Wednesday, 27 January 2016

ವಿರಹದುರಿ ಕಾಡುವುದು ನನ್ನ
ಸನಿಹದಲಿ ನೀನಿಲ್ಲದಿರೆ....
ಬೆಂಗದಿರನ ತಾಪದಂತೆ,
ನಲ್ಲ ನಿನ್ನ ಸಿಹಿಮಾತುಗಳು
ಬೆಂದ ನನ್ನೆದೆಯ ತಣಿಸಿತು ...
ಚಂದ್ರಮನ ಶೀತಲದಂತೆ.
ನಿನ್ನ ಸವಿಮಾತಿಗೆ ಕಣ್ಣೀರಾದೆ ನಲ್ಲ !
ನಾಳೆಗಳೂ ಹೀಗೇ ಇರಲಿ
ಆ ಕನವರಿಕೆಯಲ್ಲೇ
ಕಣ್ ಮುಚ್ಚುವೆ ಈಗ.

See More
ಹುಟ್ಟಿದಾಗಲೇ ಸಾವಿನ ದಿನಾಂಕ ನಿಗದಿ ಮಾಡಿಕೊಂಡು ಹುಟ್ಟುತ್ತೇವೆ. ಇರೋದನ್ನು ಅನುಭವಿಸುತ್ತಾ...ಇದ್ದಷ್ಟೂ ಹೊತ್ತು... ಆದಷ್ಟೂ ಬೇರೆಯವರನ್ನು ಗೋಳು ಹೊಯ್ಕೊಳ್ಳದೇ ತಾವೂ ಖುಷಿ ಆಗಿರಬೇಕು.
ಸಾವು ನಿಗೂಢ. ಎಂತವರೇ ಆಗಲೀ....ಸಾವಿಗೆ ಅಸಾಹಾಯಕರಾಗಿ ಶರಣಾಗುವುದು ಅನಿವಾರ್ಯ. ಯಮ ಧರ್ಮರಾಜ ಯಾವಾಗ ನಮ್ಮೆಡೆಗೆ ನೋಡ್ತಾನೆಯೋ ಅರಿಯದ ನಾವು, ಮಕ್ಕಳೋ, ಸಣ್ಣ ವಯಸ್ಸಿನವರೋ ಮರಣಿಸಿದರೆ ಅಯ್ಯೋ ಎಂದು ಹಲುಬುತ್ತೀವಿ. ಆದರೆ ಜರ್ಜರಿತ ದೇಹದೊಡನೆ ಬದುಕಿರುವ ನಮ್ಮವರಿಗೇ, ಬಿಡುಗಡೆಯಾಗಲೀ ಅಂತಾ ಹೋಗಲಿ ಬಿಡೀ ಅಂದುಬಿಡ್ತೇವೆ.
ಹುಟ್ಟಿದವರೆಲ್ಲರೂ ಎಂದೆಂದಿಗೂ ಇದ್ದುಬಿಟ್ಟರೆ ಮುಂದೆ ಹು...ಟ್ಟುವವರಿಗೆ ಜಾಗವೆಲ್ಲಿ ? ಮರೆವು ಎಂಬ ಶಾಶ್ವತವಾದ ಮುಸುಕನ್ನು ಯಮನು ನಮ್ಮ ಮೇಲೆಳೆದುಬಿಡುತ್ತಾನೆ. ಒಳ್ಳೆಯದೋ ಕೆಟ್ಟದ್ದೋ ಯಾವ ಕೆಲಸವಾದರೂ ಅದರ ನೆನಪು ನಮಗೆ ಉಳಿಯುವುದಿಲ್ಲ. ನಮ್ಮ ಜೀವನಕಥೆ ಹೇಗೋ ಮುಗಿದುಹೋಗಿಬಿಡುತ್ತದೆ. ನಮ್ಮ ಜನ್ಮ ಕಳೆಯುತ್ತದೆ. ನಾವು ಮಾಡಿದ ಕೆಲಸಗಳ ನೆನಪು ಇರುವುದಿಲ್ಲ. ಇದು ಸಂತೋಷ ಪಡಬೇಕಾದ ವಿಷಯ.
ಸಾವಿನ ಬಗ್ಗೆ ಹೀಗೆ ಯೋಚಿಸಬಹುದು, ಆದರೆ ನಮ್ಮೊಡನೆ ಇದ್ದವರೊಬ್ಬರು ಇಲ್ಲವಾದಾಗ .....
ನೋವು ..........
ನೆನ್ನೆಯಿಂದ ಯಾಕೋ ' ಸಾವು' ಕಣ್ಮುಂದೆ ಸುಳಿದಾಡತೊಡಗಿದೆ.
ಸಾವು ಎಲ್ಲಾರಿಗೂ ಬರುತ್ತೆ, ಅದುವರೆಗೂ ಹೇಗೆ ಬದುಕಬೇಕು ಎಂದು ಯೋಚಿಸಿ smile emoticon


ನನ್ನ ಹೃದಯದ ಮಿಡಿತಕೆ ..
ನಿನ್ನ ಪ್ರೀತಿಯೇ ಉಸಿರು
ಸಮಯದ ಪರಿವೆಯಿರದೇ ...
ಸದಾ ಜನಿಸಿದೆ
ನಿನ್ನದೇ ಹೆಸರು.

ಏಕೋ ನೀನು ನೆನಪಾಗುತ್ತೀ ಕಣೋ
ಎನ್ನುವುದಿಲ್ಲ ನಾ...ನಿನ್ನ ಮರೆತಿದ್ದರೇ ತಾನೇ ?
ಹೌದು, ಒಮ್ಮೊಮ್ಮೆ ತುಂಬಾ ಬೇಕೆನಿಸುತ್ತೀ ...ತಪ್ಪೇನು
ನಾನು ನಿನ್ನವನೆಂದು ನೀನಿತ್ತ ಮಾತು ನೆನಪಿಸಲೇನೋ?


ಸೂರ್ಯನನ್ನೇ ಮರೆಮಾಚುವ ಕಾರ್ಮೋಡ
ಗವ್ವನೇ ಕವಿದ ಕತ್ತಲು.....
ಪ್ರಪಂಚವೇ ನಾಶವಾಯಿತೇನೋ
ಹೆದರಿಕೆ ಒಳಗೊಳಗೇ
ನಾಲ್ಕು ಗೋಡೆಗಳ ನಡುವೆ ನಾನು ಮತ್ತು ನಿಶ್ಯಬ್ಧ...
ನೀನು ಬೇಕೆನಿಸುವಾಗ. ...ನಿಟ್ಟುಸಿರು. ..ಉಹುಂ. ..
ಏನಾದರೂ ಆಗಲಿ ಎನ್ನುವ ನಿರ್ಲಿಪ್ತತೆ.
ಸಾಕು ಎಂದು ಪುಸ್ತಕವ ಮುಚ್ಚಿ ಎದ್ದೆ...
ಪುಟಗಳು ಪಟ ಪಟನೆ ತೆರೆಯುತೊಡಗಿದವು.
ಮುಗಿದಿಲ್ಲ ನಿಜಾ...ಹಿಂತಿರುಗಿ ಸುಮ್ಮನೆ ನಕ್ಕು ಬಿಟ್ಟೆ. ..
ಬದುಕೇ ನೀನು ಸುಂದರ ಎನ್ನುವ ಧೈರ್ಯವಿಲ್ಲ
ನಗುವಿನಲಿ ಏನಿತ್ತು? ಏನಿಲ್ಲ ? ಗೊತ್ತಿಲ್ಲ. ...

ಖಾಲಿ ಖಾಲಿ ಎನಿಸುತ್ತಿದೆ...
ಒಂದಷ್ಟು ಕನಸುಗಳು ದೊರೆತರೆ
ಸರಾಗ ಉಸಿರಾಟ, ಬದುಕು ನಿರಾಳ
ಚಣಕಾಲ ನೀ ಬರಬಾರದೇನೋ?


ತುಂತುರು ಮಳೆ. ...
ತಣ್ಣನೆಯ ಗಾಳಿ. ....
ನಿನ್ನ ತುಂಟಾಟದ ನೆನಪುಗಳು...
ಸಧ್ಯಕ್ಕೆ ಸಾಕು ಕಣೋ. ..
ಮುಂದಿನದು ಮುಂದುವರೆಸೋಣ.......
ನೀ ಬರುತ್ತೀಯಾ ಅಲ್ವೇನೋ?

ನೀನೆಷ್ಟು ದಿನ ದೂರ ಇದ್ದರೂ. ....
ನನ್ನೆಡೆಗೇ ಮರಳುತ್ತೀಯ ಬಲ್ಲೆ
ಆದರೇ.....
ನಿನ್ನಾಗಮನಕೆ-
ಕಾಯುವುದು ಕಷ್ಟ. .....
ನಿನ್ನ ಅಗಲಿಕೆಯ ವೇದನೆ ತೀವ್ರ ಕಣೋ
ಮರೆಯಬಹುದೇ ನಿನ್ನ ಚೆಂದದ ಮೊಗವ....
ಸುಂದರ ನಗುವ...
ಹೇಗೆ ಮರೆತೇನು ಹೇಳು?
ನೀನಿತ್ತ ಒಲವ.
ಬೆಸೆದ ಬೆರಳುಗಳ ಬಿಸಿ
ನೊಸಲ ಚುಂಬಿಸಿದ ಹಸಿ ಇನ್ನೂ ಇದೇ...
ಬಯಸಿ ಅದನೇ ....ಮನಸು ...
ಕಣ್ಣುಗಳು ತೇವ ಕಣೋ.


ಕೊನೆಯ ಮುತ್ತಿಟ್ಟು ಬಂದ ಮೇಲೆಯೂ....
ಅವಳು. ..
ಎಂದೂ ಬಾರದವನಿಗಾಗಿ...
ಚಂದದಿ ಅಲಂಕರಿಸಿಕೊಂಡು ಕಾಯುತ್ತಾಳೆ
ಹೌದು, ಅವಳು ಬದುಕಬೇಕು. .....
ಉಸಿರಿರುವವರೆಗೆ.
ಅವಳ ಬದುಕಿನ ಅಗತ್ಯವಿದೆ. ..
ಅವಳನ್ನು ಪ್ರೀತಿಸುವ ಹೃದಯಗಳಿಗೆ.
\

ಹೇಯ್ ನೋಡೋ ....
ಬಿಚ್ಚಿಟ್ಟ ಹೆರಳಲಿ ....
ನಿನ್ನ ಬೆರಳಾಡಿಸುವಿಕೆಯ ನೆನಪುಗಳದೇ ಘಮಲು
ಬಿಗಿದಿರಿಸಲು ಮನಸ್ಸೇ ಇಲ್ಲ ನನ್ನಲಿ
ಹೇಗೆ ಹಾರಾಡುತ್ತಿವೆ ನೋಡು ಈ ಮುಂಗುರುಳು ??...
ನಿನ್ನಂತೆಯೇ ....
ತುಂಟತನದಿ ಮುತ್ತಿಕ್ಕುತ್ತಿವೆ ಕಣೋ ... ಕೆನ್ನೆಗೆ ... ಹಣೆಗೆ
ಅವಕ್ಕೇಕೆ ನೀ ಅವಕಾಶವೀಯುವಿಯೋ ನಾ ಕಾಣೆ
ನೀನೇ ಬಂದೊಮ್ಮೆ ....
ಸರಿಸಬಾರದೇನೋ ????

ಬೇರೇನೂ ಯೋಚಿಸಲಾಗುತ್ತಿಲ್ಲ ಕಣೋ....
ಬರೀ....ನಿನ್ನ ನೆನಪುಗಳ ಕಾಟ
ಮನಸಿಗೆ....ನೀ ಬೇಕೆನ್ನುವ ಹಠ.
ಕಾಯುವುದು ಕಷ್ಟ. ...
ಆದರೇ. ..ಅನಿವಾರ್ಯ...
ಎಲ್ಲದಕ್ಕೂ ಕೊನಯಿದೆ...
ಕಾಯುವ ಸಹನೆ ನನಗಿದೆ....
ಸಹನೆ ಕೊನೆಯಾಗುವ ಮುನ್ನ ...
ಬರಬಾರದೇನೋ ???


ಕಾರ್ಮೋಡ ಬಾನಲ್ಲಿ ....
ಮಳೆ ಬರುವ ಹಾಗಿದೆ
ನನ್ನ ಮನಕೂ ಬೇಸರದ
ಮೋಡ ಮುಸುಕಿದೆ ನೀನಿರದೇ
...
ನನಗೂ ನಿನ್ನೊಡನೆ
ಮಳೆಯಲ್ಲಿ ನೆನೆಯುವಾಸೆ.
ನೆನೆದು ಮಳೆ ಹನಿಯಲಿ
ಚಳಿಯಲಿ ನಡುಗಿ ಬಿಗಿದಪ್ಪುವಾಸೆ
ತಡವಾಗಿಯಾದರೂ ನಲ್ಲಾ
ನೀ ಬರಬಾರದೇ ?
ನಿನ್ನೊಲವ ಜಡಿಮಳೆಯಂತೆ
ಸುರಿಸಬಾರದೇ ?






ನನ್ನೊಳಗೆ ಅವಿತ ತುಂಟತನ
ಹಣಕುವುವುದು ಆಗಾಗ. .
ನಿನ್ನ ಮುದ್ದು ಮೊಗ ಕಣ್ಮುಂದೆ ಬಂದಾಗ...
ನೀನು ಬೇಕೆನಿಸುವಾಗ...
ನೀ ಕೋಪಿಸಿದರೇ....?...
ತಪ್ಪು ನನ್ನದೇನಲ್ಲ ಹೋಗೋ.

ಮಳೆಯೆಂದರೇ...
ಗುಡುಗು -ಆರ್ಭಟ
ಮಿಂಚು -ಸೆಳೆತ
ಸಿಡಿಲ -ಹೊಡೆತ
ನೀರಿನ ಸುರಿತ...
ಎಲ್ಲವೂ ಒದ್ದೆ-ಮುದ್ದೆ
ಅಲ್ಲಲ್ಲಿ ಗೊಚ್ಚೆ...
ನೆಲವ ತೊಳೆಯುವಿಕೆ
ಮಳೆಯೆಂದರೇ...
ಕೆಲವೊಮ್ಮೆ ಬಯಸುವ ಹಿತ
ಇನ್ನೊಮ್ಮೆ ಪಿರಿ ಪಿರಿ
ಥೇಟ್ ನಿನ್ನಂತೆಯೇ ಈ ಮಳೆ
ಹೌದು ಕಣೋ. .....
ಮಳೆ ಸುರಿಯತೊಡಗಿದಾಗ .....ನೀ ನೆನಪಾಗುತ್ತೀ.

ನಿನ್ನ ---
ಕಣ್ಣ ಮಿಂಚಿನ ಸೆಳೆತಕ್ಕೆ
ನಗೆಯ ಮೋಡಿಗೆ
ಸಿಲುಕಬಾರದೆಂದು
ನನ್ನ ನಯನಗಳ ಅದುಮಿದೆ...
ಯಾಕ್ಹೀಗೆ ನೀ ನುಸುಳಿ
ನನ್ನ ಕಾಡಿಸುತ್ತಿರುವೇ..?
ಇದಂತೂ ನಿಜಾ
ನಾ ಸಿಲುಕಿ, ನೀ ಸಿಕ್ಕ ಮೇಲೆ
ಒಳಗೊಳಗೇ ಒಂಥರಾ
ಹಿತವೆನಿಸಿದೆ ಕಣೋ....


ಪ್ರೀತಿಯ ಕುರಿತು
ಪ್ರೀತಿಯ ಕವನ
ಬರೆಯಲು ಹೊರಟರೆ .....
ಪದಗಳೆ ಸಿಗಲಿಲ್ಲ
ಪ್ರೀತಿಸುವ...
ನನ್ನವನು ಬಳಿಯಲಿರದೆ
ಬರೆಯಲು ನನ್ನ
ಮನಸ್ಸಿಗೂ ಮನಸ್ಸಿಲ್ಲ!

ಮೋಡ ಕವಿದೊಡನೆಯೇ......
ನಿನ್ನ ನೆನಪುಗಳು ಕಾಡುವುದು
ಮಳೆ ಸುರಿಯತೊಡಗಿದಾಗ...
ಮನ ನಿನ್ನ ಸನಿಹವ ಬೇಡುವುದು ಕಣೋ...
ನೆಪಗಳೆಲ್ಲವ ಸರಿಸಿ ...
ಬಂದು ಬಿಡೋ... ಚೆಲುವ
ಒಲವ ಸುರಿವೆ.
ಮಳೆಯಲಿ ನೆನೆದು....ಬಿಸಿಯಾಗುವ
ಮನ ತಣಿಯಲಿ.

Tuesday, 26 January 2016

ಕಣ್ಣೀರು ತುಂಬಿದ ಕಂಗಳು ... ಕಾಲ ಬಳಿ ಕುಳಿತ ಅವನು ಮೆತ್ತಗೆ ಅವಳ ಪಾದಗಳ ಕೈಯಲ್ಲಿ ಹಿಡಿದು ಒತ್ತಿದ.
ತಗ್ಗಿದ ಮೊಗವೆತ್ತಿ ಅವನೆಡೆಗೆ ದೃಷ್ಟಿ ಬೀರಿದಳು. ಅವನ ತುಂಟ ಹೂ ನಗೆಯಲ್ಲಿ ಏನೋ ಏನೋ ಭಾವ !!!!
ಮಾತುಗಳಲಿ ಏಕೆ ಹೇಳಬೇಕು ಪ್ರೀತಿಸುವ ವಿಷಯ ? ಪ್ರೀತಿಯ ಹೇಳಲು ಪದಗಳೆಲ್ಲಾ ಸವಕಲು ಗೊತ್ತಿದೆ ಇಬ್ಬರಿಗೂ.
ಹೌದು ಭಾವನೆಗಳ ವ್ಯಕ್ತಪಡಿಸಲು ಭಾಷೆ ಸೋಲುತ್ತದೆ.


ಧೀರ್ಘಕಾಲದ ಮೌನದ ಮೊಗ್ಗೆ ಬಿರಿದಿದೆ.
ಸೂರ್ಯನುದಯದ ದಿಕ್ಕೇನಾದರೂ ಬದಲಾಯ್ತೇ?
ಅಂತೂ ಆಗಮನದ ಭರವಸೆ ನಿನ್ನದು !!!!
ನದಿಯ ತೀರದಲಿ ಅಲೆದಾಡುವ ಕಣೋ. ತುಸುಹೊತ್ತು ನೀರಿನಲಿ ಕಾಲು ಇಳಿ ಬಿಟ್ಟು ಕೈ ಗಟ್ಟಿಯಾಗಿ ಹಿಡಿದುಕೊಂಡು ಕುಳಿ ತುಕೊಳ್ಳುವ ಆಯ್ತಾ ? ಮೇಲಿನ ಮೆಟ್ಟಿಲಲಿ ನೀನು, ನಿನ್ನ ಪಾದದಡಿ ನಾನು. ಇಣುಕ ಬೇಡವೋ ಪೋಲಿ ಹುಡುಗ!!! ಹರಿವ ನೀರ ನೋಡು, ಓಡುವ ನದಿ ಸಾಗರವ ಸೇರಲೇಬೇಕು ,,,,ಹಾಡ್ತೀಯಾ ?
ಯಾಕೆ ಮೌನ ? ಎಷ್ಟು ದಿನಗಳ ಅಗಲಿಕೆಯಲಿ ಬೆಂದಿರುವೆವು ಅಲ್ಲವಾ ?...

ಗೊತ್ತು ...
ನನ್ನೊಳಗೂ ...ನಿನ್ನೊಳಗೂ ...ಅದೆಷ್ಟೋ ನೋವುಗಳ ಗದ್ದಲ ನಡೆಯುತ್ತಿದೆ.
ಹೇಳು ನೀನು---
ಕಳೆದ ದಿನಗಳು..ಯಾಕೆ ಹೀಗಾಯ್ತು ...ವಿರಹದ ತಾಪ...ಅನುಭವಿಸಿದ ಸಂಕಟ..ಇವನ್ನೇ ಮಾತನಾಡೊಣವ ? ಸುರಿಸಬೇಕ ಕಣ್ಣೀರು??
ಎಲ್ಲ ಬದಿಗೊತ್ತಿ...
ಏನೂ ಆಗಿಲ್ಲವೇನೋ ...ಮುಂದೆ ಏನೇನೋ ಆಗುತ್ತೇನೋ...ಅಂತ ಸುಂದರ ಕನಸು ಕಲ್ಪನೆ ಬಗ್ಗೆ ಮಾತನಾಡೋಣವಾ ?
ಯಾವುದೂ ಬೇಡ ....
ತುಟಿಗಳಲಿ ತುಟಿಯ ಬಂಧಿಸಿ ಸುಮ್ಮನಿದ್ದುಬಿಡುವ ಅಲ್ವೇನೋ? ಕಾಲ ನಿಂತು ಬಿಡಲೀ....ಕ್ಷಣ ಹೊತ್ತಾದರೂ ಎಲ್ಲವನ್ನೂ ಮರೆಯುವ, ನಮ್ಮಲ್ಲಿ ನಾವು ಬೆರೆತು ಕಳೆದುಹೋಗುವ... ಆ ಹೊತ್ತಿನ ಸುಖ ನಮ್ಮದಾಗಿಸುವ ... ಬೇಕಾಗುತ್ತೆ ನಾವು ಬಲವಾಗಲು ಅಲ್ಲವೇನೋ???
ತಡವಾಗಿ ಬಂದರೂ ಜಡಿಮಳೆಯಂತೆ ನಿನ್ನೊಲವು ಕಣೋ ....
ನೆನೆಯ ಬೇಕಿದೆ ನಾನು.

ಪ್ರೀತಿ ಎಂದರೆ. ..
ಕಣ್ಮುಂದೆ ನಿನ್ನದೇ ಮೊಗ ಕಣೋ
ಬೇಡಿದ್ದು ನಾ ಹಿಡಿಯಷ್ಟು...
ನೀ ಸುರಿದೆಯಲ್ಲೋ
ನಿನ್ನೊಲವ ನಸರಿ ...

ನನ್ನೆದೆಯ ತುಂಬಾ!!!!

ನನ್ನ ಕಣ್ಣ ಹನಿಗಳು ಜಾರಿ....
ಅವನ ಬೊಗಸೆಯಲ್ಲಿ ಬಿದ್ದು. ..
ಅವನೊಲವಿಗೆ ಮುತ್ತಾದವು
ಮೆತ್ತಗೆ ಎದೆಗಪ್ಪಿದ ಅವುಗಳ
ತುಟಿಗಳಲಿ ಕಿರು ನಗೆ......

ಮಾತುಗಳು ಮನದಲ್ಲೇ ಉಳಿದವು.


ಬಾನಲ್ಲಿ ಕವಿದ ಕಾರ್ಮೋಡ
ಮಳೆ ಬರುವ ಸೂಚನೆ
ನನ್ನ ಮನಕೂ ಕವಿದಿದೆ ಬೇಸರದ ಮೋಡ
ನೀ ಬಳಿಯಿರದ ವೇದನೆ.




ತಣ್ಣನೆಯ ಗಾಳಿ. ...ಸಣ್ಣಗೆ ಸುರಿಯುವ ಮಳೆ. ...
ಮತ್ತೆ ಮತ್ತೆ ಬೇಕೆನಿಸುವ ...ಅವನೂ
ಕಣ್ಣು ಮುಚ್ಚಿದರೂ...ತೆರೆದರೂ....ಅದೇ...
ಕಳೆದ ಕ್ಷಣಗಳದೇ ಗುಂಗು
ತರುತ್ತಿದೆ ಹಿತವಾದ. ..ಚೆಂದದ ಕಿರುನಗು.


ನೆಲಕ್ಕೆ ಬಿದ್ದ ಬಳ್ಳಿಗೆ
ತಬ್ಬಲು ಸಿಕ್ಕಿದ್ದು. ....
ಕುಂಬು ಮರ.


I play a role in your life but, I am not your life ಅಂದ.
ಹೂಂ ಅಂದೆ.
ಬಂದವನೂ ಅವನೇ ಅಂದು.
ಹೋಗುವುದಕೆ ಚಡಪಡಿಸಿದವನೂ ಅವನೇ.
ಬಾಗಿಲು ತೆಗೆದದ್ದು ನಾನೇ........

ಬರುವಾಗಲೂ.....ಅವನು ಹೋಗುವೆ ಎಂದಾಗಲೂ.
ಇದ್ದಷ್ಟೂ ಹೊತ್ತು ಖುಷಿ ಇತ್ತು ಅನ್ನುವುದಂತೂ ನಿಜವೇ.
ಆದರೇ.....ಅಂದು ಅವನು ಬರುವಾಗ ಕಣ್ಣೀರಿತ್ತು, ಇಂದೂ ಅವನ ಕಳಿಸುವಾಗ....ಕಣ್ಣೀರೇ ನನ್ನಲ್ಲಿ.
ಕಾರಣಗಳು ಮಾತ್ರ. ...ಬೇರೆ ಬೇರೆಯದ್ದೇ.
ಗೊತ್ತು ನನಗೆ. ...ಯಾವುದನ್ನೂ ಬಲವಂತದಿಂದ ಹಿಡಿದಿಡಲಾಗದು, ಪ್ರೀತಿಯನ್ನಂತೂ ಅಲ್ಲವೇ ಅಲ್ಲ.
ಪ್ರತಿಯೊಬ್ಬರೂ ...ತೋರಿಸುತ್ತಾರೆ....ಒಲವ, ಕಾಳಜಿಯ, ಹೆಚ್ಚು ಹೆಚ್ಚು. ...ಮೊದ ಮೊದಲಲ್ಲಿ. ಅದು ಯಾವುದೇ ಸಂಬಂಧವಿರಲಿ. ಕೆಲವರು ಮಾತ್ರವೇ.... ನಿಭಾಯಿಸುತ್ತಾರೆ, ಉಳಿಸಿಕೊಳ್ಳುತ್ತಾರೆ....ಕೊನೆಯವರೆಗೂ.


ಸದ್ದಿಲ್ಲದೇ...
ಒಳ ನುಸುಳಿದವನು
ಈಗೇಕೋ .....
ಮನದ ತುಂಬಾ ....
ಗದ್ದಲವೆಬ್ಬಿಸಿದ್ದಾನೆ.


ಹಾರಾಡಲು ಬಿಟ್ಟಿರುವೆ ಹೆರಳ
ನಿನ್ನಪ್ಪುಗೆಯಲಿ ನಲುಗುವಾಗ....
ನಿನಗೂ ಕಚಗುಳಿ ಇಡಲಿ ಅಲ್ಲವೇನೋ ?
ಒಂದೊಮ್ಮೆ ತಬ್ಬಿ ..
ಮುಂಗುರುಳ ಸರಿಸಲೇನೆ ಎಂದು ಪಿಸುಗುಡುವಿಯೇನೋ ನನ್ನವನೇ ?...

ಮೃದುವಾಗಿ ಹೆರಳೊಳಗೆ ನಿನ್ನ ಬೆರಳಾಡಿಸಬಾರದೇನೋ ?
ಕಳೆದು ಹೋಗಬೇಕಿದೆ ನಾನು

ನಾವು ಪ್ರೀತಿಸಿದವರು, ನಮ್ಮನ್ನು ಪ್ರೀತಿಸುವವರು ಒಬ್ಬರೇ ಆಗಬೇಕಂತೇನಿಲ್ಲ. ನಿಜಾ.... ಪ್ರೀತಿಸಬಹುದು ನಾವು, ಅವರ ಪ್ರೀತಿ ಪಡೆಯುವುದೂ, ಉಳಿಸಿಕೊಳ್ಳುವುದೂ ಸುಲಭವೇನಲ್ಲ. ನಾವು ಪ್ರೀತಿಸಿದವರೂ ನಮ್ಮನ್ನು ಪ್ರೀತಿಸಿದಾಗ ಒಲವೆ ಜೀವನ ಸಾಕ್ಷಾತ್ಕಾರ smile emoticon
ಜೊತೆ ಜೊತೆಗೆ ಇರಬೇಕೂ ಅನಿಸೋದು ಸಹಜ. ಸದಾ ಆಗೋಲ್ಲ ಅನ್ನೋದು ಸತ್ಯ. ದಿನದ ಇಪ್ಪತ್ತನಾಲ್ಕು ಗಂಟೆಯಲ್ಲಿ ಐದು ನಿಮಿಷ ಆದ್ರೂ ನಮಗಾಗಿ ಮೀಸಲಿಟ್ಟರೆ .... ಹೋಗ್ಲೀ ಒಂದ್ನಾಲ್ಕು ಮಾತಾಡಿದರೆ ಸಾಕು ಉಳಿದ ಸಮಯವ ... ಆ ಖುಶೀಲಿ ಕಳೆಯಬಹುದಲ್ವಾ ? ಮಧುರ ಘಳಿಗೆಗಳು ಯಾರಿಗೆ ಬೇಡ ??? ಜೀವ ಇದ್ದಾಗ .... ಸಿಕ್ಕಷ್ಟೂ ಹೊತ್ತೂ .....ಪ್ರೀತಿಸಿ ಬಿಡೂ ....ಪ್ರೀತಿ ಬಂಧನ ಆಗದಿರಲೀ .... ಬದುಕಲಿ ಚೇತನ ತುಂಬಲೀ ..


ಪ್ರೀತಿಗೆ ಬಿದ್ದರೆ ......ಅವರನ್ನು ಮೆಚ್ಚಿಸೋ ಹುಚ್ಚಲ್ಲಿ ನಾವು ಬದಲಾಗ್ತೇವೆ, ಬಹಳಷ್ಟು ಸಲ ನಮ್ಮತನ ಕಳೆದುಕೊಳ್ಳುತ್ತೇವೆ.


ಸೆಳೆಯುವ ಆಕರ್ಷಣೆ ನನದಲ್ಲ...
ಹಿಡಿದಿಡುವ ಶಕ್ತಿಯೂ ನನಗಿಲ್ಲ. ..
ಮೊಗೆದಷ್ಟೂ ಒಲವಿದೆ...ನಿನಗೆಂದೇ ಮಿಡಿಯುವ ಹೃದಯವಿದೆ
ಪಡೆಯುವ ಹಂಬಲ ನಿನದೇ.....ಅರಿತಿಲ್ಲ
ಬದುಕುವಾಸೆ ತುಂಬಾ ಕಣೋ.......

ಎದೆಬಡಿತ ಹೆಚ್ಚಿಸಿದವನು ನೀನು.....ನಿಲ್ಲುವವರೆಗೂ ಇದ್ದುಬಿಡೋ....
ಸಂಬಂಧಗಳೇ ಹಾಗೆ. ....ಯಾವಾಗ. ..ಯಾರೊಡನೆ....ಯಾಕಾಗಿ....ಬೆಸೆಯುವುದೋ...???

ಕಣ್ಣು ತೆರೆದರೂ....ನೀನು
ಮುಚ್ಚಿದರೂ ಕಾಣಿಸೋದು ನೀನೇ...ನಿಜಾ
ಕನಸು ಮನಸುಗಳ ಆವರಿಸಿಹ
ನೀ ಜೊತೆಗೆ ಇರದಿರುವಾಗ. ...
ಕ್ಷಣ ಒಂದು ಯುಗ ...

ನನಗೆ ಸಜಾ.

ನಿನ್ನ ನೆನಪುಗಳ ಹರವಿಕೊಂಡು ಕುಳಿತಿದ್ದೇನೆ ಕಣೋ ...
ಒಮ್ಮೊಮ್ಮೆ ಕಣ್ಣೀರಲ್ಲಿ ಒದ್ದೆ,
ಮಗದೊಮ್ಮೆ ತುಟಿಗಳಲಿ ನಗು ....
ದೂರ ನಿಂತೇ ....
ಸತಾಯಿಸು ಪರವಾಗಿಲ್ಲ,...

ಅಗಲಿಕೆ ಸಾಕಾದಾಗಲೇ
ಸನಿಹದ ಸವಿ ಸಿಗಲಿ
ನಿನ್ನ ಪ್ರೀತಿಸುವ ಈ ಪರಿ ನನಗೇನೂ ಹೊಸದಲ್ಲ ಬಿಡೋ
ನನ್ನೊಲವಿಗೆ ನೀ ಸೋತಿರುವುದೂ ನಾ ಬಲ್ಲೆ
ತೋರಿಸಿಕೊಳ್ಳದ ಬಿಗುಮಾನ ನಿನ್ನದು!!
ಹೇಳೋ .....
ಪ್ರೀತಿಯಲ್ಲಿ ಸೊಲುವುದೂ ಗೆಲುವೇ ಅಲ್ಲವೇನೋ ?

ನನ್ನ ಬೇಕು-ಬೇಡಗಳ ಅರಿತಿರುವ ಅವನಲ್ಲಿ...
ನಾನೇಕೆ ಬೇಡಲಿ?
ಸಿಕ್ಕಷ್ಟೇ ನನ್ನದು, ಸಿಗದಿರುವುದಕೆ ನಾನೇಕೆ ಕೊರಗಲಿ?
ಬಲವಂತದಿಂದ ಏನನ್ನಾದರೂ ಪಡೆಯಬಹುದೇನೋ.....
ಪ್ರೀತಿಯನ್ನಂತೂ ಖಂಡಿತಾ ಅಲ್ಲ.


ಕಣ್ಣು ತೆರೆದು, ಹೊದಿಕೆಯ ಸರಿಸಿ. ..
ಅಂಗಳಕ್ಕೆ ಬಂದೆ...
ಮಂಜಿನಲಿ ಮಿಂದ ...ಅರೆ ಬಿರಿದ ಹೂ!!!
ಅವನ ನಗೆಯ ನೆನಪು ತಂದಿತು
ಇನ್ನಿರುವುದು......

ಕಾಯುವಿಕೆ.....
ಅವನಾಗಮನಕೆ.

ಕೆಲವು ಸುಂದರ ಕ್ಷಣಗಳೇ ಹಾಗೆ.....
ಕನಸೇನೋ ಎಂಬಂತೆ ಘಟಿಸುತ್ತವೆ....
ಎದೆಯಲ್ಲಿ ಅಚ್ಚಾಗಿಬಿಡುತ್ತವೆ.
ಅವನ ಕಂಡಿದ್ದು. ..
ಆ ತಿಳಿನಗುವಿಗೆ ತಿಳಿಯದಂತೆ ಶರಣಾಗಿದ್ದು.......
ಅವನೂ ನನ್ನೊಲವಿನ ವಶವಾಗಿದ್ದು...
ನಿಜಾನಾ?

ಈ ಜೋಭದ್ರ ವಾತಾವರಣದಲ್ಲಿ ....
ಬಳಿಯಿರದ ಅವನ ಬೇಕು ಎನುವ ಹಠಗಳಲ್ಲಿ ...
ನಲುಗುವಾಗ ...
ಅವನ ನೆನಪುಗಳ ಹರಡಿಕೊಂಡು
ನಗುವ ನಾನವನ ಪ್ರೇಮಿ....

ಮಳೆ ಸುರಿಯಲು .... ಮತ್ತು ಬೆಚ್ಚಗಾಗಲು ...
ಅವನ ಬರುವಿಕೆಗೆ ನಾ ಕಾಯಲೇಬೇಕು.

ಹತ್ತಿರ ಹೋದರೆ. ....
ಅತೀ ಎಂದು ಹೀಕರಿಸಿದರೇ ?
ದೂರ ಇರಲು....
ಮರೆತಳೇನೋ ನನ್ನ, ನಾ ಬೇಡವೇನೋ ಎಂದುಕೊಂಡರೆ?
ಯಾವ ಅಂತರದಲ್ಲಿ ಇರಲೋ????...

ಸದಾ ಆತಂಕ.
ನನಗೆ ಗೊತ್ತಿರುವುದು ಇಷ್ಟೇ. ...
ಮೆಚ್ಚಿಕೊಂಡವನ ಹಚ್ಚಿಕೊಳುವುದು
ಇಲ್ಲಾ.... ಮರೆತಂತೆ ನಟಿಸಿ.....ದೂರವುಳಿದು
ಮನದಲ್ಲೇ ಮುಚ್ಚಿಟ್ಟುಕೊಳುವುದು.

ಸಾಕು ....
ಕಂಡರೇ.....ದಿನದಲ್ಲೊಮ್ಮೆ ಅವನ ಹೂನಗೆ
ದಿನವೆಲ್ಲಾ ಉಲ್ಲಾಸವೆನಗೆ
ಬಾಯಾರಿದಾಗ....
ತಿಳಿಯಾದ ಸಿಹಿ ನೀರ ಕುಡಿದಂತೆ ...

ಮಾತೇನಾದರೂ ಆಡಿದರೇ...
ಅಚಾನಕ್. .. ಚಿಪ್ಪಿನೊಳಗಿನ ಮುತ್ತುಗಳು
ದೊರೆತ ಖುಷಿ.
ಎಲ್ಲವನೂ. ....ಎದೆಯಲ್ಲಿ ಬಚ್ಚಿಟ್ಟು. ....
ಆಗಾಗ್ಗೆ ಹೊರತೆಗೆದು....
ಸಂಭ್ರಮಿಸುವ ಅವನ ಪ್ರೇಮಿ ನಾ.

ಕವಿದ ಕಾರ್ಮೋಡ ಕರಗಿ
ಸುರಿದ ಮಳೆಗೆ......
ಎಲ್ಲವೂ......ತಣ್ಣಗೆ.

ನನ್ನವನು ಚಂದಿರನಂತಹ ಹುಡುಗ
ಒಲವ ಸುರಿವಾಗ.....ಶೀತಲ
ಅದೇಕೋ. ..
ಒಮ್ಮೊಮ್ಮೆ ಕೋಪದ ಮೋಡಗಳ ಹಿಂದೆ ಮರೆಯಾಗುವ!
ತಾರೆಗಳು ಎಷ್ಟಿದ್ದರೇನು ?...

ಬೇಕಿರುವುದು ಬೆಳದಿಂಗಳು

ಪ್ರೀತಿಸುವವರಿಂದ ನಿರೀಕ್ಷೆ
ನಿರೀಕ್ಷೆ ಫಲಿಸದಾಗ ಅಸಹನೆ
ಅಸಹನೆಯ ಕಾರಣದಿಂದ ಕೋಪ
ಕೋಪಗೊಂಡಾಗ ಆಡಿದ ಮಾತು ....ಜಗಳ
ಜಗಳದಿಂದ ಮುನಿಸು...

ಮುನಿಸು....ಮೌನ ತಾಳಿದಾಗ. ..
ಧೀರ್ಘಕಾಲದ ಮೌನದ ಪರಿಣಾಮ. ...
ಸಂಬಂಧಗಳ ಕೆಡಿಸದಿರಲೀ.....
ಹೌದು. ..ತಾಳ್ಮೆ ಬೇಕು
ಪಡೆದ ಪ್ರೀತಿ ಕೆಡದಂತೆ ನೋಡಿಕೊಳ್ಳಬೇಕು
ಸವಿ ಮಾತುಗಳಲ್ಲಷ್ಟೇ ಪ್ರೀತಿ ಇರೋಲ್ಲ. ...ಜಗಳದಲ್ಲೂ ಪ್ರೀತಿ ಇರುತ್ತೆ
ಅರ್ಥವಾದೀತೇ ??????

ಇಂದು ಹುಣ್ಣಿಮೆ, ತಣ್ಣನೆಯ ಚಂದಿರ ಕಾಣಲಿಲ್ಲ
ಮಳೆ ಸುರಿಸದ ಮೋಡಗಳು ಅವನ ಮರೆಯಾಗಿಸಿವೆಯಲ್ಲ!
ಹಗಲಿನಲಿ ಕಾಣೆಯಾದ ದಿನಕರ
ಇರುಳಿನಲಿ ಮರೆಯಾದ ಚಂದಿರ
ಉಳಿದಿರೋದು ಮನದ ತುಂಬಾ ಬೇಸರ ......
ಏನು ಮಾಡಲೀ ????
ಅವನ ನೆನಪುಗಳನ್ನು ಆಹ್ವಾನಿಸುತ್ತೇನೆ ಜೊತೆಯಾಗಿರಲು smile emoticon


ದಿನಗಳೆದಂತೆ ಎಲ್ಲವೂ ಹಳೆತಾಗುತ್ತದೆ...
ಆದರೇ. .....
ದಿನೇ ದಿನೇ. ..
ಅವನ ಸಂಗ ಆಪ್ತವಾಗುತ್ತಿದೆ
ಅವನ ಪ್ರೀತಿ ಮತ್ತಷ್ಟು ಬೇಕು ಎನಿಸುತಿದೆ...
ಯಾಕೋ?
ಅವನ ಹಂಬಲಿಸುವ ಹೃದಯ ನನದು
ದೂರವೇ ಉಳಿದು ಕಾಡಿಸುವ ತುಂಟತನ ಅವನದು
ಸಹನೆಯಲಿ ಒಲಿಸಿಕೊಳುವ ನನದು ಒಲುಮೆಯೋ....
ಅವನ ಪಡೆಯುವ ಹಠವೋ ...
ನಾನರಿಯೆ
ಅವನು ಹಾಗೇ .... ಕಾಯಿಸುತ್ತಾನೆ....
ಮರೆಯಲ್ಲೇ ನಿಂತು ನಗುತ್ತಾನೆ...
ಬಾ ಎಂದು ಎಷ್ಟು ಗೋಗರೆಯಬೇಕೋ ... ??
ವಿರಹದಿ ಅವನ ಜಪಿಸುವಾಗ ನಾ ರಾಧೆ.
ಮಿಂಚಂತೆ ಸುಳಿದು, ಬಿಗಿದಪ್ಪುವಾಗ ... ನಾ ಯಮುನೆ
ಕಣ್ಗಳಲಿ ನೀರು... ತುಟಿಗಳ ನಗುವಿರುವಾಗ ....
ಆಹಾ ಕಾಮನ ಬಿಲ್ಲು ಎಂದು ಮುತ್ತಿಡುವ
ಅವ ..... ನನ್ನವ... ನಿಸ್ಸಂದೇಹ
ಬಚ್ಚಿಟ್ಟಷ್ಟೂ ಬಹಿರಂಗಕ್ಕೆ ಬರಲೆತ್ನಿಸುವುದು
ಹೊಚ್ಚಿಟ್ಟಷ್ಟೂ ಹೊತ್ತಿ ಉರಿಯುವುದು ..........
ಪ್ರೀತಿ ಪ್ರೇಮಗಳ ಗುಣ ಅಥವ ದೌರ್ಬಲ್ಯ ಅಂತೇ!!!!!

ನನ್ನ ಮನದ
ಖಾಲಿ ಪುಟಗಳಲಿ ಬರೆದ
ನಿನ್ನ ನೆನಪುಗಳ
ಅಳಿಸೀ ....ಅಳಿಸೀ....
ಅಳುತ್ತಿರುವೆ. ...
ಕಣ್ಣೀರಿನಲಿ ತೋಯ್ದು
ಮಾಸಿದ ಪುಟಗಳು ,
ನನ್ನ ನೋಡಿ ನಗುತ್ತಿವೆ .

See More


ಪದೇ ಪದೇ ...ನಿನ್ನೊಲವ ವರ್ಷ ಧಾರೆಯಲಿ ತೋಯದಿರೆ
ನನ್ನೊಳಗಿನ ಮೃದು ಭಾವನೆಗಳು
ಮುರುಟುತ್ತವೆ ಕಣೋ
ಹೇಳೋ ನನ್ನವನೇ
ನೀನೇ ಚಿಗುರಿಸಿದ ಪ್ರೀತಿ ವಲ್ಲರಿ ಬಾಡದೇನೋ?...

ಒಣಗಿದ ನನ್ನಧರಗಳ ನೋಡು...
ಮುತ್ತಿನ ತೇವ ಬೇಡಿವೆ
ಬಾಹುಗಳು ಬಂಧನವ ಬಯಸಿವೆ
ನಿನಗೆ ತಿಳಿಯದೇನೋ ?
ನನ್ ಹುಡುಗ ಇಲ್ಲೇ ಎಲ್ಲೋ ಇದ್ದೀ...
ಸತಾಯಿಸದೇ ಬಂದು
ಬಿಗಿದಪ್ಪಿ....
ದಾರಾಳತನ ತೋರಬಾರದೇನೋ?

ನಾ ಅವನ್ಹೆಸರ ಪಿಸುಗುಟ್ಟರೂ ಸಾಕು
ನನ್ನತ್ತ ದೃಷ್ಟಿ ಬೀರುತ್ತಾನೆ!
ಮುದ್ದಾಗಿ ಮುಗುಳ್ನಗುತ್ತಾನೆ ತುಂಟ
ಬೇಕಿಲ್ಲ ಸವಿಮಾತುಗಳು ಬಿಡಿ
ಆ ನಗೆಯ ಎದೆಯೊಳಗೆ ಮುಚ್ಚಿಡುವೆ...

ನಡುಗಿಸುವ ಚಳಿಯಲ್ಲಿ...
ಬೆಚ್ಚಗೆ ಹೊದ್ದು ಮಲಗುವ ಖುಷಿ.
ಹೇಯ್ ಆತ್ಮಸಖ.....
ಬಿರಿದ ನಗುವಿನ ತುಟಿಯಂಚಿನಲಿ
ನೀನಿಲ್ಲವೆಂಬ ಕೊರತೆ
ಕಾಡುವಾಗ....
ಮೊಗವು ಸುಂದರ ಎನಿಸೀತಾದರೂ ಹೇಗೆ? ...

ಬಟ್ಟಲು ಕಂಗಳೇನೋ ನಿಜಾ
ಕನಸುಗಳು ಬರಿದಾಗಿವೆಯಲ್ಲ?
ಹೊಳಪು ಕಂಡೀತಾದರೂ ಹೇಗೆ?
ಕೊಟ್ಟಂತೆ ಮಾಡಿ ಒಲವ
ನೀನು ದೂರವಿರಲು, ವಿರಹದಲಿ
ನಾನು ಬದುಕುವುದಾದರೂ ಹೇಗೆ?

ಬರೀ ಮೋಡ......ಎಲ್ಲೆಲ್ಲ್ಲೂ ....
ಸುರಿಯಬಾರದೇ ಮಳೆ ?
ತಣಿಸಲಿ ನನ್ನ, ಜೊತೆಗೆ ಇಳೆ
ಕೊಡೆ ಬಿಚ್ಚಿ ನೀರಲ್ಲಿ
ಕಾಲು ನೆನೆಸುತ್ತಾ ನೆಡೆಯುವಾಗ ........
ಮಲೆನಾಡ ಮಡಿಲಲ್ಲಿ ಕಳೆದ ಬಾಲ್ಯ ಮರುಕಳಿಸಲಿ .....
ಹರಿವ ನೀರಲ್ಲಿ ಕಾಗದದ ದೋಣಿ
ತೇಲಿಸಿದ ನೆನಪು
ಕಾಡಿದೆ ...
ಇಂದೂ ಬಾರದ ಮಳೆಯ ಜೊತೆ
ಕಳೆದ ಸುಂದರ ದಿನಗಳು .
ಎಲ್ಲೆಲ್ಲೂ ಮೋಡ.....
ಕವಿದಿದೆ ನನ್ನ ಮನಕ್ಕೂ .
ಕಪ್ಪು ಮುಗಿಲು ಕರಗಲಿ
ಸುರಿಯಲಿ ಜಲಧಾರೆ .
ಪುಳಕಗೊಳ್ಳಲಿ ನನ್ನ ಹೃದಯ , ಧರೆ.

(ವೇಣು ಗೋಪಾಲ್ ಸರ್ ಅವರ ಕೋರಿಕೆಗೆ ಸ್ಪಂದಿಸಿ, ಒಂದು ಮಳೆಯ ಕವನ ಬರೆಯುವ ಯತ್ನ )


ಪ್ರೀತಿಯಿಂದ ಕರೆದರೇ......
ಆ ದೇವರೂ ಬರುತ್ತಾನಂತೆ! !!
ನನ್ನ ಪ್ರೀತಿಯ ಕರೆ ಕೇಳದೇನೋ?
ಕರೆದಾಗ ಬರಬಾರದೇನೋ?
ನಿನ್ನ ನೋಡುವಾಸೆ ಕಣೋ ನನ್ನವನೇ...

ನಿನ್ನ ನೆನೆಯದ ಕ್ಷಣವಿಲ್ಲ.....
ಆದರೇ ನೀನೇ ಬೇಕೆಂದು ಹಂಬಲಿಸುವಾಗ....
ಮನ ಮಂಕಾಗುವುದು ನಿಜಾ.
ಕಲಿಸಬಾರದಿತ್ತು ನೀನು ಪ್ರೀತಿಸುವುದನು.....
ಮರೆಯಾಗಲೇಬಾರದಿತ್ತು ಹೀಗೆ. .....
ಕತ್ತಲಲ್ಲಿ ನನ್ನೊಬ್ಬಳನೇ ಬಿಟ್ಟು.

ನನ್ನ ಮನದಂಗಳದಲ್ಲಿ ಬೆಳದಿಂಗಳು ಚೆಲ್ಲಿದೆ
ಹೌದು ನನ್ನವನೇ ಅವನು. ..ಮುದ್ದು ನಗೆಯ ಚೆಲುವ!
ಆ ಚೆಲುವನ ಚಂದದ ಪದಗಳಲಿ ಹೊಗಳುವಾಸೆ ನನಗೆ
ಒಂದಷ್ಟು ಪದಗಳ ಹುಡುಕಿಕೊಡುವಿರಾ ...
ಯಾರಾದರೂ ...ದಯವಿಟ್ಟು. ...

ನನ್ನ ಸುತ್ತಲೂ ....
ಒಂದೊಂದೇ ಇಟ್ಟಿಗೆಯ ಜೋಡಿಸಿದೆ.
ಎತ್ತರೆತ್ತರಕ್ಕೆ ಗೋಡೆಯಾಯ್ತು.
ಬಾಗಿಲಿಡುವುದನು ಮರೆತಿದ್ದೆ!
ಕೊನೆಗೆ .... ಆಚೆ ದಿಟ್ಟಿಸಲು ಕಿಟಕಿಯನ್ನಾದರೂ ಇಡಬಹುದಿತ್ತು.... ...
ಒಂದಿಷ್ಟು ಬೆಳಕಾದರೂ ಒಳ ನುಸುಳುತ್ತಿತ್ತು
ಆ ಕ್ಷಣಕ್ಕೆ ಏಕಾಂತವೇ ಹಿತವೆನಿಸಿದ್ದು ಸುಳ್ಳೇನಲ್ಲ.
ದಿನಗಳದಂತೆ..... ಕತ್ತಲಿಗೆ ಹೊಂದಿಕೊಳ್ಳಬೇಕಿತ್ತು ಕಣ್ಣುಗಳು, ನನ್ನ ಮನವೂ ಸಹಾ ....
ಆದರೇ ..... ನಿಜಾ ಅದಲ್ಲ!!!
ಹೌದು ....
ಈಗ ಬೆಳಕಿಲ್ಲ, ಕೋಣೆಯೊಳಗೆ ನಾನೊಬ್ಬಳೇ ಎಂದು ಹಲುಬುವುದರಲ್ಲಿ ಅರ್ಥವಿಲ್ಲ.
ಗೋಡೆಯೊಳಗೆ ನಾನಿರುವುದರ ಅರಿವು ಯಾರಿಗಾದರೂ ದೊರೆತು, ಭೇದಿಸಿ ಒಳ ಬಂದಾರು ಎಂಬ ಅದೃಷ್ಟದ ನಿರೀಕ್ಷೆ ಮಾಡಬೇಕು.
ಅಥವಾ ... ನಾನೇ ಕಟ್ಟಿದ ಗೋಡೆಯ ಒಡೆಯಲು ನನಗೆ ತ್ರಾಣ ಇದೆಯೇ ಎಂದು ಪರೀಕ್ಷಿಸಬೇಕು ಅಷ್ಟೇ .....

ನನ್ನ ಸುತ್ತಲೂ ....
ಒಂದೊಂದೇ ಇಟ್ಟಿಗೆಯ ಜೋಡಿಸಿದೆ.
ಎತ್ತರೆತ್ತರಕ್ಕೆ ಗೋಡೆಯಾಯ್ತು.
ಬಾಗಿಲಿಡುವುದನು ಮರೆತಿದ್ದೆ!
ಕೊನೆಗೆ .... ಆಚೆ ದಿಟ್ಟಿಸಲು ಕಿಟಕಿಯನ್ನಾದರೂ ಇಡಬಹುದಿತ್ತು.... ...
ಒಂದಿಷ್ಟು ಬೆಳಕಾದರೂ ಒಳ ನುಸುಳುತ್ತಿತ್ತು
ಆ ಕ್ಷಣಕ್ಕೆ ಏಕಾಂತವೇ ಹಿತವೆನಿಸಿದ್ದು ಸುಳ್ಳೇನಲ್ಲ.
ದಿನಗಳದಂತೆ..... ಕತ್ತಲಿಗೆ ಹೊಂದಿಕೊಳ್ಳಬೇಕಿತ್ತು ಕಣ್ಣುಗಳು, ನನ್ನ ಮನವೂ ಸಹಾ ....
ಆದರೇ ..... ನಿಜಾ ಅದಲ್ಲ!!!
ಹೌದು ....
ಈಗ ಬೆಳಕಿಲ್ಲ, ಕೋಣೆಯೊಳಗೆ ನಾನೊಬ್ಬಳೇ ಎಂದು ಹಲುಬುವುದರಲ್ಲಿ ಅರ್ಥವಿಲ್ಲ.
ಗೋಡೆಯೊಳಗೆ ನಾನಿರುವುದರ ಅರಿವು ಯಾರಿಗಾದರೂ ದೊರೆತು, ಭೇದಿಸಿ ಒಳ ಬಂದಾರು ಎಂಬ ಅದೃಷ್ಟದ ನಿರೀಕ್ಷೆ ಮಾಡಬೇಕು.
ಅಥವಾ ... ನಾನೇ ಕಟ್ಟಿದ ಗೋಡೆಯ ಒಡೆಯಲು ನನಗೆ ತ್ರಾಣ ಇದೆಯೇ ಎಂದು ಪರೀಕ್ಷಿಸಬೇಕು ಅಷ್ಟೇ .....
'ಕಾಯುವುದು ಕಷ್ಟ ಆದರೂ ಅನಿವಾರ್ಯ'.
ಆದರೇ.......
ಕೆಲವೊಂದು ಕಾಯುವಿಕೆ ಎಂತಹಾ ಸೊಗಸು !!!!!
ಪ್ರಿಯನ ಬರುವಿಕೆಗಾಗಿ ಕಾಯುತ್ತಾ ಅನುಭವಿಸುವ ತಳಮಳ!!!
ನವಮಾಸ ಯಾವಾಗ ತುಂಬುವುದೋ ಎಂದು ಕಂದನ ಆಗಮನಕ್ಕೆ ಕಾಯುವ ಅಮ್ಮ !!!...
ಮೊದಲ ಮಳೆಹನಿಗಾಗಿ ಮುಗಿಲ ನೋಡುತ್ತಾ ಕಾಯುವ ತವಕ!!!
ಮನೆಯಂಗಳದಿ ಸಸಿಯೊಂದ ನೆಟ್ಟು ಹೂ ಬಿಡುವುದ ಕಾಯುವ ಸಂಭ್ರಮ !!!
ಅಮ್ಮಾ ಕಾಯ್ತಾ ಇರ್ತಾಳೆ ಅಂತಾ ಹಬ್ಬಕ್ಕೆ ಊರಿಗೆ ಹೊರಡುವ ಸಂತಸ!!!
ನಾವು ಆಚೆ ಹೋಗಿ, ಮನೆಗೆ ಬಂದಾಕ್ಷಣ ಬಾಲ ಅಲ್ಲಾಡಿಸಿ ಕಾಯ್ತಾ ಇದ್ದೆ ಎಂದು ಪ್ರೀತಿ ತೋರುವ ನಾಯಿ !!!
ಏನೋ ಒಂದು ಹೊಸತಿಗೆ ಕಾಯುವ ಮನ !!!
ಬೆಳಗ್ಗೆ ನನ್ ಪುಟ್ಟ ರಿಷಿ ಕಣ್ ಬಿಡುವ ಮೊದಲೇ ನನ್ನವರು ಆಡಲಿಕ್ಕೆ ಹೋದರೇ, ಬರುವಾಗ ಮಗ ಶಾಲೆಗೆ ಹೋಗಿಯಾಗಿರುತ್ತೆ. ಸಂಜೆ ಶಾಲೆಯಿಂದಾ ಬಂದ ಮೇಲೆ, ಡ್ಯಾಡಿ ಯಾವಾಗ ಬರುತ್ತೆ ....ಅನ್ನೋ ರಾಗ. ಬೇಗ ಬೇಗ ಹೋಂ ವರ್ಕ್ ಮುಗಿಸಿ ಕಾಯ್ತಿರುತ್ತೆ. ಕಾರ್ ಶಬ್ದ ಕೇಳಿದಾಕ್ಷಣ ಅದರ ಸಂತೋಷ ಹೇಳತೀರದು. ಮಗ ಕಾಯ್ತಿದಾನೆ ಅಂತಾ ಆದಷ್ಟು ಬೇಗ ಬರುವ ಅಪ್ಪ.ಏನೇ ಆಯಾಸವಿರಲಿ, ಸ್ವಲ್ಪ ಹೊತ್ತು ಆಟ. ಹೌದು ಕುಟುಂಬಕ್ಕಾಗಿ ದುಡಿಯುವುದಷ್ಟೇ ಅಲ್ಲ, ಒಂದಿಷ್ಟು ಸಮಯ ಕೊಡುವುದೂ ಸಹ ಅಷ್ಟೇ ಮುಖ್ಯ.
ನೆನ್ನೆ ನನ್ನ ಹಿರಿಯ ಮಿತ್ರರೋರ್ವರ ಜನುಮ ದಿನ. ಅವರಿಗೆ ನಾ ವಿಶ್ ಮಾಡಿದ್ದು ಕೊಂಚ ತಡವೇ:( ನಿಮ್ಮ ವಿಷೆಸ್ ಗೆ ಕಾಯ್ತಾ ಇದ್ದೆ, ಈಗ ಸಮಾಧಾನ ಆಯ್ತು ಎಂದಾಗ ನನಗೆ ಪೆಚ್ಚು ಪೆಚ್ಚು.
ನಮ್ಮವರು ನಮ್ಮ ಮಾತಿಗೆ, ನಮ್ಮನ್ನು ನೋಡೋದಕ್ಕೆ, ನಮ್ಮ ಬರುವಿಕೆಗೆ ಕಾಯ್ತಾ ಇದ್ದಾರೆ ಅನ್ನೋದು ಖಂಡಿತಾ ಬಂಧನ ಅಲ್ಲ. ಅವರಿಗೊಂದಷ್ಟು ಸಮಯ ನಮ್ಮಿಂದಾ ಕೊಡುವುದಾದರೆ ಎಂತಹಾ ಚೆಂದ!!!
'ನನಗಾಗಿ ಇದ್ದಾರೆ, ನನಗಾಗಿ ಕಾಯ್ತಾ ಇರ್ತಾರೆ' ಎನ್ನುವ ಈ ತರಹದ ಭಾವ ನನಗೆ ಖುಷಿ ಕೊಡುತ್ತೆ.
ಮುನಿಸಿನಂತೆ ಕವಿದ ಕಾರ್ಮೋಡ...ಆಗಾಗ್ಗೆ ಜಿಟಿ ಜಿಟಿ ಮಳೆ ನೀರು ....
ಕಾಣದ ಸೂರ್ಯನ ಬಯಸುವ ಮನ ...ಬೇಕಿದೆ ಬಿಸಿಲು ಶಾಖ.
ಕೆಲವರಿಗೆ ಈ ಹವಾಮಾನ ತಂದರೆ ಮುದ .. ನನಗೋ ಥು ಪಿರಿಪಿರಿ ..
ಹೌದು ಮಳೆಯಾದಾಗ ...
ಬೇಕೆನಿಸುವ ಅವನು ... ಇಲ್ಲದಿರುವ ಸಂತಾಪ ...

ಇಲ್ಲೆ ಹತ್ತಿರದಲ್ಲೇ ...ನರಕ ಚತುರ್ದಶಿಯಲಿ ನರರ ಕಿತ್ತಾಟ ..
ಮಾಧ್ಯಮಗಳಲಿ ಮನ ಕಲಕುವ ದೃಶ್ಯ ...
ಚೆಲ್ಲಾಡಿದ ಚಪ್ಪಲಿಗಳು...ಚೀರಾಟ ...ಸುರಿವ ನೆತ್ತರು..ಬೀಸಿದ ಲಾಟಿಗೆ ಜನಗಳ ಓಟ ..
ಛೇ...
ಕಣ್ಣೀರ ತರುತ್ತಿವೆ ....
ಮೊನ್ನೆಯಷ್ಟೇ ಮಣ್ಣಾಗಿಸಿದ ಅಪ್ಪ ..
ಮೊದಲ ದೀಪಾವಳಿಗೆ ಬನ್ನಿ ಎಂದು ಬರೆದ ಅಪ್ಪನ ಪತ್ರದ ನೆನಪು ..
ಶಬ್ದಮಾಲಿನ್ಯ ಎಂದು ಒಳಗೆ ಕುಳಿತ ಮಗಳೂ..
ಕಣ್ಣು ತೆರೆದೊಡನೆಯೇ'ಹ್ಯಾಪಿ ದೀಪಾವಳಿ' ಎಂದು ಕಂಡವರಿಗೆಲ್ಲಾ ಕೈ ಕುಲುಕುವ ಮಗನ ಉತ್ಸಾಹ ...
ಪಟಾಕಿ ಬೇಕೆನುವ ವರಾತ
ರೇಗಾಡಿ ಮಾತು ಬಿಟ್ಟ ಗೆಳೆಯನೂ ಹಾರೈಸಿದ್ದಾನೆ !!!ದೀಪಾವಳಿ ಶುಭಾಶಯ
ಇನ್ಬೋಕ್ಷ್ ಗಳಲಿ, ವಾಟ್ಸ್ಯಾಪ್ ಗಳಲಿ ಬರುತ್ತಿವೆ ... ಮತ್ತೊಂದಷ್ಟು ಶುಭಾಶಯಗಳು!
ಕಾದಿವೆ...ಹಚ್ಚಿಸಿಕೊಳ್ಳಲು...
ಸಹೃದಯಿ ಗೆಳತಿ ತಂದುಕೊಟ್ಟ ಹೊಸ ಚಿತ್ತಾರದ ಮಣ್ಣ ಹಣತೆಗಳು!
ಕಪಾಟಿನಲ್ಲಿವೆ ಮಡಿಚಿಟ್ಟ ನವ ವಸ್ತ್ರದ ಆಯ್ಕೆಗಳು.... ತೊಟ್ಟರಾಯ್ತು
ತಂದು ತುಂಬಿಸಿಟ್ಟ ದಿನಸಿಗಳಿವೆ... ಬೇಕಾದ್ದನ್ನು ಬೆರೆಸಿ ಬೇಯಿಸಿದರೆ ಸಿದ್ದ ...ಸವಿಯಡುಗೆ
ನೋವುಗಳ ಜೊತೆಗೆ ನಲಿವುಗಳೂ ಇವೆ ಎಂದಿನಂತೇ...ಉತ್ಸಾಹ ಇಲ್ಲದಿರೆ ಏನಂತೆ ???
ನನಗೆ ಬೇಡವೆನಿಸಿದರು ...ಬೆಳಕು ಬೇಕಿರುವವರಿಗಾಗಿ ...
ಹಚ್ಚುತ್ತೇನೆ ಹಣತೆಗಳನು ....ಕತ್ತಲನು ಓಡಿಸುವ ಭ್ರಮೆಯಲ್ಲಿ...
ಪಟಾಕಿ ಸದ್ದಿನೊಡನೆ ಸಂಭ್ರಮಿಸುವ ಮಗನಿಗೆ ಜೊತೆಯಾಗುವೆ ..
ಹೌದು, ನಮ್ಮ ನಗುವಿನಲಿ ನಮ್ಮವರ ನಗುವೂ ಬೆರೆತಿರುವುದ ನಾವು ಮರೆಯಬಾರದು ನಿಜಾ ....
"ದೀಪಾವಳಿ" ಅಂತೇ !!!!
ಕತ್ತಲ ತೊಲಗಿಸಲಿ...ಬೆಳಕ ತುಂಬಲಿ.... ಮನೆ ಮನೆಯ ...ಮನ ಮನದ

ನನ್ನ ಪ್ರತಿಯೊಂದು ಕದಲಿಕೆಯ ಅರಿಯುವ ಅವನು .....
ಅವನೊಲವಿನಲಿ ಅಪಾರ ನಂಬಿಕೆ ಇರಿಸಿರುವ ನಾನು ....
ಈರ್ವರ ನಡುವೆ ಮಾತುಗಳಿಗೇಕೆ ಜಾಗ smile emoticon



ನಾ ಬಯಸಿದಾಗ ...
ನೀ ಸಿಗದಿರಲು ಬೇಸರವೇನಿಲ್ಲ ಕಣೋ....
ನನಗೆ ನಿನ್ನ ಬಯಕೆಯ ತುಡಿತವೂ ಮುದವೇ.


ಕಾಯುವುದು ಕಷ್ಟ
ಆದರೂ .....
ನಿನಗಾಗಿ ನಾನು ಕಾಯುವುದು ಇಷ್ಟ
ಕಾದಿದ್ದೇನೆ ನಾನು ....
ನೀನು ಸಿಗಲೆಂದು...

ನೀನು ನನ್ನವನೇ ಆಗಲೆಂದು
ಕಾದಿದ್ದೇನೆ ಮಧುರ ನೆನಪುಗಳೊಂದಿಗೆ
ನಿನಗಾಗೇ ದಿನವೂ, ಅನು ಕ್ಷಣವೂ
ಕಾದಿದ್ದೇನೆ ನಿನ್ನ ಕಿರುನಗೆಗಾಗಿ
ಅದ(ಧ)ರ ಜೇನಿಗಾಗಿ
ಕಾದಿದ್ದೇನೆ ನಿನ್ನ ಕಣ್ಣ ಬೆಳಕಿಗಾಗಿ
ನನ್ನ ಬದುಕಿಗಾಗಿ
ಕಾದಿದ್ದೇನೆ ನಿನ್ನ ಮಾತಿಗಾಗಿ
ಅದರಲ್ಲಿ ಒಲವಿಗಾಗಿ
ಕಾದಿದ್ದೇನೆ ನಿನ್ನ ಅಪ್ಪುಗೆಗಾಗಿ
ನನ್ನೇ ನಾ ಒಪ್ಪಿಸಿಕೊಳ್ಳುವುದಕಾಗಿ
ಕಾದಿದ್ದೇನೆ ನಮ್ಮ ಮಿಲನಕಾಗಿ
ನಿನ್ನೊಳು ನಾನೊಂದಾಗುವುದಕಾಗಿ
ಕಾಯುವಿಕೆಗಿಂತ ಮಿಗಿಲಾದ ತಪವಿಲ್ಲ
ಒಲಿಯದಿಹೆಯಾ ನನಗಾಗಿ ?


ಮನದ ತುಂಬಾ....
ಪ್ರೇಮಾಮೃತವ ತುಂಬಿದವನು
ಮರೆಯಾದ ಮಾತ್ರಕ್ಕೆ....
ಅವನಿಲ್ಲವೆಂದು ತಿಳಿಯಲೇ?
ಇರಬಹುದು ಇಲ್ಲೇ ಎಲ್ಲೋ ... ...

ಸುಳಿವ ತಂಗಾಳಿಯೊಡನೆ...
ಸುರಿವ ಮಳೆ ಹನಿಗಳಲಿ ....
ಬಿರಿವ ಹೂಗಳ ಚೆಲುವಲಿ ...
ನಗುವ ಕಂದನ ತುಟಿಗಳಲಿ ...
ಹರಿವ ನೀರ ಜುಳು ಜುಳು ನಾದದಲಿ
ಗೋಪುರದ ಗಂಟೆಯ ನಿನಾದದಲಿ....
ನಾ ನೋಡುವ ಸೊಗಸ ನೋಟದಲಿ...
ತುಂಬಿ ಹೋಗಿದ್ದಾನೆ ನನ್ನೆದೆಯ ಬಟ್ಟಲಲಿ ಅವನೊಲವ
ಅಳಲಾರೆ ಅವನ ನೆನೆದು....


ಅಪ್ಪಿಕೊಳ್ಳುವೆಯ ಒಮ್ಮೆ ಗಾಳಿಯೂ ನುಸುಳದಂತೆ ಬಿಗಿಯಾಗಿ, ಇನ್ಯಾರಿಗೂ ಸಿಗದಂತೆ ಮುಡಿಪಿಡುವೆಯಾ ನನಗೇ ಮೀಸಲಾಗಿ ಎಂದವನು ಅವನು. ಈಗೇಕೋ ... ಉಸಿರು ಕಟ್ಟಿದಂತಾಗುತ್ತಿದೆ ಎಂದು ಕೊಸರುತ್ತಾನೆ. ಕೊರಳ ಬಳಸಿದ ಕೈಗಳ ಮೆತ್ತಗೆ ತೆಗೆದು ತಲೆತಗ್ಗಿಸಿದೆ ... ಬಟ್ಟಲ ಕಂಗಳಲಿ ತುಂಬಿದ ನೀರವನಿಗೆ ಕಾಣದಿರಲಿ.
ಹೌದು ಪ್ರೀತಿ ಯಾವತ್ತೂ ಬಂಧನ ಅನಿಸಬಾರದೂ....
(ಪ್ಲೀಸ್ ಇದನ್ನು ಒಂದು ಚಿಕ್ಕ ಕಥೆ ಅಂತಾ ಓದಿ )




ಅದೇಕೋ.... ಏನೋ ...
ಅಂಟಿಕೊಂಡೇ ಇರುವಾಸೆ ...
ಎಲ್ಲರೂ ಸಾಯಲೆಂದೇ ಬರುವ ಈ ಜಗತ್ತಿಗೆ.



ನಲ್ಲನಿಲ್ಲದ ಹೊತ್ತು
ಚಂದ್ರಮನಿಲ್ಲದ ಆಗಸ .
ನೆನಪುಗಳು ಮಾತ್ರಾ
ಮಿನುಗುತ್ತವೆ .....
ನಕ್ಷತ್ರಗಳಾಗಿ ...
ಮನದ ತುಂಬಾ .

See More
Like
ನಲ್ಲನಿಲ್ಲದ ಹೊತ್ತು
ಚಂದ್ರಮನಿಲ್ಲದ ಆಗಸ .
ನೆನಪುಗಳು ಮಾತ್ರಾ
ಮಿನುಗುತ್ತವೆ .....
ನಕ್ಷತ್ರಗಳಾಗಿ ...
ಮನದ ತುಂಬಾ .

See More


ರವಿಯಿರದ ಬಾನಿಂದ
ಅವನಿಗೆ ಮಳೆ ಸುರಿಯುತಿದೆ
ಅವನಿರದ ಕತ್ತಲಲ್ಲಿ,
ಅವನ ನೆನಪುಗಳ ಮಳೆಗೆ
ಕಣ್ಣು ಒದ್ದೆಯಾಗುತಿದೆ


ಚೆಂದದ ಕವಿತೆ ಬರೆಯಬೇಕು,
ಏನು ಮಾಡುವುದು?
ತುಂಬಾ ಪ್ರೀತಿಸುವ ಆ ಮುದ್ದು ಮುಖದ ಚೆಲುವ
ದೂರವೇ ಉಳಿದಿದ್ದಾನೆ...ಪ್ರೀತಿಸುವುದನೂ ಮರೆತು,
ಅವನು ತನ್ನ ಕೆಲಸದಲ್ಲಿ ನಿರತ....ನಾನವನ ಧ್ಯಾನದಲ್ಲಿ ...

ಬರೆಯುವುದಾದರೂ ಏನನ್ನು...
ನನಗಿಲ್ಲಿ....ಭಾವನೆಗಳಿಗೆ ಬರ.


ಸದಾ ಜೊತೆಗಿದ್ದ ಸ್ನೇಹದ ಸವಿನೆನಪುಗಳು ...
ನಿನ್ನೊಡನೆ ಸುಖಿಸಿದ ಉತ್ಕಟ ಕ್ಷಣಗಳು ...
ಎದೆಯಲ್ಲಿ ಹಸಿಯಾಗೇ ಉಳಿದಿವೆ.
ಕಣ್ಣುಗಳ ಆಗಾಗ್ಗೆ .... ತೇವವಾಗಿಸುತಿವೆ
ನಿಂತಲ್ಲಿ.... ಕುಳಿತಲ್ಲಿ .... ಕಂಡ ಕಂಡಲ್ಲಿ... ...
ಕೇಳುವ ಮಾತುಗಳಲ್ಲಿ .... ಎಲ್ಲೆಲ್ಲಿಯೂ ...
ನಿನ್ನ 'ಪ್ರೀತಿ'ಯೇ ಗೋಚರಿಸುತಿದೆ ಕಣೋ ....
ಪಡೆದ ಪ್ರೀತಿಯ ಸಂತಸಕಿಂತಲೂ .... ತೀವ್ರ...
ನಿನ್ನ ವಿರಹದ ಯಾತನೆ
ದಿಟ ಕಣೋ....
ನೀನೆಂದೂ ನನ್ನೊಡನೆ ನೆನಪಾಗಿ ಇರುತ್ತೀಯ ಗೆಳೆಯಾ ...
ಹಚ್ಚಿಟ್ಟ ಹಣತೆ ಆರಬಹುದು, ಆದರಿಲ್ಲಿ ಕತ್ತಲಾಗುವುದಿಲ್ಲ.
ನೀ ನನ್ನ ಅಗಲಿರಬಹುದು,
ಸಾವಿನೊಡನೆ ನಮ್ಮ ಸಂಬಂಧವೇನೂ ಮುಗಿಯುವುದಿಲ್ಲ.



ಅವನೆದೆಗೊರಗಿ...
ಅದೆಷ್ಟೋ ಮಾತುಗಳ ಹೇಳಬೇಕೆಂದು ಕೊಳ್ಳುತ್ತೇನೆ...
ಅವನೆದುರು ನಿಂತಾಗ....
ಆ ನಗುವ ಕಂಡಾಗ....
ನನ್ನೇ ನಾ ಮರೆಯುತ್ತೇನೆ...
ನಾನೇನು ಮಾಡಲಿ ಹೇಳಿ
ಅವನು ಚೆಲುವ. ...
ಮುದ್ದು ಮುದ್ದಾಗಿ ನಗುತ್ತಾನೆ
ತಪ್ಪು ನನ್ನದಾ? ಅವನದ್ದಾ






ನನ್ನ ಪುಟ್ಟ ಮಗ ನನ್ನ ಪ್ರಪಂಚ.
ಮೊನ್ನೆ ಇಂದ ಟೆಸ್ಟ್ ಶುರುವಾಗಿದೆ. ಅವನು ಆರಾಮಾಗಿದ್ದಾನೆ , ಟೆನ್ಶನ್ ಮಾತ್ರಾ ನನ್ನದು. ಒಂದೆಡೆ ಕೂರಿಸಿ ಓದಿಸಿ, ಬರೆಸುವುದು ಅಷ್ಟು ಸುಲಭವಲ್ಲ.ಸರಿಯಾದಾಗೆಲ್ಲಾ....ಮುತ್ತು ಕೊಟ್ಟು ಶಭಾಷ್ ಮಗನೆ ಅನ್ನಬೇಕು. ತಪ್ಪಾದಾಗ ...ಬಡ್ಕೊಂಡು ತಿದ್ದಬೇಕು smile emoticon ನನಗೂ ಒಂದು ಕಡೆ ಕೂರೋಕೆ ಕಷ್ಟಾನೆ. ನೆನ್ನೆಯೂ ಹಾಗೆ ....ಅವನಿಗಿಷ್ಟವಾದ ಸಬ್ಜೆಕ್ಟ್ ಜನರಲ್ ಸೈನ್ಸ್ ಚಕಚಕಾಂತ ಓದಿಸಿ ನಿರುಮ್ಮಳವಾಗಿ ....ಕೆಲವು ಪದಗಳ ಅಭ್ಯಾಸಕ್ಕೆ ಬರೆಯಲು ಹೇಳಿ, ಅಬ್ಬಾಬೆನ್ನು ನೋಯ್ತಿದೆ ಮಗನೆ ಎಂದು ಸೋಫಾಕ್ಕೆ ಒರಗಿದೆ. ಅಮ್ಮಾ ನಂಗೂ ಬೆನ್ನು ನೋವು ಎಂದು ಮೂತಿ ಮುಂ...
ದಕ್ಕೆ ಮಾಡಿತು. ನಿಂಗೇನು ಆಗಿದ್ಯೋ ಎಂದು ಸಿಡುಕಿದೆ. ನಿಂಗೇನಾಗಿದೆ ಎಂದು ಮರು ಪ್ರಶ್ನಿಸಿತು. ನನಗೆ ವಯಸ್ಸಾಗಿದೆ ಕಣೋ ಎಂದೇ. ಪಕ ಪಕನೇ ನಕ್ಕಿತು, ಅಮ್ಮಾ ಜೂಟ್ ಬೊಲ್ತಿಯ ಅಂತೂ. ಸುಮ್ನೆ ನೋಡಿದೆ ...ನಿನಗೆ ಹೇರ್ಸ್ ಕಾಲಾ ಇದೆ!!! ನೀನು ನನ್ನ ಹಾಗೇ ಶಾರ್ಟ್ಸ್, ಟೀ ಶರ್ಟ್ ಹಕ್ಕೊಂಡಿದ್ದಿ? ಬ್ಯೂಟಿಫುಲ್ ಇದ್ದಿ, ಅಚ್ಚಾ ಖಾನಾ ಮಾಡ್ತಿ, ನನ್ನ ಕೇರ್ ಮಾಡ್ತಿ, ಜವಾನ್ ಇದ್ದೀ ,ಏಳು ಅಮ್ಮ ಸುಳ್ಳು ಹೇಳಬೇಡಾ ಎಂದು ಅನ್ನಬೇಕಾ ?
ಮಗನಿಗೆ ಯಾವತ್ತೂ ಅಮ್ಮ ಸುಂದರಿಯೇ ..... ಕಣ್ಣು ತೆರೆದು ಮೊದಲು ಕಂಡ ದೇವತೆ ಅವಳೇ ಅಲ್ವಾ ?
ಆಯಾಸ ಮರೆಯಾಯ್ತು .... ಮಕ್ಕಳು ನಮ್ಮ ಬದುಕಲ್ಲಿ ಉತ್ಸಾಹ ತುಂಬಿದರೆ ....ಎಷ್ಟು ಚೆಂದ ಅಲ್ವಾ ?
ನಿನಗಾಗಿ ಇನ್ನಷ್ಟು ಸ್ಟ್ರಾಂಗ್ ಆಗಿ ಬದುಕುವ ಅಗತ್ಯವಿದೆ ಕಂದ ಎಂದು ಎದ್ದು ಟ್ರೇಡ್ ಮಿಲ್ ತುಳಿಯೋಕೆ ಹೊರಟೆ.



ಮಳೆ ಬರುವಾಗ......
ಅದೆಷ್ಟು ಪ್ರೇಮ ಕಾಮಭರಿತ ಪದ್ಯಗಳ ಜನನ !!!
ಈಗ .. ಶೀತದಲಿ...ತಲೆನೋವಿನಲಿ...ಕೆಮ್ಮಿನಲಿ...
ಹುದುಗಿಹೋಯ್ತು
ಜ್ವರದ ಸುಡುವಿಕೆಯಲಿ ......
ಅವನಿತ್ತ ಶಾಖದ ನೆನಪು
ಕಳೆದು.....
ಎಲ್ಲವೂ ....ಖಾಲಿ...ಖಾಲಿ....
ಬಾಯಲ್ಲಿ ಕಹಿ ಮಾತ್ರಾ ಉಳಿದಿದೆ
ಸಾಕೆನಿಸಿದೆ ....ಈ ಮಳೆ .....ನಿಜಾ .....
ಬೇಕವನು ನನಗೂ ....ನೋಡುವಾಸೆ... .... "ಸೂರ್ಯ".



ಒಪ್ಪಿಕೊಂಡ ಮೇಲೆ. ...
ಅಪ್ಪಿಕೊ ಅಷ್ಟೇ. ...ಪರೀಕ್ಷಿಸಬೇಡ.
ಸದಾ ಜೊತೆಗಿರುವ ಸುಖ ಇರದಿದ್ದರೂ ...
ನಿರ್ಲಕ್ಷ್ಯದ ನೋವು ನೀಡಬೇಡ.


ನೀ ಮುತ್ತಿಟ್ಟ ಕಣ್ಣುಗಳ ಮುಚ್ಚಿಬಿಡುತ್ತೇನೆ.....
ಕನಸಲ್ಲಿ ಬಂದು ಬಿಡೋ.



ಸುಖ ಇರಬೇಕು. ...ನಮ್ಮವರ ಜೊತೆಗೆ ಹಂಚಿಕೊಳ್ಳೋಕೆ.
ಕಷ್ಟ ಬರಬೇಕು. ...ನಮ್ಮವರು ಯಾರೂಂತ ಗೊತ್ತಾಗೋಕೆ.



ಅವನ ಸಂಗ ಬಯಸುವ ಮನ......
ಮಾತಿಗೆ ತಡಕಾಡಿ...ಮೌನ ತಾಳಿದೆ.
ಅವನೊಮ್ಮೆ ನಕ್ಕರೇ ಸಾಕು. ...
ಬಾಹುಗಳಲಿ ಬಂಧಿಯಾಗಲು ಕಾತರಿಸಿದೆ.


ಪ್ರೀತಿಯೆಂದರೇ....
ಮುಖ ನೋಡಿ ಮರುಳಾಗುವುದಲ್ಲ, ಆತ್ಮಸಾಂಗತ್ಯ
ಜೇನುಸುರಿವ ಮಾತನಾಡುವುದಲ್ಲ ., ಬಿರುಮಾತುಗಳಾಡಿ ನೋಯಿಸದಿರುವುದು
ಕೈ ಕೈ ಹಿಡಿದು ಓಡಾಡುವುದಲ್ಲ ಪ್ರೀತಿ, ಕೈಬಿಡದಂತೆ ಕಾಪಿಡುವುದು
ಪ್ರೀತಿಯೆಂದರೆ ದೇಹಗಳ ತಬ್ಬುವಿಕೆಯಲ್ಲ, ಮನಸುಗಳ ಮಿಲನ...

ಕಾಣದಾಗ..... ವಿರಹದಿ ಪ್ರಲಾಪಿಸುವುದಲ್ಲ ಪ್ರೀತಿ, ಜೊತೆಗಿರುವಾಗ ಅನ್ಯೋನ್ಯವಾಗಿರುವುದು
ಕಾಡಿ ಕೂಡುವುದಲ್ಲ ಪ್ರೀತಿ, ಕೂಡಿದ ಮೇಲೆ ಕಾಡದಿರುವುದು
ಪ್ರೀತಿಯೆಂದರೆ ಒಬ್ಬರಿಗಾಗಿ ಮತ್ತೊಬ್ಬರು ಸಾಯುವುದಲ್ಲ
ಪ್ರೀತಿಪಾತ್ರರ ಸಂತೋಷದಲಿ ಬದುಕುವುದು
ಪ್ರೀತಿಯೆಂದರೆ ಪರಸ್ಪರ ನಂಬಿಕೆ, ಕಾಳಜಿ
ಎಂದೂ ಜೊತೆಗಿರುವ ಭದ್ರತೆಯ ಭರವಸೆ ನೀಡುವುದು
ಪ್ರೀತಿಯೆಂದರೆ ...ಪಡೆದು ಹೆಮ್ಮೆ ಪಡುವುದಲ್ಲ, ಕೊಡುವುದು ...ಎಲ್ಲವನು ಕೊಟ್ಟು ನಿರಾಳವಾಗಿಬಿಡುವುದು.


ಮಧ್ಯ ರಾತ್ರಿಯಲ್ಲಿ ತಟ್ಟನೇ ಎಚ್ಚರಗೊಂಡಾಗೆಲ್ಲಾ...
ಅನಿಸುತ್ತದೆ--
ಬಹುಷಃ .....
ಅವನು ಮಗ್ಗಲು ಹೊರಳುತ್ತಾ....
ನನ್ನ ಹೆಸರ ಕನವರಿಸಿರಬೇಕು.




ಒಂದಷ್ಟು ಸುಂದರ ಕ್ಷಣಗಳ ಸುರಿದು ಹೋಗಿದ್ದಾನೆ....
ಅ ಚೆಂದದ ನೆನಪುಗಳಲಿ ಬದುಕಿರು
ಮತ್ತೆ ನಾ ಬರುವವರೆಗೂ ಎಂದು...
ವಿರಹವೂ ಚೆಂದವೇ.....
ಒಲವಿನಲಿ ನಂಬಿಕೆ ಇರಲು.



ನನಗೆ ಹತ್ತಿರವಾಗಲು ಬಯಸುವ ಎಲ್ಲರೂ ನನಗೆ ತುಂಬಾ ಚೆನ್ನಾಗಿ ಅರ್ಥವಾಗುತ್ತಾರೆ. ಅವರಿಂದ ನಾನು ಎಷ್ಟು ಅಂತರದಲ್ಲಿ ಇರಬೇಕು ಎಂದು ಕಲಿಸುತ್ತಾರೆ.


ಇದೇಕೆ ಇಷ್ಟು ಮಳೆ ಸುರಿಯುವುದೋ...?
ನೀನು ಬೇಕೆಂದು ಹಂಬಲಿಸುವಂತೇ
ಅದ್ಹೇಗೆ ನೀ ಹೀಗೆ ದೂರವುಳಿದಿರುವೆಯೋ..?
ನನ್ನನೇ ಮರೆತವನಂತೆ
ಚಟಪಟ ಮಳೆ ಹನಿಗಳು...

ನಿನ್ನನೂ ಚಡಪಡಿಸುವಂತೆ ಮಾಡಲಾರವೇನೋ...?
ಬಂದು ಬಿಡೋ ನನ್ನೆದೆಯ ಅಳಲಿಗೆ...ಕಿವಿಗೊಟ್ಟು
ನನ್ನವನೇ......
ಮಳೆ ನಿಂತರೂ.....ತೊಟ್ಟಿಕ್ಕುತ್ತಿವೆ ಕಣೋ...ನಿನ್ನ ನೆನಪುಗಳು.
ಕೊಚ್ಚಿಕೊಂಡು ಹೋಗುವ ಮಳೆ ಸುರಿಯುವ ಮುನ್ನ. ...
ಭೂತಾಯಿ ಕಂಪಿಸಿ, ಒಡಲಲ್ಲಿ ಸೇರಿಸಿಕೊಳ್ಳುವ ಮುನ್ನ. ..
ಒಂದಷ್ಟು ಹೊತ್ತು ಜೊತೆಯಾಗಿರೋಣ ...
ಪ್ರಕೃತಿ ವಿಕೋಪದ ಮುಂದೆ-
ನಮ್ಮದೇನು ಆಟಾಟೋಪ?
ಸರಿಸಿಬಿಡೋ...ಮುನಿಸುಗಳ
ಮತ್ತೆ ನೆನಪಿಸಿಕೋ....ಒಲವಿನ ಘಳಿಗೆಗಳ
ಕಾಯುವಿಕೆಯ ನನ್ನ ಸಹನೆ ಕೊನೆಯಾದರೂ...
ಬಾರದಿರುವ ನಿನ್ನ ನೆಪಗಳು ಮುಗಿದಿಲ್ಲ
ಬಂದು ಬಿಡೋ.... ಸ್ವಲ್ಪ ಪ್ರೀತಿಸೋಣ.


ದೂರದೂರಿನಲಿ ಗೆಳೆಯ ನೀನಿರುವೆ
ನಿನ್ನ ಬರುವಿಕೆಗೆ ನಾ ಕಾಯುತಿರುವೆ ,,,,,
ಹೇಳದೆಯೂ ನಾ....ನಿನಗದು ತಿಳಿದು
ಬಂದುಬಿಡೋ ಗೆಳೆಯಾ....ಮುತ್ತಿಡುವೆ.



ಮಳೆ ಎಂದರೇ. ..
ಗುಡುಗು-ಆರ್ಭಟ
ಮಿಂಚಿನ ಸೆಳೆತ
ಸಿಡಿಲ ಹೊಡೆತ
ನೀರ ಸುರಿತ...

ಎಲ್ಲಾ ಒದ್ದೆ. ...ಮುದ್ದೇ
ಅಲ್ಲಲ್ಲಿ ಗೊಚ್ಚೆ ಗೊಚ್ಚೆ
ಮಳೆಯೆಂದರೇ...
ಕೆಲವೊಮ್ಮೆ ಬೇಕೆನಿಸುವ ಹಿತ
ಇನ್ನೊಮ್ಮೆ ಪಿರಿ ಪಿರಿ ಬೇಸರ
ಥೇಟ್ ನಿನ್ನಂತೆಯೇ ಈ ಮಳೆ
ಹೌದು ಕಣೋ.....
ಮಳೆ ಬೀಳುವಾಗೆಲ್ಲಾ.....ನೀನು ನೆನಪಾಗುತ್ತೀ.


ಎಲ್ಲವೂ ಸುಳ್ಳಾದರೂ. ....
ನಿನ್ನ ನೆನೆಯವಿಕೆಯಲಿ ಮಧುರಾನುಭೂತಿ ಸತ್ಯ.
ಯಾವುದೂ ಶಾಶ್ವತವಲ್ಲದಿದ್ದರೂ ....
ನಿನ್ನ ಬಯಸುತಿದೆ ನನ್ನುಸಿರು ನಿತ್ಯ.



ನೀನೆಷ್ಟು ದಿನ ದೂರ ಇದ್ದರೂ. ....
ನನ್ನೆಡೆಗೇ ಮರಳುತ್ತೀಯ ಬಲ್ಲೆ
ಆದರೇ.....
ನಿನ್ನಾಗಮನಕೆ-
ಕಾಯುವುದು ಕಷ್ಟ. .....

ನಿನ್ನ ಅಗಲಿಕೆಯ ವೇದನೆ ತೀವ್ರ ಕಣೋ
ಮರೆಯಬಹುದೇನು ನಿನ್ನ
ಚೆಂದದ ಮೊಗವ....
ಸುಂದರ ನಗುವ...
ಹೇಗೆ ಮರೆತೇನು ಹೇಳು?
ನೀನಿತ್ತ ಒಲವ.
ಬೆಸೆದ ಬೆರಳುಗಳ ಬಿಸಿ
ನೊಸಲ ಚುಂಬಿಸಿದ ಹಸಿ ಇನ್ನೂ ಇದೇ...
ಬಯಸಿ ಅದನೇ ....ಮನಸು ...
ಕಣ್ಣುಗಳು ತೇವ ಕಣೋ
ಪ್ರೀತಿ ಹನಿದಾಗಲೇ..
ವಿರಹದ ತಾಪ ತಣಿಯುವುದು ಕಣೋ
ನಿನ್ನೊಲವ ವರ್ಷಧಾರೆ ಸುರಿವುದೆಂದೋ...?


ನನ್ನ ಬಾಳ ದಾರಿಯಲ್ಲಿ
ಸಿಕ್ಕ ನೀನು
ಬರಿಯ....
ನೆನಪಿನ ಮೈಲಿಗಲ್ಲು



ಹಣತೆಗಳ ಹಚ್ಚಿದೇ...
ಚೆಲ್ಲಿದ ಬೆಳಕು
ಅವನೊಲವ ನೆನಪಿಸಿತು
ನನಗಿರಲಿ ಅದೆಂದಿಗೂ....ಕಣ್ಮುಚ್ಚಿ ಕೈಜೋಡಿಸಿದೆ
ಸಂಪನ್ನವಾಯ್ತು ನನ್ನ ದೀಪಾವಳಿ