Wednesday, 6 May 2015


ಸ್ವಲ್ಪ ನಗೋ ಮುದ್ದು. ..
ಕತ್ತಲಲ್ಲಿ ಎಷ್ಟು ಹೊತ್ತು ಕುಳಿತಿರಲೀ ? 
ಹೇಯ್ ಬೆರಳು ಹಿಡಿದುಕೋ...
ಒಂದಷ್ಟು ಹೆಜ್ಜೆಗಳ ಜೊತೆಯಾಗಿಡೋಣ.
ಸಾಕು ಕಣೋ ಕಣ್ಣೀರು ಸುರಿಸಿದ್ದು...
ನಿನ್ನವನು ನಾನೆಂದೂ ಎನಬಾರದೇನೋ
ಒಲವಿನ ಗೀತೆಗಳ ಹಾಡೋಣ.


ತಂಗಾಳಿಯು ಸುತ್ತ ಸುಳಿದಿರುವುದ್ಹೇಗೆ ?
ಕಡುಬೇಸಿಗೆಯ ಧಗೆಯಲಿ
ಕವಿದ ಕಾರ್ಮೋಡಗಳ ಸರಿಸಿ
ಸುತ್ತಲೂ ಬೆಳದಿಂಗಳು ಸುರಿದುದ್ಹೇಗೆ ?
ಕನಸೋ... ಭ್ರಮೆಯೋ... 
ಅವನ ಬಯಸಿ ನಿಟ್ಟುಸಿರು
ಹೊಮ್ಮುವ ಮುನ್ನ.. ...
ಅವನು ಬಂದು ರಮಿಸಿದ್ದು ಅಚ್ಚರಿಯಾಗಿದೆ
ತುಸು ಹೊತ್ತು ವಿರಮಿಸಿ ಯೋಚಿಸಬೇಕಿದೆ.

Saturday, 2 May 2015



ಪದೇ ಪದೇ ಫೋನಾಯಿಸುವುದು
ಬೇ(ಕಾ) ಡುವುದು.....
ನಿನ್ನ ಮೇಲಿನ ಪ್ರೀತಿಯೋ?
ನಿನ್ನನ್ನು ಪಡೆಯಬೇಕೆಂಬ ಹಠವೋ?
ನೀ ನನ್ನತ್ತ ತಿರುಗಿಯೂ ನೋಡದಿರೇ.....
ಕಣ್ಣು ತುಂಬುವುದು....
ನಿನ್ನ ತಿರಸ್ಕಾರದ ನೋವಿಗಾ?
ನಿನ್ನ ಗಮನ ಬೇರೆಡೆ ಹರಿದಿರುವ ಅಸೂಯೆಗಾ?
ನೀನಿಲ್ಲದೆಯೂ ಇರಬಹುದು ...ನಿಜ
ಯಾಕೆ ಇರಬೇಕು ಹೇಳಿಬಿಡು ಅಷ್ಟೇ.


ನಿನಗೂ ನನ್ನ ನೋಡುವ ತವಕವಾದಂದು....
ಬಳಿ ಬಂದು ಕಣ್ಣು ರೆಪ್ಪೆಗಳಿಗೆ ಹೂ ಮುತ್ತು ಇಡು
ಕಣ್ ತೆರೆಯುತ್ತೇನೆ.
ಮಾತಾಡುವ ತುಡಿತ ಇದ್ದರೇ...
ಹೊಲಿದ ತುಟಿಗಳ ದಾರದಂಚನ್ನು ಎಳೆದು ಬಿಡು
ಮಾತಾಡುತ್ತೇನೆ.
ನಿನ್ನ ನೋಡಬೇಕು, ಮಾತನಾಡಬೇಕು ಎಂದು
ಪೀಡಿಸುವುದಿಲ್ಲ ನನ್ನಾಣೆ....
ತಪ್ಪುವುದಿಲ್ಲ ಕೊಟ್ಟ ಮಾತು....ಕಾಯುತ್ತೇನೆ.

ಇಂದು ಮಳೆಯೂ ಇಲ್ಲ. ..
ಅವನೂ ಬರಲಿಲ್ಲ...
ಪದ್ಯ ಬರೆಯಲು ಏನಿದೆ? ??
ಕಣ್ಣು ಮುಚ್ಚಿದೆ
ಶುಭರಾತ್ರಿ ಎಂದು ಸಂದೇಶ ಬಂತು! 
ಅರೆ ಮಳೆಯೂ ಧೋ ಎನ್ನುತ್ತಿದೇ!!!
ಬಾರದಿದ್ದರೇ ಏನಂತೇ ಅವ?
ತೋಯಲು ಅವನ ನೆನಪುಗಳೇ ಸಾಕಲ್ಲ ?

ಈ ಮಳೆಯೂ ....ನಿನ್ನೊಲವೂ ಒಂದೇ ತರಹ ಕಣೋ....
ಒಮ್ಮೆ ಸಣ್ಣಗೆ ಹನಿಯುತ್ತೆ...
ಇನ್ನೂ ಬೇಕೆಂದು ಹಂಬಲಿಸುವಂತೇ
ಒಮ್ಮೊಮ್ಮೆ ಎಡಬಿಡದೇ ಜೋರಾಗಿ ಸುರಿಯುತ್ತೆ
ಥೇಟ್ ನಿನ್ನಂತೇ...!!
ಬೇಕು ಕಣೋ ಮಳೆಯೂ...ಒಲವೂ....ಎರಡೂ...ನನಗೆ
ಸಹಿಸುವುದಾದರೂ ಹೇಗೆ ಹೇಳು ....ಈ ಬೇಗೆ ?

ದಿನದ ಇಪ್ಪತ್ನಾಲ್ಕು ಗಂಟೆಗಳಲೂ ಜೊತೆಗಿರು 
ಎನಲಾರೆ,
ನಾನು ಕರೆದಾಗ..... 
ಓಗೊಡು ಸಾಕು. 
ಕಂಡಾಗೊಂದು ಮಿಂಚಿರಲಿ ನಿನ್ನ ಕಣ್ಣುಗಳಲಿ... 
ತೆಳುವಾದ ನಗುವಿರಲಿ ಚೆಂದುಟಿಗಳಲಿ.
ಬಳಿ ಬಂದಾಗೊಮ್ಮೆ ತಬ್ಬಿದರೆ ....
ಒಲ್ಲೇ ಎನ್ನುವುದಿಲ್ಲ ನಾನು.
ನೀನಿರುವಾಗ ನನಗೆ ..
ಕಣ್ಣೀರಾದರೂ ಯಾಕೆ ಹೇಳು ?
ಸಂತಸದ ಕ್ಷಣಗಳಲಿ ಜೊತೆಯಾಗಿರು ...
ಮನಸಾರೆ ನಗುವ ನಾವು.
ಹಂಚಿಕೊಳ್ಳುವ ಅದನು -ಇದನು ...
ಉಳಿದುಬಿಡು ಗೆಳೆಯನಾಗಿ ನೀನು
ಮತ್ತೆ ನನಗಿನ್ನೇನು ಬೇಕು ?

ಬೆಳಿಗ್ಗೆಯಿಂದಾ....ಧಗೆ ಧಗೆ....
ಸಂಜೆಯ ವೇಳೆಗೆ ಗುಡುಗು ಮಿಂಚು. ..
ತಂಗಾಳಿ ಸಹಿತ....ಅಂತೂ...
ಮಳೆ ಬರುವ ಹಾಗಿದೇ....
ನಾನೂ ಕೂಡ ಕಾದಿದ್ದೇ....
ಬರುತ್ತೇನೆಂದು ಭರವಸೆ ನೀಡಿದವ
ಬರಲಾರೆ ಎಂದು ನಿರಾಸೆ ಮೂಡಿಸಿ...
ಬಾರದಿರುವವ ನೀನು. ...
ನಾನು ದುಮುಗುಡುವಂತೆ ಮಾಡಿದ್ದು ನೀನೇ...ನೀನೇ...


ನಿನ್ನ ನಗುಮೊಗವ ಕಾಣದೇ ನಾ .... 
ಪದ್ಯವ ಬರೆಯಲಿ ಹೇಗೆ ?
ಸುಂದರವಾದ ಪದಗಳ ಕೊರತೆಯಾಗಿದೆ ನನಗೆ.

ನೀನು ಬರಬೇಡ ಹೋಗೋ......
ನಿನ್ನ ಕಂಗಳ ಮಿಂಚಿಗೆ--
ನಾ ದಿಕ್ಕು ತಪ್ಪುವ ಭಯವಿದೆ
ನಿನ್ನ ಚೆಂದದ ನಗುವಿಗೆ--
ನಾ ಕರಗಿ ಹೋದೇನು
ನಿನ್ನ ಮೋಡಿ ಮಾಡುವ ದನಿಗೆ--
ಮರುಳಾಗದೇ
ಉಳಿಯುವೆನೆಂಬ ಖಾತರಿಯಿಲ್ಲ.
ಬರಬೇಡ ಕಣೋ.....
ಒಬ್ಬಳೇ ಇದ್ದೇನೆ.


ಕೊಚ್ಚಿಕೊಂಡು ಹೋಗುವ ಮಳೆ ಸುರಿಯುವ ಮುನ್ನ. ...
ಭೂತಾಯಿ ಕಂಪಿಸಿ, ಒಡಲಲ್ಲಿ ಸೇರಿಸಿಕೊಳ್ಳುವ ಮುನ್ನ. ..
ಒಂದಷ್ಟು ಹೊತ್ತು ಜೊತೆಯಾಗಿರೋಣ ...
ಪ್ರಕೃತಿ ವಿಕೋಪದ ಮುಂದೆ-
ನಮ್ಮದೇನು ಆಟಾಟೋಪ? 
ಸರಿಸಿಬಿಡೋ...ಮುನಿಸುಗಳ
ಮತ್ತೆ ನೆನಪಿಸಿಕೋ....ಒಲವಿನ ಘಳಿಗೆಗಳ
ಕಾಯುವಿಕೆಯ ನನ್ನ ಸಹನೆ ಕೊನೆಯಾದರೂ...
ಬಾರದಿರುವ ನಿನ್ನ ನೆಪಗಳು ಮುಗಿದಿಲ್ಲ
ಬಂದು ಬಿಡೋ.... ಸ್ವಲ್ಪ ಪ್ರೀತಿಸೋಣ.

ಸ್ವಲ್ಪ ನಗೋ ಮುದ್ದು. ..
ಕತ್ತಲಲ್ಲಿ ಎಷ್ಟು ಹೊತ್ತು ಕುಳಿತಿರಲೀ ? 
ಹೇಯ್ ಬೆರಳು ಹಿಡಿದುಕೋ...
ಒಂದಷ್ಟು ಹೆಜ್ಜೆಗಳ ಜೊತೆಯಾಗಿಡೋಣ.
ಸಾಕು ಕಣೋ ಕಣ್ಣೀರು ಸುರಿಸಿದ್ದು...
ನಿನ್ನವನು ನಾನೆಂದೂ ಎನಬಾರದೇನೋ
ಒಲವಿನ ಗೀತೆಗಳ ಹಾಡೋಣ.