ಸುಮ್ನೆ ಹೀಗೊಂದಷ್ಟು ವಿರಹ ಪದ್ಯಗಳು -----
೧.ಈ ಉರಿಬಿಸಿಲ ತಾಪದೊಡನೆ
ನಿನ್ನ ನೆನಪುಗಳ ಬಿಸಿಯೂ ಸ್ಪರ್ಧಿಸಿ
ಮನ ನಿನ್ನ ಸನಿಹವ ಬಯಸಿದೆಯಲ್ಲ
ಜಾತಕಪಕ್ಷಿಯು ಮಳೆಗಾಗಿ ಕಾಯ್ವಂತೆ
ನಾ ಕಾದಿರುವೆ ನಿನ್ನ ಮಿಲನಕೆ
ಬಂದುಬಿಡೋ ನನ್ನ ಗಂಧರ್ವ
ನಿನ್ನ ಮಧುರ ನುಡಿಗಳಲಿ ಮೈಮರೆಯುವಾಸೆ
ಬೇರೆಯಾಗದಂತೆ ಬಾಹುಗಳಲಿ ಬಂಧಿಸಿ
ಸುರಿಸಿಬಿಡೋ ನಿನ್ನೊಲವ ಮಳೆಯಂತೆ
ವಿರಹದಿ ಬಿರಿದ ನನ್ನೆದೆಯ ತಣಿಸೋ ಮಾಧವ.
೨.ನಿನ್ನ ಮೌನರಾಗ
ನನ್ನಲ್ಲಿ ಅರಿಯದಾ ಉದ್ವೇಗ
ಬಿಡು ಗೆಳೆಯಾ .....
ಪ್ರೀತಿಯಲ್ಲಿ ಎಲ್ಲವೂ ಹಿತವೇ ....
ಕೋಪಿಸುವ ನೀನೂ
ನನಗಾಗಿ ಪರಿತಪಿಸುವ ಪರಿಯೂ
ಆಮೇಲೆ ಮುದ್ದಿಸಿಕೊಂಡು
ಓಲೈಸುವ ಖುಷಿಯೂ
ನನಗೆ ಮುದವೇ .....
೧.ಈ ಉರಿಬಿಸಿಲ ತಾಪದೊಡನೆ
ನಿನ್ನ ನೆನಪುಗಳ ಬಿಸಿಯೂ ಸ್ಪರ್ಧಿಸಿ
ಮನ ನಿನ್ನ ಸನಿಹವ ಬಯಸಿದೆಯಲ್ಲ
ಜಾತಕಪಕ್ಷಿಯು ಮಳೆಗಾಗಿ ಕಾಯ್ವಂತೆ
ನಾ ಕಾದಿರುವೆ ನಿನ್ನ ಮಿಲನಕೆ
ಬಂದುಬಿಡೋ ನನ್ನ ಗಂಧರ್ವ
ನಿನ್ನ ಮಧುರ ನುಡಿಗಳಲಿ ಮೈಮರೆಯುವಾಸೆ
ಬೇರೆಯಾಗದಂತೆ ಬಾಹುಗಳಲಿ ಬಂಧಿಸಿ
ಸುರಿಸಿಬಿಡೋ ನಿನ್ನೊಲವ ಮಳೆಯಂತೆ
ವಿರಹದಿ ಬಿರಿದ ನನ್ನೆದೆಯ ತಣಿಸೋ ಮಾಧವ.
೨.ನಿನ್ನ ಮೌನರಾಗ
ನನ್ನಲ್ಲಿ ಅರಿಯದಾ ಉದ್ವೇಗ
ಬಿಡು ಗೆಳೆಯಾ .....
ಪ್ರೀತಿಯಲ್ಲಿ ಎಲ್ಲವೂ ಹಿತವೇ ....
ಕೋಪಿಸುವ ನೀನೂ
ನನಗಾಗಿ ಪರಿತಪಿಸುವ ಪರಿಯೂ
ಆಮೇಲೆ ಮುದ್ದಿಸಿಕೊಂಡು
ಓಲೈಸುವ ಖುಷಿಯೂ
ನನಗೆ ಮುದವೇ .....
No comments:
Post a Comment