ನನಗೆ ಬರೀ ೮೦೦ ಜನ ಫ್ರೆದ್ಸ್ ಇದ್ದರೇ, ಅವಳಿಗೋ ೩,೮೦೦ ಜನ ಫ್ರೆಂಡ್ಸ್. ನನಗೂ ಆಕೆಗೂ ೩೦೭ ಜನ ಮ್ಯೂಚುವಲ್ ಫ್ರೆಂಡ್ಸ್. ಆಕೆಯ ಪ್ರಬುದ್ದ ಬರಹಗಳ ಅಭಿಮಾನಿ ನಾನು. ಬೇರೆಯವರ ಪೋಸ್ಟ್ ಗೆ ನಾ ಹಾಕಿದ ಕಾಮೆಂಟ್ ನ ಅವಳು ಲೈಕ್ ಮಾಡ್ತಾಳೆ. ಆದರೂ ನಾವಿಬ್ರೂ ಫ್ರೆಂಡ್ಸ್ ಅಲ್ಲ ಹೀಗೊಂದು ಸುಂದರ ಸಂಬಂಧ (!)
ಇವತ್ತು ಆಧಾರ ಕಾರ್ಡ್ ಮಾಡಿಸೋಕೆ ೨ ಗಂಟೆಗಳ ಕಾಲ ಕ್ಯೂ ನಲ್ಲಿ ಇರಬೇಕಾಯ್ತು. ಪಕ್ಕದಲ್ಲಿ ಎರಡು ಸಣ್ಣ ಮಕ್ಕಳ ತಾಯಿ. ನಮ್ಮ ಸರದಿ ಬರೋ ತನಕ ಹರಟಿದೆವು. ಭಾಗ್ಯ ಲಕ್ಷ್ಮೀ ಯೋಜನೆ ಬಗ್ಗೆ, ಆಧಾರ ಕಾರ್ಡ್ ಯಾಕೆ ಮಾಡೋದು ಅಂತಾ, ಹೆಣ್ಣು ಮಕ್ಕಳು ಮತ್ತು ಗಂಡು ಮಕ್ಕಳ ಸ್ವಭಾವ, ವರ್ತನೆ ಹೇಗೆ ಇರುತ್ತೆ ಅಂತಾ. ಅಷ್ಟು ಅಲ್ಪ ಸಮಯದಲ್ಲೇ ನನ್ನ 'ಅಕ್ಕ ' ಎಂದು ಕರೆದು ಹತ್ತಿರ ಅನಿಸಿದಳು. ಅವಳ್ಯಾರೋ! ನಾನ್ಯಾರೋ! ವಯ್ಯುಕ್ತಿಕ ಪ್ರಶ್ನೆಗಳೇ ಇರಲಿಲ್ಲ. ನಮ್ಮಿಬ್ಬರ ಮಕ್ಕಳು ಆಟ ಆಡ್ತಾ ಇದ್ವು. ಸಮಯ ಮುಗೀತಿತ್ತು, ನನಗೆ ಕೊನೇ, ಇನ್ಯಾರಿಗೂ ಕಾರ್ಡ್ ಮಾಡೋಲ್ಲ ಅಂದ್ರು. ನನ್ನ ನೆಕ್ಸ್ಟ್ ಅವಳು, ಪಾಪ ಎರಡು ಮಕ್ಕಳ ತಾಯಿ. ಅವಳ ಕೈ ಅದ್ಮಿದೆ, ಇರೂ ಎಂದೆ. ನನ್ನ ಕಾರ್ಡ್ ಮಾಹಿತಿ ಆಗುವವರೆಗೂ ಕಂಪ್ಯೂಟರ್ ಮುಂದೆ ಕುಳಿತ ಸಿಬ್ಬಂದಿಯನ್ನು ರೇಗಿಸ್ತಾ , ನಗಿಸ್ತಾ ನಾನು ನನ್ನವ ಫ್ರೆಂಡ್ ಮಾಡ್ಕೊಂಡಾಗಿತ್ತು. ನಯವಾಗಿ, ಈಕೆಗೆ ಮಾಡಿಕೊಡಿ ಪ್ಲೀಸ್ ಎಂದು ನಾ ರಿಕ್ವೆಸ್ಟ್ ಮಾಡಿದೆ. ಕೆಲಸ ಸುಗಮ ಇನ್ನೆಂದೂ ಸಿಗದ ಅವಳಿಗೆ ನಮ್ಮಿಬ್ಬರಲ್ಲಿ ಅದೇನೋ ಅಟ್ಯಾಚ್ಮೆಂಟ್ ಬೆಳೆದುಬಿಟ್ಟಿತ್ತು. ಬೈ ರೂಪಾ ಎಂದು ನಕ್ಕು ಬಂದೆ. ಅವಳ ಕಂಗಳಲ್ಲಿ ಕೃತಜ್ಞತೆ ಇತ್ತು.
ಸಂಬಂಧಗಳೇ ಹೀಗೆ ....... ಎಲ್ಲೋ ಇರುವ ನಾವು ಎಲ್ಲೋ ಸಿಗ್ತೇವೆ. ಒಂದಷ್ಟು ಸಮಯ ಜೊತೆ ಇರ್ತೇವೆ. ಅವರ ದಾರಿ ಅವರದು, ನಮಗೆ ನಮ್ಮದು. ಇದ್ದಷ್ಟು ಹೊತ್ತು ಚೆನ್ನಾಗಿದ್ರೆ ಸಾಕು