Saturday, 17 January 2015

ನಿದ್ರಿಸಬೇಕೆನುವ ನನ್ನ ಕಣ್ಣುಗಳಿಗೆ 
ನಿನ್ನ ನೆನಪುಗಳ ಕಾಟ
ಮುಚ್ಚಲು ಆಗುತ್ತಿಲ್ಲ ರೆಪ್ಪೆಗಳ
ಮುಚ್ಚಿದ್ದರೇ....
ಕನಸಿನಲ್ಲಿಯಾದರೂ 
ಬರುತಿದ್ದೆಯೇನೋ.....
ಯಾಕೆ ಹೀಗೆ????
ಅಂದು -
ಕಾಡಿಸಿ
ಪೀಡಿಸಿ
ಪ್ರೀತಿಸಿ
ಮುದ್ದಿಸಿದವನು
ಇಂದು-
ಕಾಯಿಸಿ
ನೋಯಿಸಿ
ಕಂಬನಿಯಾಗಿಸಿ
ದೂರ ಉಳಿದಿದ್ದಾನೆ.
ನನ್ನ ಪದ್ಯಗಳು,
ಬರಿಯ ಸುಂದರ ಪದಗಳ ಜೋಡಣೆಗಳಲ್ಲ
ನನ್ನ ಎದೆಯೊಳಗೆ ನಿನಗಾಗಿ ಬಚ್ಚಿಟ್ಟ ಪಿಸುನುಡಿಗಳು
ಅದರಲ್ಲಿನ ಗಾಢ ಒಲವ ಓದದೇ, ಅರ್ಥೈಸದೇ, ಅನುಭವಿಸದೇ ...
ದೂರ ಇರುವ ಮೂಢ ಅನಕ್ಷರಸ್ತ ನೀನು .
ಬೇಡವೆಂದರೂ ಮತ್ತೆ ಮತ್ತೆ ಕಾಡುತ್ತಿದೆ
ಅದೇ ನೆನಪುಗಳು.....
ಜೊತೆಯಾಗಿ ನಡೆಯುವಾಗಿನ 
ಏಳು ಬೀಳುಗಳು. ....
ಕೊಟ್ಟ ಭರವಸೆ, ಹುಸಿಯಾದ ಸವಿಮಾತುಗಳು
ತಪ್ಪು ನನ್ನದೇ...
ಎಲ್ಲವನೂ ಸಾಕಷ್ಟು ಸುಖಿಸಿ,
ಸಾಕು ಎಂದು ಹೊರಟವನೊಡನೆ
ಬದುಕ ಬಯಸಿ ಬೆಂಬತ್ತಿದ್ದು
ನನ್ನೊಲವ ಸರಿಸಿ, ನೆಲವನಪ್ಪಿದವನ
ನೆನೆದು
ಸುರಿವ ಕಣ್ಣೀರಿಗೆ ಕೊನೆಯಲ್ಲಿ? ??
ಕ್ಷಮಿಸಿ ನನ್ನಲಿ ಮಾತುಗಳಿಲ್ಲ.
ಆಡದೆ ಉಳಿದಿಹ ಮಾತು ನೂರಿದೆ ಎಂದು ಹಾಡಿದವನೊಡನೆ ಮಾತುಗಳ ಮುಗಿಸಿದ್ದೇನೆ .
ಕನಸುಗಳು ನನಗಿಲ್ಲ, ಹಳೆಯ ನೆನಪುಗಳ ಕಾಟ ಇಲ್ಲ, ಮತ್ತೆ ಮಾತೇನಿದೆ? 
ತಬ್ಬಿದ ತೋಳುಗಳಲಿ, 
ಅವನ ಎದೆಯ ಮೇಲೆ ಮೊಗವಿರಿಸಿ, 
ನನ್ನೊಳಗಿನ ಮಡುಗಟ್ಟಿದ ನೋವುಗಳ ಕರಗಿಸಿ ಕಣ್ಣೀರಾಗಿಸಿದ್ದೇನೆ.
ಮಿಲನ ಸುಖದಲಿ ನೋವುಗಳ ಮರೆಸಿದವನು , ಎಲ್ಲವನ್ನೂ ಕೊಂಡೊಯ್ದಿದ್ದಾನೆ.
ನನ್ನಲಿ ಏನು ಉಳಿಸಿಲ್ಲಾ.
ಹಗಲು ರಾತ್ರಿಯ ಅರಿವಿರದೆ ಪ್ರೀತಿಯಲ್ಲಿ ಮುಳುಗಿ ತೇಲಿದ ಸುಖ ನನದು
ನನಗೆ ಶುಭೋದಯ, ಶುಭ ರಾತ್ರಿ ಹೇಳಬೇಡಿ.
ನನ್ನಲಿ ಮಾತುಗಳಿಲ್ಲ......
ದಯವಿಟ್ಟು ಹೇಗಿದ್ದೀಯಾ ಕೇಳದಿರಿ,
ಮನದಲ್ಲೇ ಇರುವವನ ಸಖ್ಯದಲಿ ನಾನೀಗ, ಮುಂದೆಂದೂ ಖುಷಿಯಾಗಿರುವೆ,
ಕ್ಷಮಿಸಿ ಮಾತುಗಳಿಲ್ಲ ನನ್ನಲ್ಲಿ.
ಮಾತುಗಳು ಬೇಕಾಗಿಯೂ ಇಲ್ಲ,.
ನೋಡುವ ನೋಟವೆಲ್ಲವೂ ಸುಂದರವೇ 
ಮನದಲಿ ಪ್ರೀತಿ ತುಂಬಿರಲು 
ಬಾನಲಿ ಭಾಸ್ಕರನ ಅಸ್ತಮಾನದ ಬೆರಗು
ಇರುಳಲಿ ಚಂದ್ರಮನ ತಂಪಿನ ಸೊಗಸು
ಎರಡೂ ಹಿತವೇ ...ನನ್ನವನು ಬಳಿಯಿರಲು.
ಬದುಕುವುದು ಹೇಗೆ ಎಂದು ಹೇಳಿಕೊಟ್ಟವರಷ್ಟೇ ಅಲ್ಲ ಹೇಗೆ ಬದುಕಬಾರದು ಅಂತಾ ಹೇಳಿಕೊಟ್ಟವರೂ ನಮಗೆ ಮಹಾನ್ ವ್ಯಕ್ತಿಗಳು".
ಇಂತಹದ್ದನ್ನು ಬಹಳಷ್ಟು ಓದಿರುತ್ತೇವೆ , ಓದಿದ್ದ ಒಳ್ಳೆಯದನ್ನು ನಮ್ಮ ದಿನದಿನದ ಬದುಕಲ್ಲಿ ಉಪಯೋಗಿಸುವುದನ್ನು ಮರೆಯುತ್ತೇವೆ ಅಲ್ವಾ ? ನಾನು ಹಾಗಲ್ಲ smile emoticon
ನಿರೀಕ್ಷೆಗಳು ನಿರಾಸೆಗೆ ಕಾರಣ ಅಂತಾ ಗೊತ್ತಿದ್ರೂ ನಿರೀಕ್ಷೆ ಮಾಡಿಬಿಡ್ತೇನೆ ಕೆಲವೊಮ್ಮೆ ....(.ತಪ್ಪಲ್ಲ ಅಲ್ವಾ ? ಅಳುವುದು, ನಗುವುದು, ಮಿಡಿಯುವುದು ......ಎಲ್ಲಾ ಭಾವನೆಗಳಲಿ ನಮ್ಮ ಮನಸ್ಸು ಜಳಕ ಮಾಡಬೇಕು, ನಾವು ಮಾಗಬೇಕು.) ಇವತ್ತೂ ಹಾಗೆಯೇ .....
ಸುಮಾರು ಇಪ್ಪತ್ತು ದಿನಗಳಿಂದ ನೋಡದೆ ಇದ್ದ ನನ್ ಫ್ರೆಂಡ್ ಇವತ್ತು ಇಲ್ಲಿಗೆ ಬಂದಿದಾರೆ, ಬಂದ ತಕ್ಷಣ ನನ್ನ ಮನೆಗೆ ಬರ್ತಾರೆ ಅಂತಾ ನಿರೀಕ್ಷಿಸಿದೆ , ನೋಡುವ ತವಕ ನನ್ನಲಿದೆ ನಿಜಾ ...... ಆದರೆ .....
ಯಾವುದೋ ಒಂದು ವ್ಯಕ್ತಿಯ ನೆನಪೋ, ಯಾವುದೋ ಪರಿಹಾರ ಸಿಗದ ಸಮಸ್ಯೆಯೋ ಪದೇ ಪದೇ ಕಾಡುತಿದ್ದರೆ, ಸ್ವಲ್ಪ ಸಮಯ ಅದನ್ನು ಪಕ್ಕಕ್ಕಿರಿಸಿ , ಬೇರೆ ಯೋಚನೆ ಮಾಡು ಸ್ವಲ್ಪ ಸಮಯ ಅದಕ್ಕೆ ಕೊಟ್ಟುಬಿಡು, ಕಾಲ ಸರಿಪಡಿಸುತ್ತದೆ , ತಿಳಿಯಾದ ಮನಸ್ಸು ಸಮಸ್ಯೆಗೆ ಪರಿಹಾರ ಕಂಡುಹಿಡಿಯಲು ಸಹಕರಿಸುತ್ತದೆ ---ಈ ಗುರುವಾಣಿಯನ್ನು ಆಗಾಗ್ಗೆ ಆಳವಡಿಸಿಕೊಳ್ಳುತ್ತೇನೆ. ಏನು ಆಗಬೇಕೋ ಅದು ಆಗುತ್ತೆ , ಏನೇನು ಸಿಗಬೇಕೋ ಅದು ಸಿಗುತ್ತೆ 
ಒಂದು ಸಂಬಂಧದಲ್ಲಿ ಒಬ್ಬ ವ್ಯಕ್ತಿ ಇನ್ನೊಬ್ಬ ವ್ಯಕ್ತಿಯನ್ನು ನಂಬಿಸಲು ಸಾಕ್ಷಿ ಸಮೇತ ರುಜುವಾತುಪಡಿಸಬೇಕಾದ ಗಳಿಗೆ ಜೀವನದಲ್ಲಿ ಅತ್ಯಂತ ದುರ್ಬಲ ಗಳಿಗೆ ಆಗಿರುತ್ತದೆ. ಸಂಬಂಧಗಳು ಏರ್ಪಟ್ಟಷ್ಟು ಸುಲಭವಲ್ಲ ,ಕೆಡದಂತೆ ನೋಡಿಕೊಳ್ಳುವುದು.
ಯಾವುದೇ ಸಂಬಂಧಗಳ ಬಿರುಕು ತೀಕ್ಷ್ಣವಾದ ಮಾತುಗಳಿಂದಾ.
ಮುನಿಸಿಕೊಳ್ಳುವುದು, ಬಿರುನುಡಿಗಳಾಡುವುವುದು ಸಹಜ , ಆದರೆ ಮಾತು ಬಿಡುವುದು ಇದ್ಯಲ್ಲಾ ಅದು ಬಲು ಹಿಂಸೆ . ಸಂದರ್ಭ ಕೆಲವೊಮ್ಮೆ ಭಿನ್ನಾಭಿಪ್ರಾಯ ತರುತ್ತದೆ. ಒಬ್ಬರು ಕೋಪಗೊಂಡಾಗ , ಮತ್ತೊಬ್ಬರು ತಾಳ್ಮೆಯಿಂದಾ, ಎದುರುತ್ತರ ಕೊಡದಿದ್ದರೆ, ಪರಿಸ್ಥಿತಿ ತಾರಕಕ್ಕೆ ಹೋಗುವುದನ್ನು ನಿಭಾಯಿಸಬಹುದು, ಸಂಬಂಧಗಳ ಕೆಡಿಸಿಕೊಳ್ಳದಿರಬಹುದು.
ನನ್ನ ಬಂಧುಗಳು ಎಷ್ಟೋ ಸಲ , ನನ್ನ ತಪ್ಪಿಲ್ಲದ್ದಾಗ್ಯೂ ನನ್ನಲ್ಲಿ ಮಾತುಬಿಟ್ಟ ಸಂದರ್ಭವಿದೆ, ಅದಿರಲಿ ಗಂಡ ಹೆಂಡಿರು ಕ್ಷುಲ್ಲಕ ವಿಷಯಗಳಿಗೆ ವಾರಗಟ್ಟಲೆ ಮಾತು ಬಿಡುವ ಜೋಡಿಗಳೂ ನಮ್ಮಲ್ಲಿವೆ. ಯಾವುದೇ ಸಂಬಂಧ ಅಷ್ಟು ಸುಲಭವಾಗಿ ಮುರಿಯಲು ಆಗುತ್ತಾ ? ನಾನಂತೂ.....ಅವರು ಮಾತು ಬಿಟ್ರೆ ಸುಮ್ನಿರ್ತೇನೆ , ಬಂಧುಗಳು ಶುಭ ಸಂದರ್ಭಗಳಲ್ಲಿ ಭೆಟ್ಟಿ ಆಗಲೇಬೇಕಾಗುತ್ತೆ , ಮಾತಾಡಿಸ್ತಾರ? ಆಡಿದ್ರೆ, ಏನೂ ನಡೆದೇ ಇರಲಿಲ್ವೇನೋ ಅನ್ನೋ ಹಾಗೆ ನಗು ನಗುತ್ತಾ ಮಾತಾಡಿರ್ತೇನೆ . ಇದು ನನ್ನ ದೌರ್ಬಲ್ಯ ಅಲ್ಲ , ಒಳ್ಳೆಯತನ . ಪ್ರತಿಯೊಂದು ಕ್ಷಣವನ್ನೂ ಖುಷಿಯಾಗಿರಬೇಕು ಎನ್ನುವ ನನಗೆ ಯಾರ ಮೇಲೆಯೂ ಕೋಪ ,ದ್ವೇಷ ಸಾಧಿಸುವ ಮನಸಿಲ್ಲ .
ಮಾತು ಬಿಡೋದು ಅಂದ್ರೆ ?ಚೀ...
ದಿನ ಬೆಳಗಾದ್ರೆ ಮುಖ ನೋಡೋದು ಹೇಗೆ ಸಾಧ್ಯ?
ಒಟ್ಟಿಗೆ ಬದುಕುವಾಗ .....
ಹೊರಗೆ ದುಡಿದು ಬರುವ, ಒತ್ತಡಗಳಲ್ಲಿ ಸಿಲುಕುವ ಗಂಡಸು , ಮನೆಗೆ ಬಂದಾಗ ತನ್ನವರ ಮೇಲೆ ಅಸಹನೆ ತೋರಿಸಿಕೊಂಡರೆ....
ನಾಲ್ಕು ಗೋಡೆಗಳೇ ತನ್ನ ಪ್ರಪಂಚವೆಂದು ಹಿರಿಯರ, ಮಕ್ಕಳ ಜವಾಬ್ದಾರಿಯಲ್ಲ್ಲಿ ದಿನವೆಲ್ಲಾ ದುಡಿವ ಗೃಹಿಣಿ ತನ್ನ ಅಸಹನೆಯನ್ನ್ನು ತನ್ನವನ ಮೇಲೆ ತೋರಿಸಿದರೆ ....
ಒಂದಷ್ಟು ಸಹನೆ .....ಒಬ್ಬರಿಗೊಬ್ಬರು ಎದುರಾಡದೆ ಇದ್ದುಬಿಟ್ಟರೆ , ಪರಿಸ್ಥಿತಿ ಶಾಂತಗೊಂಡಾಗ ತಪ್ಪು ಸರಿಗಳ ವಿವೇಚನೆ ಬರದೆ ಎಲ್ಲಿ ಹೋಗುತ್ತೆ ?
ಎಷ್ಟು ಜನ ಹೀಗಿರ್ತಾರೋ ಗೊತ್ತಿಲ್ಲ .
ಬೆಳಗ್ಗೆ ದುಡಿಯಲು ಹೊರಡುವ ಗಂಡನಿಗೆ ಒಂದು ಹಗ್ ಮಾಡಿ ಬೀಳ್ಕೊಡುವ, ಸಂಜೆ ಮನೆಗೆ ಬರುವಾಗ ನೀಟಾದ ಡ್ರೆಸ್ ನಲ್ಲಿ ನಗುತ್ತಾ ಬಾಗಿಲು ತೆಗೆಯುವ ಹೆಂಡತಿ ಸಂಸಾರ ನಿರ್ವಹಣೆಯ ಕಲಿತ ಜಾಣೆ .
ಸಿಟ್ಟು ಸೆಡವು ಗುಡುಗು ಸಿಡಿಲು ತಂದ ನೋವೂ ನಮ್ಮದೇ... ಶುಭ್ರ ಗಗನ ಆಗಲು ಜೀವನ ಪ್ರೀತಿಯೊಂದೇ ಸಾಲದೇ .....?
ನನ್ನ ಹೃದಯದ ಮಿಡಿತಕ್ಕೆ
ನಿನ್ನ ಪ್ರೀತಿಯೇ ಉಸಿರು
ಸಮಯದ ಪರಿವೆಯಿರದೇ
ಜಪಿಸಿದೆ ನಿನ್ನದೇ ಹೆಸರು.
ಆಗಿದೆ ನನಗೆ ವಿರಹದಲಿ
ಪ್ರೀತಿಯಾಳದ ಪರಿಚಯ
ನಿನಗಾಗಿ ಸುರಿದ ಕಣ್ಣೀರಿನಲಿ
ನನ್ನೊಲವ ನೀ ಗುರುತಿಸುವೆಯಾ ?
ಹೊತ್ತಿಕೊಳ್ಳುವ ಪ್ರಣತಿಯನ್ನು
ಮುತ್ತಿಕೊಳ್ಳಲು ಕಾಯುವ
ಹುಚ್ಚು ಕತ್ತಲಿನಂತೆ ಪ್ರೀತಿಸಿದ್ದೇನೆ.
ಏನೆಂದು ಕರೆಯಲಿ ನಿನ್ನ ಹೇಳು ನಾನು....
ಹೆಸರಿಗೆ ಸಿಗದಷ್ಟು ಎತ್ತರದ ಸಂಬಂಧವನ್ನು...
ಚಿನ್ನ ಬಂಗಾರ ಎಂದು ನಿನಗೆ ಬೆಲೆ ಕಟ್ಟಲಾಗುವುದೇನು
ಹುಣ್ಣಿಮೆಯಂದು ದೂರದಿಂದಲೇ ನಿನ್ನ ನೋಡಲಾಗುವುದೇನು....
ಎಂದಾದರೋಮ್ಮೆ  ನನ್ನ ಬಿಟ್ಟು ಹೋಗುವ ಜೀವ ನೀನೆನ್ನಲೇನು....
ನಿನಗೆ ನನ್ನ ಹೃದಯ ನೀಡಿದ ಮೇಲೂ ನನ್ನ ಹೃದಯವೆನ್ನಲೇನು....
ಎಂದೆಲ್ಲ ರಮಿಸಿ  ಕೈ ಬೆರಳ ತುದಿ ಹಿಡಿದು ಜೊತೆಗೂದಿದವನು
ತಬ್ಬಿ ತೋಳುಗಳಲಿ, ಹಣೆಗೆ  ಮುತ್ತಿಟ್ಟವನು....
ಅಪ್ಪಿಕೊಳ್ಳುವೆಯ ಒಮ್ಮೆ ಗಾಳಿಯು ನುಸುಳದಂತೆ ಬಿಗಿಯಾಗಿ
ಇನ್ಯಾರಿಗೂ ಸಿಗದಂತೆ ಮುಡುಪಿಡುವೆಯ ನನಗೆ ಮೀಸಲಾಗಿ ಎಂದು ಅಪ್ಪಿದವನು
ನಿನ್ನ ನಗುವಿಗೆ ನನ್ನ ನಗುವೇ ಕಾರಣವಾದರೆ ಹೇಳಿಬಿಡು
 ನೋವಿನಲ್ಲೂ ನಗುವುದ ರೂಧಿಸಿಕೊಲ್ಲುವೆ  ನಾನು   ಎಂದವನು
ನಿನ್ನ ಮೊಗದಿ ಎಂದೂ ನಗುವೇ ಕಾಣ ಬಯಕೆಯೆಂದು ನಗಿಸಿದವನು
ಕೇಳದೇ ನನ್ನ ಬಯಕೆಗಳ ತಣಿಸಿದವನು
ಹೇಳದೆ ಬೆರಳ ಬಿಡಿಸಿಕೊಂಡು ಮುನ್ನೆಡೆದಾಗ .....
ಅವನು ಬೇಕೆಂದು ಬೇಡೆನು ಎಂದಿಗೂ ಆ ದೇವರನು
ನನ್ನೊಲುಮೆಯೇ ನಿಜವಾದರೆ ನನ್ನನೆಂದೂ ಅಗಲನು ಅವನು.

Friday, 9 January 2015

ಇಂದು--
ನಿನ್ನ
ಆಗಮನ
ಬಾಹುಬಂಧನ
ಚುಂಬನ
ನೆನೆದು
ನನ್ನಲಿ
ಕಂಪನ
ಮನದಿ
ತನನನ.
ಪ್ರಪಂಚದಲ್ಲಿ ಏನೆಲ್ಲಾ ಅದ್ಭುತಗಳಿದ್ದರೂ...
ನೀ ನನ್ನ ಬಳಿಯಿರದಿರೇ......
ಎಲ್ಲವೂ ನೀರಸವೆನಿಸುವುದೇ ಸೋಜಿಗ! !
ಪ್ರೇಮ ಪದ್ಯ ಬರೆಯಲು ಕುಳಿತೆ
ವಿರಹದಲಿ ಅಕ್ಷರಗಳು ಬೆಂದು ಮೆದುವಾದವು.
ನಿದ್ರಿಸಬೇಕೆನುವ ನನ್ನ ಕಣ್ಣುಗಳಿಗೆ 
ನಿನ್ನ ನೆನಪುಗಳ ಕಾಟ
ಮುಚ್ಚಲು ಆಗುತ್ತಿಲ್ಲ ರೆಪ್ಪೆಗಳ
ಮುಚ್ಚಿದ್ದರೇ....
ಕನಸಿನಲ್ಲಿಯಾದರೂ 
ಬರುತಿದ್ದೆಯೇನೋ......

ಯಾಕೆ ಹೀಗೆ????
ಅಂದು -
ಕಾಡಿಸಿ
ಪೀಡಿಸಿ
ಪ್ರೀತಿಸಿ
ಮುದ್ದಿಸಿದವನು
ಇಂದು-
ಕಾಯಿಸಿ
ನೋಯಿಸಿ
ಕಂಬನಿಯಾಗಿಸಿ
ದೂರ ಉಳಿದಿದ್ದಾನೆ.