Sunday, 16 February 2014

1. ಭೂಕಂಪನವಾದಾಗ ಮಾತ್ರ ಭೂಮಿ ಕಂಪಿಸುವುದಲ್ಲಾ .
ನನ್ನವ ಮುತ್ತು ಕೊಡುವೆನೆಂದಾಗ
ನನ್ನೆದೆಯಲ್ಲಿ ಸಣ್ಣಗೆ ಕಂಪನ
ತುಟಿ ಗಳು ಅದರುತ್ತವೆ
ಆಗಲೂ ಭೂಕಂಪನದ ಅನುಭವ


2.
ವಿರಹದುರಿಯಲಿ ಬೇಯುತ್ತಾ
ಕೋಪದಲಿ ಧುಮುಗುಡುತ್ತಿರುವಾಗ
ಸೀಲಿಂಗ್ ಫ್ಯಾನಿನ ರಭಸ
ಗಾಳಿಯೊಂದಿಗೆ ….
ಆ ಗಾಳಿಯೂ ನುಸುಳದಂತೆ
ಬಿಗಿದಪ್ಪಿದ ನಿನ್ನ ತೋಳುಗಳು
ನಾ ತಂಪನ್ನೀವೆ
ಫ್ಯಾನಿನ ಗಾಳಿಯೇಕೆ
ಎಂದು ಸವಾಲೆಸೆದ ಕ್ಷಣವೇ …..
ನಾ ಮಂಜಾಗಿ ….
ನಿನ್ನೊಳು ಸೇರಿಹೋದೆ.

No comments:

Post a Comment