ಗೆಳೆಯಾ ಯಾರಿಗೆ ಬೇಕು
ಈ ಗಂಡ ಮಕ್ಕಳ ಸಂಸಾರ?
ಗಂಡನೆಂದು ನೀ ಚಲಾಯಿಸೋ ಅಧಿಕಾರ ?
ನಿನ್ನಷ್ಟೇ ಸ್ವತಂತ್ರ ನನಗೂ ಬೇಕು
ನಮ್ಮ ಸಂಬಂಧಕ್ಕೆ ಯಾಕೆ ತಾಳಿ
ಯ ಬಂಧನ ?
ಅಂತೇನಾದ್ರೂ ಅಂತೀನಾ ?
ಏಳೇಳು ಜನ್ಮಕ್ಕೂ ನೀನೇ ಬೇಕು
ನಿನ್ನ ಒರಟು ಮಾತುಗಳಿಂದಾ
ವಿಕ್ಷಿಪ್ತ ನಡೆವಳಿಕೆಯಿಂದಾ
ನನ್ನ ಗೆದ್ದೇ ಎನ್ನುವ .....
ನೀ ದಬ್ಬಾಳಿಕೆಯಲಿ ಮೆರೆದು
ಗಹಗಹಿಸುವ ನೀನೂ.......
ನನಗಿಷ್ಟ.
'ನಾ ನಿನ್ನ ಪ್ರೀತಿಸುವೆ '
ಸೋತಿದ್ದು ನಾನಲ್ಲ.....
ನನ್ನ ಪ್ರೀತಿಗೆ ......
ನಿನ್ನ ಸಹಿಸಿಕೊಳ್ಳುವ ನನ್ನ ಸಹನೆಗೆ .....
ಸೋಲು ನಿನ್ನದಲ್ಲವೇ ?
ಈ ಗಂಡ ಮಕ್ಕಳ ಸಂಸಾರ?
ಗಂಡನೆಂದು ನೀ ಚಲಾಯಿಸೋ ಅಧಿಕಾರ ?
ನಿನ್ನಷ್ಟೇ ಸ್ವತಂತ್ರ ನನಗೂ ಬೇಕು
ನಮ್ಮ ಸಂಬಂಧಕ್ಕೆ ಯಾಕೆ ತಾಳಿ
ಯ ಬಂಧನ ?
ಅಂತೇನಾದ್ರೂ ಅಂತೀನಾ ?
ಏಳೇಳು ಜನ್ಮಕ್ಕೂ ನೀನೇ ಬೇಕು
ನಿನ್ನ ಒರಟು ಮಾತುಗಳಿಂದಾ
ವಿಕ್ಷಿಪ್ತ ನಡೆವಳಿಕೆಯಿಂದಾ
ನನ್ನ ಗೆದ್ದೇ ಎನ್ನುವ .....
ನೀ ದಬ್ಬಾಳಿಕೆಯಲಿ ಮೆರೆದು
ಗಹಗಹಿಸುವ ನೀನೂ.......
ನನಗಿಷ್ಟ.
'ನಾ ನಿನ್ನ ಪ್ರೀತಿಸುವೆ '
ಸೋತಿದ್ದು ನಾನಲ್ಲ.....
ನನ್ನ ಪ್ರೀತಿಗೆ ......
ನಿನ್ನ ಸಹಿಸಿಕೊಳ್ಳುವ ನನ್ನ ಸಹನೆಗೆ .....
ಸೋಲು ನಿನ್ನದಲ್ಲವೇ ?
No comments:
Post a Comment