಲಿ ಏನು ಖುಷಿ ಅನುಭವಿಸಿರಲ್ವೋ ಅದನ್ನು ನಮ್ಮ ಮಕ್ಕಳು ಅನುಭವಿಸುವಾಗ ನಾವು ಖುಷಿಯಾಗ್ತೇವೆ ಅಲ್ವಾ ? ಹಾಗಾಗಿಯೇ ನನಗೂ , ನನ್ನವನಿಗೂ ಮಕ್ಕಳು ಏನ್ ಕೇಳಿದರೂ ಕೊಡಿಸಿ ಅವರನ್ನು ನೋಡೋದು ಇಷ್ಟ . ಸರೀ ಕಳೆದೊಂದು ಭಾನುವಾರ ಮಗಳನ್ನು ಕಾಲೇಜ್ ಗೆ ಸೇರಿಸಿ ಅವಳಿಗಾಗಿ ಹೊಸಾ ಬಟ್ಟೆ ತರಲು ಹೊರಟ್ವಿ. 
ಡ್ಯಾಡೀ ಮೊದಲು ನನಗೊಂದು ಎಚ್ಪಿ ಪ್ರಿಂಟರ್ ಮತ್ತೆ ಒಂದು ಟ್ರೈ ಪಾಡ್ ಕೊಡಿಸಿಬಿಡೂ ಅಂದ ಮಗರಾಯ. ನಿಂಗೆ ಆಗದಿದ್ರೆ ಹೇಳು ಡ್ಯಾಡಿ ನಾನು ಗೂಗಲ್ ಡಾಟ್ ಕಾಂ ನಲ್ಲಿ ಆರ್ಡೆರ್ ಮಾಡ್ತೀನಿ ಅಂದ .
ರೀ ಇವ್ನು ಓ .ಎಲ್. ಎಕ್ಷ ನಲ್ಲಿ ನಮ್ಮನ್ನೇ ಮಾರ್ತಾನೆ ಅಂತಾ ನಕ್ಕೆ .
ಅದೆಲ್ಲಾ ಆಗೋಲ್ಲ ಮೊದಲು ನನ್ನ ಶಾಪಿಂಗ್ ಅಂದ್ಲು ಮಗಳು .
ಹೋಗ್ಲೀ ಒಂದು ಕೇಜ್ ಕೊಡಿಸೂ ಪ್ಲೀಸ್ ಅಂದ .
ಯಾಕೋ ?ಮಗಳು ಕೇಳಿದಳು .
ಬರ್ಡ್ಸ್ ಇಡೋಕೆ ಮಗನ ಉತ್ತರ .
ಹಕ್ಕಿ ಕಕ್ಕ ಮಾಡುತ್ತೆ ಗಲೀಜು ಮನೆಯೊಳಗೆ ಬೇಡಾ ಅಂದ್ಲು ಮಗಳು .
ಡೋಂಟ್ ವರೀ ಅಕ್ಕ ಒಂದು ಪಪ್ಪಿ ತರೋನಾ ಅಂದ .
ಪಪ್ಪೀ ಗೆ ಯಾರೋ ಸೂಸು , ಕಕ್ಕ ಮಾಡ್ಸೋಕೆ ಕರ್ಕೊಂಡು ಹೋಗೋದು ?
ನಾನು  ಮಗನ ಉವಾಚ.
ನಿನ್ ಕುಂಡೆ ಯಾರೋ ತೊಳೆಯೋದು ?
ಅಮ್ಮ-- ಮಗ ಅಂದ.
ಲೇಯ್ ಮೊದ್ಲು ನಿಂದು ನೀ ತೊಳೆದುಕೋ ಅಷ್ಟು ದೊಡ್ಡವನಾದಮೇಲೆ ತರಾನಾ ಅಂದಳು .
ಮಕ್ಕಳಿಗೆ ಎಷ್ಟು ಆಟದ ಸಾಮಾನು ಇದ್ದರೂ ಸಾಲದು ಎಲ್ಲವೂ ನಾಲ್ಕು ದಿನದ ಖುಷಿ ಹೊಸದೊಂದು ಬರುವವರೆಗೆ ಅಷ್ಟೇ . ಆಡೋಕೆ ಮಕ್ಕಳ ಜೊತೆ ಮಕ್ಕಳು ಇದ್ದರೆ ಸಾಕು ಕಲ್ಲು ಮಣ್ಣು ಮರದ ತುಂಡು ಏನೋ ಒಂದರ ಜೊತೆ ಆಡಿಕೊಳ್ಳು ತ್ತವೆ ಅಲ್ವಾ ?ಆದರೇ ......
ನಾನು ಇದಕ್ಕಿಂತಾ ಭಿನ್ನವಲ್ಲ .
ಮೊನ್ನೆಯೊಮ್ಮೆ ಮದ್ಯಾಹ್ನ ನನ್ನವನಿಗೆ ಫೋನ್ ಮಾಡಿದೆ .
ಯಾಕೋ ಫೋನ್ ತೆಗೆಯಲಿಲ್ಲ 
ನಂತರ ರಿಸಿವ್ ಮಾಡಿದಾಗ ಕೋಪ ಬಂದಾಗಿತ್ತು .
ಬೇಜಾರ ಆದಾಗ ಮಾತಾಡು ನನ್ ಜೊತೆ ಅಂದವ ನೀನಾ ? ಎಲ್ಲಿದೀಯಾ ಬಂದು ಬಿಡು ಬೇಜಾರ್ ಆಗ್ತಿದೆ ಅಂದೆ.
ಕೆಲಸ ಇದೆಯೇ ಅಂದ .
ಬಾ ನೀನು ಅಡುಗೆ ಮಾಡೋಲ್ಲ ನನ್ನ ಮುನಿಸು .
ನಂದು ನೆರವಿನಲಿ ಊಟಾ ಆಗಿದೆ , ಮಕ್ಕಳಿಗೆ ನಿಂಗೆ ಪಿಜ್ಜಾ ತರ್ತೇನೆ , ಅದುವರೆಗು.... ಅಯ್ಯೋ ಎಫ್ ಬಿ ಗೆ ಹೋಗಿ , ಒಂದು ಕಿತ್ ಹೋಗಿರೋ ಕವನ ಹಾಕೆ ಒಂದಷ್ಟು ಲೈಕ್ಸು ಕಾಮೆಂಟ್ಸ್ ಬರುತ್ತೆ ಅಂದು ನಕ್ಕು ಬಿಟ್ಟ.
ಬೆಚ್ಚನೆಯ ಮನೆಯಿರಲು ,
ಮುಚ್ಚಟೆಗೆ ಮುದ್ದು ಮಕ್ಕಳಿರಲು ,
ಇಚ್ಚೆಯನರಿತು ನಡೆವ (:-p ) ಪತಿಯಿರಲು ,
ಇನ್ನೇನು ಎ. ಸಿ ೧೮ ಕ್ಕೆ ಇರಿಸಿ ಮಲಗಿದೆ .
ಸಂತೋಷವನ್ನು ಹುಡುಕ್ತಾನೆ ಇರ್ತೇವೆ 
ಇದೊಂದು ಕಿರು ಕಥೆ ಅಂತ ಓದಿ: -)) 
ಕೆಲವೊಂದು ಸ್ವಭಾವ ಬದಲಾಗೋದೇ ಇಲ್ಲ . 
ನನಗೆ ಪ್ರಾಮುಖ್ಯತೆ ಇರದೆಡೆಗೆ ನಾ ಹೋಗೋಲ್ಲ . ಖುಷಿ ಬೇಕು ನನಗೆ , ಖುಷಿ ಸಿಗುವ ತಾಣ ಇರದಿದ್ರೆ ನಾನಲ್ಲಿ ಸೃಷ್ಟಿಸಿಕೊಳ್ಳುತ್ತೇನೆ . ಸೀಮಿತ ವಲಯದಲ್ಲಿ ನಾ ಸುಮ್ಮನಿದ್ದುಬಿಡುವೆ . ನನ್ನ ಪ್ರೀತಿಯ ವ್ಯಕ್ತಿಗಳ ಸ್ವಲ್ಪ ನಿರ್ಲಕ್ಷ್ಯವೂ ಸಹಿಸದ ನಾನು ಮೆತ್ತೆಗೆ ದೂರ ಸರಿದುಬಿಡ್ತೇನೆ . 
ಇದು ಹಾಗಿದ್ದೂ ಹಾಗೆ ...... 
ಅವನು ಗೆಳೆಯ ಅಂದ್ರೆ ಗೆಳೆಯ ಅಷ್ಟೇ .... ಆ ತರಾ ಈ ತರಾ ಅಂತಿಲ್ಲ . ನಂ ಸೆಕ್ಷನ್ ನಲ್ಲಿದ್ದದ್ದು ೯ ಜನ ಹುಡುಗಿಯರು ,
ಜೊತೆಗೆ ೩೫ ಹುಡುಗರು . ಅನಿವಾರ್ಯವಾಗಿ ಹುಡುಗರನ್ನೂ ಫ್ರೆಂಡ್ ಮಾಡ್ಕೊಬೇಕು ತಾನೇ ? ನನ್ನ ಉದ್ದ ಜಡೆಗೆ ಮುಡಿಯಲು ,ದಿನವೂ ಬೆಳಗ್ಗೆ ಒಂದು ರೋಜ್ ತಂದು ಡೆಸ್ಕ್ ಮೇಲಿಡುವ ಅವನು ಯಾವತ್ತೂ ಐ ಲವ್ ಯು ಅನ್ನಲಿಲ್ಲ . ಉದ್ದ ಜಡೆ , ಗುಂಡು ಮೊಗದಲ್ಲಿ ದೊಡ್ಡ ಕಣ್ಣು, ಮೆಲು ಮಾತು,
ಕುಳ್ಳ ಪುಟ್ಟ ಹುಡುಗಿ ನಾನು , ಎಷ್ಟೋ ಜನ ಚೆಂದ ನೀನೂ ಅಂದ್ರೂ ನನಗೆ ನಮ್ಬಿಕೆಯೇನೂ ಇರಲಿಲ್ಲ . ಹಾಗಾಗಿ ನಾನು ಲವ್ ಅಂತಾ ತಲೆಕೆಡಿಸಿ ಕೊಳ್ಳೋಕೆ ಹೋಗಲಿಲ್ಲಾ ಅನಿಸುತ್ತೆ  ಬಹುಷಃ ಅವನು ನಿರೀಕ್ಷಿಸಿದ್ದನಾ ?
ಅವನೊಂದಿಗೆ ನಾ ಚರ್ಚ್ ,ನನ್ನೊಂದಿಗೆ ಅವನು ದೇವಸ್ಥಾನಕ್ಕೆ , ಹಬ್ಬ ಅಂತಾ ಇಬ್ರೂ ಮನೆಗೆ ಕರೆಯೊದಾಗಲೀ , ನಮಗಿಷ್ಟವಾದ ಐಸ್ ಕ್ರೀಮ್ ತಿನ್ನೋಕೆ , ಪಿಚ್ಚರ್ ಗೆ ಅಂತಾ ಸುತ್ತಾಡಿದ್ದನ್ತೂ ಸುಳ್ಳಲ್ಲ .
ಜೆಲಸ್ ಬರಲೀ ಅಂತಾ ಹೀಗ್ಮಾಡಿದನಾ ?ನನಗೆ ಹಾಗನಿಸ್ತಾ ? ಅವನೇ ಹಾಗ ಮಾಡಿದನಾ ?ಬೇರೊಂದು ಹುಡುಗಿ ಸ್ನೇಹ ಅವನ ಜೊತೆ ಅತೀ ಅನಿಸ್ತು . ನನಗೆ ಹೊಟ್ಟೆಕಿಚ್ಚು ಅಂತಾ ಒಪ್ಪಲ್ಲ . ಸ್ವಲ್ಪ ನೋವಾಗಿದ್ದು ನಿಜಾ . ದೂರ ಸರಿದಿದ್ದು ಗೊತ್ತಾಗಲಿಲ್ಲ .
ಎಲೆಕ್ಷನ್ ನಿಲ್ಲುವ ವೇಳೆ ಬಂತು , ಇವನೂ ನಿಂತ ,ಸುಜಾತಾ ವೋಟು ನನಗೆ , ಕೇಳೋದೇನಿರುತ್ತೆ ನನ್ನಲ್ಲಿ ಅಂತಾ ಕೇಳಲಿಲ್ಲ . ಒಳವಳಗೆ ಇದ್ದ ಕೋಪ , ನಾನೂ ನನ್ನ ಜೊತೆಗಾತಿ ಇಬ್ರೂ ಅವನಿಗೆ ವೋಟು ಹಾಕಲಿಲ್ಲ . ಎರಡೇ ವೋಟಿಂದ ಸೋತು ಅವನು ಲೀಡರ್ ಆಗಲಿಲ್ಲ . ಜಾಣ ಅವನು ಯಾರು ಯಾರು ವೋಟು ಹಾಕಿದಾರೆ ಅಂತಾ lecturer ಹತ್ರಾ ಚೀಟಿ ತೆಗೆಸಿ ನೋಡಿದ . handwriting ನಿಂದಾ ಅದು ನಾವೇ ಅನ್ನೋದು ಸ್ಪಷ್ಟವಾಯ್ತು . ಈ ಆಘಾತ ಅವನು ನಿರೀಕ್ಷಿಸಿರಲಿಲ್ಲ , ಅವನ ಕನಸನ್ನು ಮುರಿದಿದಿದ್ದು ನಾನು ಅಂತಾ ಬೇಜಾರ್ ಮಾಡಿಕೊಂಡು ದೂರಾದ .
ಸಂಬಂಧ ಮುರಿದುಹೊಯ್ತು .
ಓದಿನ ದಿನಗಳು ಮುಗಿದ ಮೇಲೆ ಎಷ್ಟೋ ವರುಷಗಳ ನಂತರ ಸಂಪರ್ಕಕ್ಕೆ ಬಂದೆ . ಆಗ .......
skype ನಲ್ಲಿ ..... ಈಗ ವಿದೇಶದಲ್ಲಿ ದೊಡ್ಡ ಹುದ್ದೆ, ನೋಡೇ ಇದು ನನ್ನ ಮನೆ ,ಇದು ನನ್ನ ಕಾರ್ ,ಕಾರ್ ನಲ್ಲಿ ಹೋಗ್ತಾ ..ಮಾತಾಡ್ತಾ ..ರಸ್ತೆಗಳ ತೋರಿಸ್ತಾ , ಮೇಲೆ ಹಾರಿದ ವಿಮಾನನೂ ತೋರಿಸ್ತಾ , ಏರ್ ಪೋರ್ಟ್ ವರೆಗೂ ಮಾತು ..... ಬಂದುಬಿಡೇ ವಿಸಿಟರ್ಸ್ ವೀಸ ಕಳಿಸ್ತೇನೆ ಎಂದ .
ನೀನು ದೂರವಾಗಿದ್ದರೂ ನಾ ಚೆಂದ ಇದ್ದೇನೆ ಅಂತಾ ತೋರಿಸಬೇಕಿತ್ತೇನೋ !!!!!
ನೀ ಹೇಗಿದ್ದೀ ? ಎಂದ . ನಾನೂ ಸಹಾ .....
ಬಯಸಿದರೆ ಆಗಸದಲ್ಲಿನ ತಾರೆಗಳನ್ನೇ ತರುವೆ ಎನ್ನುವ , ಏಕೆ ಹೀಗೆ ಮಾಡಿದೆ ಎಂದು ಎಂದೂ ಪ್ರಶ್ನಿಸಿದ , ನನ್ನೆಲ್ಲಾ ಭಾವನೆಗಳನ್ನು ಗೌರವಿಸುವ ನನ್ನನ್ನು ಪ್ರ್ರಿತಿಸಿ ಮದುವೆಯಾದ ನನ್ನವನ ತೋಳುಗಳಲ್ಲಿ , ಮುದ್ದು ಎರಡು ಮಕ್ಕಳೊಂದಿಗೆ ಬೆಚ್ಚಗೆ ಇದ್ದೇನೆ ಎಂದು ನಕ್ಕೆ 
ಏನಿದೆಯೋ ..... ಇಲ್ಲವೋ ..... ಎಲ್ಲಾದಕ್ಕಿನ್ತಲೂ...... ನನ್ನನ್ನು ನಾನು ಬದಲಾಯಿಸಿಕೊಳ್ಳದೆ ಬದುಕೋಕೆ ಸಾಧ್ಯವಾಗಿರೋದು ನೆಮ್ಮದಿನೆ 
ಇವತ್ತು ನನಗಿಷ್ಟವಾದ ಅಡಿಗೆ ಹೇಳಿಕೊಡ್ತೇನೆ: -)
ಎಲೆಕೋಸಿನ ಬೀಸುಗೊಜ್ಜು ---
ಬಾಣಲೆಗೆ ಸ್ವಲ್ಪ ಕೋಸಿನ ತುರಿ , ಒಣ /ಹಸಿ ಮೆಣಸಿನಕಾಯಿ , ಹೆಚ್ಚಿದ ಒಂದು ಟೊಮ್ಯಾಟೋ ಇವಿಷ್ಟನ್ನು ೧ ಚಮಚೆ ಎಣ್ಣೆಯೊಡನೆ ಹಾಕಿ ಹಸಿ ವಾಸನೆ ಹೋಗುವವರೆಗೆ ಹುರಿಯಬೇಕು . ಅದಕ್ಕೆ ಸ್ವಲ್ಪ ಕಾಯಿತುರಿ ,ರುಚಿಗೆ ತಕ್ಕಷ್ಟು ಉಪ್ಪು ಬೆರೆಸಿ ರುಬ್ಬಬೇಕು . ರುಬ್ಬಿದ ಮಿಶ್ರಣಕ್ಕೆ , ಸಾಸಿವೆ ,ಉದ್ದಿನಬೇಳೆ, ಕಡಲೆಬೇಳೆ, ಕರಿಬೇವು , ಇಂಗು ಒಗ್ಗರಣೆ ಹಾಕಿದರೆ ಚೆಂದ ಆಗುತ್ತೆ . ಇದನ್ನು ಬಿಸಿ ಅನ್ನದ ಜೊತೆ ತುಸು ಕೊಬ್ಬರಿ ಎಣ್ಣೆ ಬೆರೆಸಿಕೊಂಡು ತಿನ್ನೋಕೆ ಮಜಾ  ಇದೆ ತರಹ ಕೋಸಿನ ಬದಲಾಗಿ ಹೆಚ್ಚಿದ ತೊಂಡೆಕಾಯಿ, ಜೊತೆಗೆ tomato ಬದಲಾಗಿ ಹುಣಿಸೇಹಣ್ಣು ಹಾಕಿ ರುಬ್ಬಿದರೆ ಅದೂ ಒಂದು ತರಹಾ ರುಚೀ ಇರುತ್ತೆ . ಇದಕ್ಕೆ ಬೀಸುಗೊಜ್ಜು ಅಂತಾರೆ  
ನಿಜವಾಗಲೂ ಚೆನಾಗಿರುತ್ತೆ, ಮಾಡಿ ನೋಡಿ.
ನನಗರಿವಿದೆ ...
ನಾ ನಿನ್ನ ಪ್ರೀತಿಸಿದರೇ ....
ರಾಧೆಯ ವಿರಹವನೇ ಅಪ್ಪಿಕೊಳ್ಳಬೇಕೆಂದು
ಆದರೇ......
ಹೇಳು 
ಪ್ರೀತಿಸುವ ಸುಖದಿಂದ 
ನಾನೇಕೆ ವಂಚಿತಳಾಗಲೀ?