Thursday, 25 December 2014


ಎಲ್ಲವೂ ಸುಳ್ಳಾದರೂ. ....
ನಿನ್ನ ಇರುವಿಕೆಯ ಮಧುರಾನುಭೂತಿ ನಿಜಾ. ...
ಯಾವುದೂ ಶಾಶ್ವತವಲ್ಲ. ..ಆದರೂ
ಬಯಸುತಿದೆ ನಿನ್ನ, ನನ್ನುಸಿರು ನಿಜಾ...
ಹಿಂತಿರುಗಿ ನೋಡಿದಾಗ ..ನನ್ನ ಹೆಜ್ಜೆಗಳೊಡನೆ ನಿನ್ನದೂ ಗುರುತು! !!!
 ಜೊತೆಯಲ್ಲೇ ನಡೆದರು ಗಮನಿಸಿರಲಿಲ್ಲ !!!
ಅದು ಬದುಕಿದ್ದೆ,  ನೀ ಸಿಕ್ಕ ಮೇಲೆ ಸಂತೋಷದಿಂದ ಬದುಕುತಿದ್ದೇನೆ.
ಪ್ರೀತಿಯೋ. ...ಪ್ರೇಮವೋ. ..ಸ್ನೇಹವೋ. ...ಎಲ್ಲವೂ....
ಹುಡುಕಾಟದ ಹಂಬಲವಿಲ್ಲ.

ನನ್ನ ಪದ್ಯಗಳು,
ಬರಿಯ ಸುಂದರ ಪದಗಳ ಜೋಡಣೆಗಳಲ್ಲ
ನನ್ನ ಎದೆಯೊಳಗೆ ನಿನಗಾಗಿ ಬಚ್ಚಿಟ್ಟ ಪಿಸುನುಡಿಗಳು
ಅದರಲ್ಲಿನ ಗಾಢ ಒಲವ ಓದದೇ, ಅರ್ಥೈಸದೇ, ಅನುಭವಿಸದೇ ...
ದೂರ ಇರುವ ಮೂಢ ಅನಕ್ಷರಸ್ತ ನೀನು .

ಇರಲಿ ಬಿಡು ಪ್ರೀತಿಯಾಳವ ತೋರುವ ವಿರಹದ ಅನುಭವ 
ದುಪ್ಪಟ್ಟು ಮುದ್ದಿಸುವೆಯಲ್ಲಾ ಬಂದಾಗ ನೀ ಸನಿಹ 




ಎದೆಯ ನೋವುಗಳು ಕಣ್ಣೀರಾದಾಗ , ಬೆರಳ ತುದಿ ಹಿಡಿದವನು ಕಾರಣವ ಕೇಳದೇ .. .ತಬ್ಬಿ ನಾನಿದ್ದೇನೆ ಎನಬಾರದೇ. ..... ನನ್ನ ನಗುವಿಗೆ ನೀಡು ನಿನ್ನ ಸ್ನೇಹದ ತಂಪನು ಜೀವನದಲ್ಲಿ ಒಂದರ ಮುಕ್ತಾಯವೇ. ..ಮತ್ತೊಂದರ ಆರಂಭ ತಿಳಿಯದೇ
ಕಾಯುವ ಸುಖ ....

ಕಾಯುವುದು ಕಷ್ಟ
ಆದರೂ .....
ನಿನಗಾಗಿ ನಾನು ಕಾಯುವುದು ಇಷ್ಟ
ಕಾದಿದ್ದೇನೆ ನಾನು ....
ನೀನು ಸಿಗಲೆಂದು
 ನೀನು ನನ್ನವನೇ ಆಗಲೆಂದು
ಕಾದಿದ್ದೇನೆ ಮಧುರ  ನೆನಪುಗಳೊಂದಿಗೆ
ನಿನಗಾಗೇ  ದಿನವೂ , ಅನು  ಕ್ಷಣವೂ.
ಕಾದಿದ್ದೇನೆ ನಿನ್ನ ಕಿರುನಗೆಗಾಗಿ
ಅದ(ಧ)ರ  ಜೇನಿಗಾಗಿ
ಕಾದಿದ್ದೇನೆ ನಿನ್ನ ಕಣ್ಣ  ಬೆಳಕಿಗಾಗಿ
ನನ್ನ ಬದುಕಿಗಾಗಿ
ಕಾದಿದ್ದೇನೆ ನಿನ್ನ  ಮಾತಿಗಾಗಿ
ಅದರಲ್ಲಿ ಒಲವಿಗಾಗಿ
ಕಾದಿದ್ದೇನೆ ನಿನ್ನ ಅಪ್ಪುಗೆಗಾಗಿ
ನನ್ನೇ  ನಾ  ಒಪ್ಪಿಸಿಕೊಳ್ಳುವುದಕಾಗಿ
ಕಾದಿದ್ದೇನೆ ನಮ್ಮ ಮಿಲನಕಾಗಿ
ನಿನ್ನೊಳು ನಾನೊಂದಾಗುವುದಕಾಗಿ.
ಕಾಯುವಿಕೆಗಿಂತ ಮಿಗಿಲಾದ ತಪವಿಲ್ಲ
ಒಲಿಯದಿಹೆಯಾ  ನನಗಾಗಿ ?


Sunday, 21 December 2014

ನನಗರಿವಿದೆ ...
ನಾ ನಿನ್ನ ಪ್ರೀತಿಸಿದರೇ ....
ರಾಧೆಯ ವಿರಹವನೇ ಅಪ್ಪಿಕೊಳ್ಳಬೇಕೆಂದು
ಆದರೇ......
ಹೇಳು 
ಪ್ರೀತಿಸುವ ಸುಖದಿಂದ
ನಾನೇಕೆ ವಂಚಿತಳಾಗಲೀ?
  • ಯಾಕೆ ಬಂದೇ ಒಬ್ಬನೇ ? ಏನ್ ಮಾಡ್ತೀ ? ನಿಂಗೆ ಬೋರ್ ಆಗೋಲ್ವಾ ? ಬೆಳ್ಳಗೆ ಚೆನಾಗಿದ್ದೀಯಾ ? ಆಚೆ ಹೋಗು, ಫ್ರೆಂಡ್ಸ್ ಸಿಗ್ತಾರೆ ........ ಹಿತ್ತಲಲ್ಲಿ ವಾಷಿಂಗ್ ಮೆಶೀನ್ ಗೆ ಬಟ್ಟೆ ತುಂಬಿಸುತ್ತಾ, ಮಾತಾಡ್ತಾ ಇದ್ದೆ. ಯಾರ ಜೊತೆ ಮಾತಾಡ್ತೀ ಅಮ್ಮಾ ಅಂದಳು ಮಗಳು. ಯಾರಿಲ್ವೆ ಮಗಳೇ ಇಲ್ಲೊಂದು ಹಲ್ಲಿ ಬಂದು ಸೇರ್ಕೊಂಡಿದೆ ಅದರ ಜೊತೆ ಅಂದೇ. ಥೂ ನಿನಗೇನಾಗಿದ? ದೇವರ ಮನೇಲಿ ಕೂತು, ಅದರ ಮುಂದೆ ಮಾತಾಡ್ತಿರ್ತೀಯ ಓಕೆ, ಭಗವಾನರ ಫೋಟೋ ಜೊತೆ, ಹಸು, ಬೀದಿನಾಯಿಮರಿ, ಬೆಕ್ಕಿನಮರಿ, ಅವರೇಕಾಳು ಹುಳ, ಸೊಳ್ಳೆ, ಹೂವ, ಪಾರಿವಾಳ ಅಮ್ಮಾ ಅವುಗಳ ಜೊತೆಯೆಲ್ಲಾ ಮಾತಾಡ್ತೀಯಲ್ಲಾ ? ನಿದ್ರೆಯಲ್ಲಿ ಸಹಾ ಮಾತಾಡ್ತೀಯ ? ನಕ್ಕಳು. ಹೌದು, ಪಕ್ಕದ ಸೈಟ್ ನಲ್ಲಿ ಹುಲ್ಲು ಬೆಳದಿದೆ ಅಂತಾ, ಹಸು ಕಟ್ಟಿರ್ತಾರೆ. ಅದು ಬಾಯಾರಿಕೆಗೆ ಅಂಬಾ ಎನ್ನುವುದುಂಟು. ಇರೋ ಬಂದೇ ಬೂಚಿ ಎಂದು ನೀರಿನ ಬಕೆಟ್ ತೆಗೆದುಕೊಂಡುಹೋದ್ರೆ , ಅಮ್ಮಾ ನಂಗೆ ಬೂಚಿ ಭಯಾ ಮನೆಗೆ ಕರೀಬೇಡಾ ಪ್ಲೀಸ್ ಅಂತಾನೆ ಮಗರಾಯ ಇನ್ನು ವಾಕಿಂಗ್ ಹೋದ್ರೆ ಬೀದಿನಾಯಿಗಳು ಫ್ರೆಂಡ್ಸ್, ಸಿಕ್ಕಿದವುಗಳಿಗೆ ಏನಾರೂ ಚೂರು ತಿಂಡಿ ಕೊಟ್ಟು, ಮಾತಾಡಿಸುವುದುಂಟು. ಅವು ಬಾಲ ಅಲ್ಲಾಡಿಸಿ , ಮೈಮೇಲೆ ಕಾಲಿಟ್ಟು ಪ್ರೀತಿ ತೋರಿಸುವುದು ಮಜಾ ಸಖತ್ ಪಾರಿವಾಳಗಳು ನಮ್ಮನೆ ಟೆರೇಸ್ ನ ನೀರಿನ ಟ್ಯಾಂಕ್ ಹತ್ರ ಉಂಟು. ಅವುಗಳ ಚೆಂದ ನೋಡ್ತಾ ಕಾಳು-ಅಕ್ಕಿ ಎಸೆದು ಸ್ವಲ್ಪ ಹೊತ್ತು ಮಾತಾಡೋದು ಅಭ್ಯಾಸ . ಅವರೆಕಾಯಿ ಕಾಲ , ಮೊನ್ನೆಯೊಮ್ಮೆ ಒಂದು ಹುಳ ಸಣ್ಣ ಮಗು ಅಂಬೆಗಾಲಿಟ್ಟ ಹಾಗೆ ವೇಗವಾಗಿ ಮಗಳ ರೂಂ ನತ್ತ ಹೋಗ್ತಿತ್ತು. ಇರೂ ಪುಟ್ಟಾ ಅಕ್ಕನ ರೂಂ ಗೇ ಹೋದ್ರೆ ಅಕ್ಕ ಬಯ್ತಾಳೆ ಅಂತಾ ಅದನ್ನು ಎತ್ತಿ ಆಚೆ ಹಣಿದೆ. ಅಮ್ಮಾ .....ನಾನು ಅವರೇಕಾಳು ಹುಳಕ್ಕೂ ಅಕ್ಕನಾ ? ಮಗಳಿಗೆ ಕೋಪ -ನಗು ಎರಡೂ ಹೂವು -ಪ್ರಾಣಿ -ಪಕ್ಷಿ .....ಇವುಗಳ ಹತ್ರ ಮಾತಾಡೋದು ಒಂಥರಾ ಖುಷಿನೇ . ಅವು ತೀಕ್ಷ್ಣವಾದ ಮಾತುಗಳಿಂದಾ ಹರ್ಟ್ ಮಾಡೋಲ್ಲ, ಕೆಲವು ಸ್ಪಂದನೆ ಗೊತ್ತಾಗುತ್ತೆ , ಖುಶೀ ಅನಿಸುತ್ತೆ. ಆದರೇ ........ ಮನುಷ್ಯರ ಜೊತೆ ಮಾತಾಡೋದು ? ನನಗಂತೂ ಪ್ರೀತಿ ಅವಶ್ಯ .ಭಾಷೆಯನ್ನು ಪ್ರೀತಿ ವ್ಯಕ್ತಪಡಿಸಲು ಬಳಸಿದಷ್ಟು ಹೊತ್ತೂ ಅದು ಬೇಕು ಅನಿಸುತ್ತೆ, ಪ್ರೀತಿಯನ್ನು ಬಯಸಿದಾಗ .....ಅವರಿಂದಾ ಬಿರುನುಡಿಗಳು ಬಂದರೆ ? ಈ ಸಂಭ್ರಮಕ್ಕೆ ನಾ ಯಾಕೆ ಇವರ ಹತ್ತಿರ ಮಾತಾಡಿದೆ ? ಅನಿಸಿ ಕಣ್ಣೀರುಗರೆಯುವ ಬದಲು ಸುಮ್ಮನಿರೋದೆ ವಾಸಿ

Edeya Novugalu kanniiraadaaga , berala tudi hididavanu Kaaranava keladeE ...tabbi naaniddene enabaaradeE. ..... nanna naguvige niidu niinna snehada tampanu Jiivanadalli ondara muktaayave. ..mattondara aarambha. ಏನ್ನೆಂದು ಕರೆಯಲಿ ನಿನ್ನ ಹೇಳು ನಾನು, ಹೆಸರಿಗೆ ಸಿಗದಷ್ಟು ಎತ್ತರದ ಸಂಬಂದವನ್ನು... ಚಿನ್ನ ಬಂಗಾರ ಎಂದು ನಿನಗೆ ಬೆಲೆ ಕಟ್ಟಲಾಗುವುದೇನು, ಹುಣ್ಣಿಮೆಯೆಂದು ದೂರದಿಂದಲೇ ನಿನ್ನ ನೋಡಲಾಗುವುದೇನು, ಎಂದಾದರೊಮ್ಮೆ ನನ್ನ ಬಿಟ್ಟು ಹೋಗುವ ಜೀವ ನೀನ್ನಲೇನು, ನಿನಗೇ ನನ್ನ ಹೃದಯ ನೀಡಿದ ಮೇಲೂ ನನ್ನ ಹೃದಯವೆನ್ನಲೇನು,
Aa beladingala ratriya li Hitavaada kulirgaaliyali Tabbida ninna tolugalali naanu Pisuguttida ninna savinudiya mareyalaarenu
Endenduu jothegiruve, usiriddaruu. .illadiddaruu. . Nija, Kanmuchchi mannu seridaruu. . Nanna nenapinalli sthiravaagiruve Ninna olavanneE nannusiraagirisiruve ಎತ್ತಲೋ ಹರಿದಂತಿದೆ ಚಿತ್ತ ನೋಟ ನೆಟ್ಟಿದೆ ಶೂನ್ಯದತ್ತ ಯಾರನ್ನು ಹುಡುಕುತಿರುವೆ ಮನವೇ ಕಾಲವ ತಡೆಯಿಡಿದು ನಿಲ್ಲಿಸಲು ಸಾದ್ಯವೇ ಮರೆತು ಬಿಡು ಕಳೆದ ದಿನಗಳ ಕಹಿಘಟನೆ ಮುನ್ನೆಡೆಯಬೇಕಿದೆ ಜೀವನ ಇರುವವರೊಡನೆ ನೀ ಹೀಗೆ ದಿಟ್ಟಿಸಿ ನೋಡಿದರೂ ಬರಲಾರೆ ನಾ ನಿನ್ನೆಡೆಗೆ ನಿನ್ನ ಜೀವನದಿ ಮುಗಿದ ಪಾತ್ರ ನಾನು ಸಾಗಿರುವೆ ದಿಗಂತದೆಡೆಗೆ
Maathugalu bekilla. .. Ariyalu obbaranobbaru Ariyuva munnaveE Naavu hattiravaadavaru .
ಕಂಡ ಕನಸುಗಳೆಲ್ಲ ನನಸಾಗುವ ಸಮಯ ಮತ್ತೆ ಸವಿರಾಗವ ಮಿಡಿಯುತ್ತಿದೆ ಹೃದಯ ನೂರೆಂಟು ಬಯಕೆಗಳು ಏನಿಲ್ಲ ಮನಸಿಗೆ ಒಂದು ಹೂಮುತ್ತು ಸಾಕು ಒಂದು ಬಿಗಿ ಅಪ್ಪುಗೆ... boಗಸೆಯಲ್ಲಿ ನಿನ್ನ ಮೊಗವಿಡಿದು ಕಣ್ತುಂಬ ನಿನ್ನ ತುಂಬಿಕೊಂಡೆ ನಿನ್ನಧರಗಳ ಜೇನನ್ನು ಧಾರೆಯೆರೆದು ನನ್ನ ಮನದಲ್ಲಿ ನೀ ತುಂಬಿಕೊಂಡೆ ಯಾವುದೂ ಸಿಹಿ ಎನಿಸುತ್ತಿಲ್ಲ .... ಬೆಲ್ಲ, ಸಕ್ಕರೆ, ಜೇನು. ನನ್ನ ಅಧರಗಳ ಚುಂಬಿಸಿದ ಬಳಿಕ. ....ನೀನು . ಹಳೆಯ ನೊವುಗಳೀಗ ನೆನಪಿಲ್ಲ ಯಾವುದೇ ಗಾಯದ ಗುರುತಿಲ್ಲ ಸಾಕಷ್ಟು ಮಾಗಿ ಹಣ್ಣಾಗಿದೆ ನೋಡೆನ್ನ ಮನಸು ಇನ್ನು ಮುಂದಿನ ಜೀವನ ಹಿಂದೆಂದಿಗಿಂತಲೂ ಸೊಗಸು... Tadeyalaare Tunturu maleyalli ... Ninna tuntaatada Nenapugala kaata. Bisiyappugeyali , sihimuttinali shamana. Bandubido, maleyanu nillisalaare, niinuu bekembaaseyanuu sahaa. ..
nannolave....

Ellavuu sullaadaruu. .... Ninna iruvikeya madhuraanubhuthi nijaa. ... yaavuduu shaasvhathavalla. ..aadruu Bayasutide ninna , nannusiru nijaaaaa.
Hinthirugi Nodidaaga ..nanna hejjegalodane ninaduu gurthu! !!! jotheyalle nadedaruu gamanisiralilla !!! Aduu badukidde, nii sikka mele santhoshadindaa badukutiddene. Priithiyo. ...premavo. ..snehavo. ...ellavuu.... Hudukaatada hambakavilla.
ಎಲ್ಲಿ ನಾರಿಯು ಪೂಜಿಸಲ್ಪಡುತ್ತಾಳೆಯೋ ಅಲ್ಲಿ ದೇವಾನುದೇವತೆಗಳು ನೆಲೆಸುವರೆಂಬ ನಮ್ಮ ಸಂಸ್ಕೃತಿ ಮಾನಿನಿಯರು ಅರ್ಧರಾತ್ರಿಯಲಿ ನಿರ್ಭಯವಾಗಿ ತಿರುಗಾಡುವಂತಹ ಮಹಾತ್ಮನ ಕನಸಿನ ಸ್ವಾತಂತ್ರ್ಯದ ನಮ್ಮ ನಾಡಿನಲಿ ರಕ್ತ-ಮಾಂಸಗಳ ಬಸಿದು, ನವಮಾಸ ಬಸಿರ ಹೊತ್ತು ಜನ್ಮದಾತೆಯಾಗಿ ಮೊಲೆಹಾಲನುಣಿಸಿ, ಪ್ರೀತಿಯನುಸಿರು ಕೊಟ್ಟು ಜೀವನರಳಿಸುವ ಕ್ರಿಯೆಯಲಿ ಮರುಜೀವ ತಳೆದು ಹೆಣ್ತನವ ಮೆರೆದ ಭಾಗ್ಯಕೆ ಹೆಮ್ಮೆ ಪಡಲಾ....
ಮಾಧ್ಯಮಗಳಲಿ ಪ್ರಸಾರ, ದಿನಬೆಳಗಾದರೆ ಅತ್ಯಾಚಾರ ತಡೆಗಟ್ಟುವಲಿ ಸೋತಿರುವ ಸರಕಾರ ಅತ್ಯಾಚಾರವೆಸಗಿದ ಪುರುಷನೆಂಬ ಪ್ರಾಣಿ ಮಾನಸಿಕ ರೋಗಿಯಂತೆ ತೀಟೆ ತೀರಿಸುವ ಜೀವ ಹೆಣ್ಣಾದರೆ ಸಾಕಂತೆ ಹಸುಳೆಯಾದರೇನು, ಸುಕ್ಕುಗಟ್ಟಿದ ಮೊಗದ ಹಣ್ಣು ಮದುಕಿಯಾದರೇನು ಸಲಿಂಗ ಕಾಮವೂ ಸರಿಯೆಂದ ಅಸಂಸ್ಕೃತ ಮಾ(ದಾ)ನವ ವೇಶ್ಯಾವೃತ್ತಿಗೆ ಮಾನ್ಯತೆ ಬೇಕು, ದೇವದಾಸಿ ಪದ್ಧತಿ ನಿರ್ಮೂಲವಾಗಬೇಕು ಮುಟ್ಟಾದರೇ ಮುಟ್ಟಿಸಿಕೊಳ್ಳಬಾರದಂತೆ ಮದುವೆ ಕಟ್ಟುಪಾಡುಗಳ ಕಿತ್ತೆಸೆದು ಬೆಂಕಿ-ಬೆಣ್ಣಿಯ ಸಂಗವೂ ಸರಿಯಂತೆ ಯಾವುದು ಸರಿಯೋ, ಯಾವುದು ತಪ್ಪೋ.....
ಕೆಲವರ ಅಂಬೋಣ, ದುರಾಚಾರಗಳಿಗೆ ತುಂಡುಡುಗೆ ಕಾರಣ ಹಾಗಾದರೇ, ಅತ್ಯಾರದ ಮಾರಿಗೆ ಬಲಿಯಾದ ಹಸುಗೂಸುಗಳು, ಶಾಲಾ ಮಕ್ಕಳೂ ಗದ್ದೆಯಲಿ ಬೆವರು ಬಸಿದು ದುಡಿಯುವ ಹೆಣ್ಣು ಜೀವಗಳ ನೋವುಗಳ ಗೋಳು ಕೇಳುವವರಾರು, ಯಾವ ತಪ್ಪಿಗೆ ಯಾರಿಗೆಲ್ಲಾ ಶಿಕ್ಷೆ ಅತ್ಯಾಚಾರಿಗೆ ಯಾವ ಶಿಕ್ಷೆ !!! ಯಾರನ್ನು ಹೊಣೆಯಾಗಿಸಲಿ !!! ಕಣ್ಣುಮುಚ್ಚಿದ ಸರಕಾರವನ್ನೋ, ಪ್ರತಿಭಟಿಸದ ಸಾರ್ವಜನಿಕರನ್ನೋ ನೈತಿಕತೆಯ ಕಲಿಸದ ಪೋಷಕರ ಬೇಜವಾಬ್ದಾರಿಯನ್ನೋ......
ಹೆಣ್ಣಾಗಿ ಹುಟ್ಟಿದುದೇ ನರಕವೆಂಬಂತೆ ಜಗವನೆಲ್ಲಾ ಪಸರಿಸಿರುವ ೋ ವಿಕೃತ ಮನಸುಗಳೇ

olavigaagi...

Naalku godegala naduve naa obbaleE
naaneke koragali
Sonu nigam na romantic songs
Jothege ninna madhura nenapugalive
Khushiyagiralu innenu bekide nannolaveE ? ಮಾತುಗಳೇಕೆ ಬೇಕು ನೀ ಬಳಿಯಿರಲು ?
ನಿನ್ನ ಹೂನಗೆಯ ಕಂಡಾಗ ಮೂಗಳಾಗುವುದೇ ಮಿಗಿಲು.
ತುಂಟತನ, ಚೆಲ್ಲಾಟ ಎಲ್ಲಾ ನಿನಗೇ ಮೀಸಲು
ಅದು...ನೀ ನನ್ನ ಎಂದೂ ಅಗಲದಂತೆ ಪ್ರೀತಿಸಲು. ಮರೆಯಬೇಕೆಂದೇ ನಿನ್ನ ಮತ್ತೇರುವಷ್ಟು ಕುಡಿದೆ
ಮತ್ತಿನಲ್ಲೂ ನಿನ್ನ ಹೆಸರನೇ ತೊದಲಿದೆ.
ಕನಸಾಗಿ ಕಾಡುವೆ ನೀ ನಿದಿರೆಯಲೂ ...
ಚಿರನಿದ್ರೆಯೇ ಬೇಕೇನೋ ನಿನ್ನ ನೆನಪಾಗದಿರಲು.

ನಿಮ್ಮ ನಿಟ್ಟುಸಿರು ನನ್ನೆದೆಯ ಸುಡುತ್ತಿದೆ ನನ್ನೊಲವೇ. ....
ತಬ್ಬಿ ಸಂತೈಸಲು ನಾ ಬೇಡವೇ? ಭೂತ-ಭವಿಷ್ಯದ ಗೊಡವೆ ಮರೆಸುವ
ನಿನ್ನೊಡನೆಯ ವರ್ತಮಾನದ ಸುಖ ಸ್ಥಿರವಾಗಬಾರದೇ ನನ್ನೊಲವೇ ?

ನಿನಗೊಂದು ಮುದ್ದಾದ ಹೆಸರನಿಡಲೇ
ಮುದ್ದು ಹೆಚ್ಚಾದಾಗಲೆಲ್ಲ ಪೆದ್ದು ಎನ್ನಲೇ? ನಿನ್ನ ನಗುವಿಗೆ ನನ್ನ ನಗುವೆ ಕಾರಣವಾದರೆ ಹೇಳಿಬಿಡು
ನೋವಿನಲ್ಲೂ ನಗುವುದ ರೂಡಿಸಿಕೊಳುವೆ ನಾನು...
ondashtu ....olava hanigalu

1.ನಿನಗಾಗೇ ಮಿಡಿದ ಹೃದಯದಲ್ಲಿ 
ಬರಿಯ ನೋವುಗಳೇ 
ತುಂಬಿ ನೀ ದೂರಾದೆಯಲ್ಲ? 
ಉಸಿರಾಡುತ್ತಿರುವೆ ನಾ
ಆ ಉಸಿರೂ ನನದಲ್ಲ.

2.
ಓಹ್ ಅದೆಂತಹ ವರ್ಣ!
ಸುಂದರ ದೇಹ!
ಎಲ್ಲೆಲ್ಲೂ ನೀನೇ ...
ನನಗೇ ಬೇಕೆಂದು ಆಸೆಪಟ್ಟೆ 
ಹೂವಿಂದ ಹೂವಿಗೆ ಹಾರುವುದು 
ನಿನ್ನ ಗುಣ
ನಾ ಬಯಸುವ ಮುನ್ನ
ಮರೆತುಬಿಟ್ಟೆ
ನೀ ಚಿಟ್ಟೆ .

3.
ನೀ 
ನನ್ನನಗಲಿ 
ನಿನ್ನ ಪ್ರೀತಿಸಿದ 
ಹೃದಯವ 
ಮಾಡಿದೆಯಲ್ಲ 
ನೀನಿಂದು
ಚೂರು ಚೂರು
ಆದರೆ
ಬಲ್ಲೆಯಾ
ಅದರ ಪ್ರತೀ
ಚೂರಿನಲ್ಲೂ
ಮಿಡಿದಿದೆ
ನಿನ್ನದೇ
ಹೆಸರು .
1.ನನ್ನ ಕಣ್ಣು ಕಂಡು
ನಿನ್ನ ಮೊಗದಲ್ಲಿ ಕಿರುನಗೆ
ಮತ್ತೆ-ಮತ್ತೆ ನೋಡುವಂತೆ
ಮನದಲ್ಲಿ
ಅರಿಯಲಾರದ ತಲ್ಲಣ
ಮುದ್ದು ವದನ ನಿನ್ನದು
ತಿಳಿನೀರ ಕೆಂದಾವರೆ
ನುಡಿಸಿತೆನ್ನ ದೇಹವೀಣೆ
ಹಿತವಾದ ಕಂಪನ
ಬಾಳ ಹಾದಿಯಲಿ
ಸಿಕ್ಕ ಗೆಳೆಯನೆ ನೀನು
ಒಂದಷ್ಟು ದೂರ ಕೈಹಿಡಿದು
ಜೊತೆ ಬರುವೆಯೇನು
ಇದ್ದಷ್ಟು ಸಮಯ ಜೊತೆಯಾಗಿ
ಬದುಕುವ
ನಾ ನಿನಗೆ, ನೀ ನನಗೆ
ಒಪ್ಪಿಗೆಯಾದರೆ ಕರಾರು
ನೀಡೊಂದು ಮುಗುಳ್ನಗೆ.

2.
ನಾ ನಕ್ಕಾಗೆಲ್ಲಾ ಅಮ್ಮ ಕೇಳುತ್ತಾರೆ
ಯಾಕೆ ಮಗು, ಸುಮ್ಮನೆ ಈ ನಗು? 
ಹೇಳುವುದಾದರೂ ಹೇಗೆ ನಾ 
ನಿನ್ನ ಸವಿ ನೆನಪುಗಳ ಕಚಗುಳಿ ಕಾರಣವೆಂದು.
1.ಮಾತುಗಳ ಮುಚ್ಚಿಟ್ಟು
ಭಾವನೆಗಳ ಬಚ್ಚಿಟ್ಟು
ನಗುತ್ತಾ ಹಾಡುಗಳಲಿ ತೇಲಿಸುವ
ತಬ್ಬಿ ಮುತ್ತಿನಲಿ ಮೈಮರೆಸುವ
ನನ್ನವ--
ಶಾಮಸುಂದರ ಚೆಲುವ.

2.
ಮನಸಿನ ಮೂಲೆಯಲ್ಲಿ ಮುದುರಿ ಮಲಗಿದ್ದ ಮುದ್ದು ಸ್ವಪ್ನಗಳು ಗರಿ ಬಿಚ್ಚಿ ಹಾರಲಿಚ್ಚಿಸಿವೆ...
ನಿನ್ನ ಅಗಮನ ಅನಿರೀಕ್ಷಿತವಾದರೂ ಸಾವಿನ ಹೊಸ್ತಿಲಲ್ಲಿದ್ದ ನನ್ನ ಬದುಕನ್ನು ಹಿಂದೆ ಕರೆಸಿದೆ..
ನಿನ್ನ ಅಗಾಧ ಒಲವು, ಆಗಾಗ ಮುನಿಸಿಕೊಳ್ಳುವ ಮನವು, ಅಕ್ಕರೆಯ ಹೃದಯ ಮಿಕ್ಕೆಲ್ಲವನ್ನು ಮರೆಸಿದೆ...ಮತ್ತೆ ಪ್ರೀತಿಯ ಚಿಗುರಿಸಿದೆ...ಬದುಕಲಿಚ್ಛಿಸಿದೆ.
3.ಮೊದಮೊದಲ ಒಲವು ಸಿಗಲಿ ಸಿಗದಿರಲಿ...
ಸದಾ ನೆನಪಾಗಿ ಉಳಿಯುವುದು ಮನದಲ್ಲಿ...
ಕಾನನದಿ ಒಣಗಿದ ತರಗೆಲೆಗಳ ನಡುವಲ್ಲಿ...
ನಿನ್ನ ನೆನಪುಗಳು ಹಚ್ಚಹಸಿರಾಗಿ ನಗುವ ಹೂಬಳ್ಳಿ.... 
ಮೊದಮೊದಲ ಒಲವು ಸಿಗಲಿ ಸಿಗದಿರಲಿ...
ಸದಾ ನೆನಪಾಗಿ ಉಳಿಯುವುದು ಮನದಲ್ಲಿ...
ನಿನ್ನದೇ ನಗುವಿನ ನೆನಪು ಅಂಗಳದಿ ನಕ್ಕಾಗ ಹೂ ಅರಳಿ...
ನಿನ್ನ ತನುವಿನದೆ ಗಂಧ ಮೊದಲ ಮಳೆಯ ಮಣ್ಣ ಸೊಗಡಲ್ಲಿ...
ಮೊದಮೊದಲ ಒಲವು ಸಿಗಲಿ ಸಿಗದಿರಲಿ...
ಸದಾ ನೆನಪಾಗಿ ಉಳಿಯುವುದು ಮನದಲ್ಲಿ...
ನೀ ನನ್ನ ಕರೆದಂತೆ ಭಾಸ ಎಲ್ಲೊ ಕೂಗುವ ಕೋಗಿಲೆ ದನಿ ಕೇಳಿ...
ನೀ ನನ್ನ ಸೋಕಿ ಮುತ್ತಿಟ್ಟ ಭಾವ ತಂದಿದೆ ತಂಪುತಂಗಾಳಿ...
1.ನಾನ್ಯಾರು ನಿನಗೆ ಎಂದು ನೀ ಕೇಳದಿರು ಮತ್ತೆ ಮತ್ತೆ
ನೀನು ನನ್ನ ಮನದ ಅಂಧಕಾರವ ಅಳಿಸಿದ ಪ್ರೇಮದ್ಹಣತೆ
ಬತ್ತಿದ ನನ್ನೆದೆಯ ಭಾವನೆಗಳಿಗೆ ಒಲವಿನ ಒರತೆ.


2.ಮರೆಯಬೇಕೆಂದೇ ನಿನ್ನ ಮತ್ತೇರುವಷ್ಟು ಕುಡಿದೆ
ಮತ್ತಿನಲ್ಲೂ ನಿನ್ನ ಹೆಸರನೇ ತೊದಲಿದೆ.
ಕನಸಾಗಿ ಕಾಡುವೆ ನೀ ನಿದಿರೆಯಲೂ ...
ಚಿರನಿದ್ರೆಯೇ ಬೇಕೇನೋ ನಿನ್ನ ನೆನಪಾಗದಿರಲು.

3.ಕದ್ದಿದ್ದಾನೆ ನನ್ನ ಹೃದಯ
ತುಂಬಾ ತಡವಾಗಿ ಅರಿವಾಗಿದೆ
ಕದ್ದವನು ಇಲ್ಲೇ ಎಲ್ಲೋ ಇದ್ದಾನೆ
ಹಾ!! ಅವನೇ ಇರಬೇಕು ಗುಮಾನಿ ಇದೆ
ಚಹರೆ ಹೀಗಿದೆ---
ಶ್ಯಾಮಲವರ್ಣ, ಎತ್ತರ ನಿಲುವು
ಹರವಾದ ಎದೆ, ಆಜಾನುಬಾಹು
ದುಂಡನೆಯ ಮೊಗ, ತಿದ್ದಿಟ್ಟ ತುಟಿಗಳಲಿ ಮುಗುಳ್ನಗು,
ಮೆಲುಮಾತು ಗಂಭೀರ
ಹೌದು, ಅದೇ ಗೊಮ್ಮಟನ ತೆರದಿ ಶಾಂತಭಾವ
ನಾನೇ ಕೊಟ್ಟೆನೋ? ಅವನೇ ಕದ್ದನೋ?
ಹೋಗಲಿ ಬಿಡಿ ಹುಡುಕಬೇಡಿ ಯಾರೂ. ...
ನನ್ನ ಹೃದಯ ಅವನಲ್ಲೇ ಇರಲಿ.
ನಮ್ಮೂರಿನಲ್ಲಿ, Mixi ಕೈ ಕೊಟ್ಟರೇ, ಪಕ್ಕದ ಮನೆಗೆ ಹೋಗಿ, ರುಬ್ಬಿಕೊಂಡು ಬರೋಕೆ ನನಗೆ ಮುಜುಗರ. ಅಂತಾದರಲ್ಲಿ ಇವತ್ತು ನಮ್ಮನೆ washing machine ಕೈಕೊಡಬೇಕಾ? 
ರಾಶಿ ಬಟ್ಟೆಗಳು ಬಿದ್ದಿದೆ, ನೆನೆದ ಬಟ್ಟೆಯೂ ಇದೆ. ರಿಪೇರಿ ಮಾಡಲು ಬರುವ ತನಕ ಎಂತಾ ಮಾಡೋದು ಅಯ್ಯೋ. ....
ನನ್ನ ಪುಟ್ಟ, ಮೇಲಿನ ಮನೆಗೆ ಆಟಕ್ಕೆ ಹೋದಾಗ, ಅವರು ಅಮ್ಮ ಏನು ಮಾಡ್ತಾ ಇದ್ದಾರೆ ಎಂದು ಕೇಳಿದಾರೆ, washing machine ಹಾಳಾಗಿದೆ ಅಂತ ಚಿಂತಾ ಮಾಡ್ತಾ ಕೂತಿದಾರೆ ಅಂದಿದಾನೆ.
ಕೆಳಗೆ ಇಳಿದು ಬಂದು ಅವರು ವಿಚಾರಿಸಿ, ರಿಪೇರಿ ಮಾಡುವ ತನಕ ನಮ್ಮನೇದು use ಮಾಡಿರಿ ಪರವಾಗಿಲ್ಲ ಅಂತ ಹುಡುಗರ ಕೈಲಿ washing machine ಕಳಿಸೋದಾ !!!
ದೊಡ್ಡ problem easy ಆಗಿ solve ಆಯಿತು ಉಫ್!!!!!
ನಂಬೋಕಾಗ್ತಿಲ್ಲ!!!!
ಅರಮನೆಯಲಿದ್ರೂ ನೆರೆಮನೆಯವರ ಹತ್ತಿರ ಚೆನ್ನಾಗಿರಬೇಕು ಅಲ್ವಾ ????
ನಿರೀಕ್ಷೆ, ಕನಸುಗಳನ್ನು ಚಿಗುರಿಸಿದ
ನನ್ನೊಲವೇ. ..
ಹೀಗೆ ಮೌನವಾಗಿ 
ನನ್ನ ಕೊಲ್ಲುವುದು ತರವೇ???
ಹಂಚಿಕೊಂಡ ಮೇಲೂ ....
ಮನಸ್ಸು, ಕನಸು... ಎಲ್ಲವನೂ
ಹೇಗೆ ತಾನೇ ಸಹಿಸಲಿ
ಈ ಅಗಲಿಕೆಯನು ???
ಮನಸು ಬಯಸಿದಾಗಲೆಲ್ಲಾ ...
ನಿನಗೆ ಕರೆನೀಡುವೆ
ನಾನಿರುವೆಡೆ ಬಂದು ಅಪ್ಪಿಕೊಳ್ಳಬಾರದೇ ನನ್ನೊಲವೆ ?
ನಿನ್ನ ಮನದಾಳದಲ್ಲಿಯೇ ಇದ್ದು ಕೊನೆಯುಸಿರಿನವರೆಗೆ
ನಿನ್ನ ಜೊತೆ ಸಾಂಗತ್ಯ ನಿಭಾಯಿಸುವೆ.