ನಾನಿಲ್ಲದಿದ್ರೆ ಏನೂ ನಡೆಯೋಲ್ಲ ಅನ್ಕೊತೀನಿ.
ನನ್ನವರಿಗೆ ಸ್ನಾನ ಮುಗಿಸಿ ಬಂದಾಗ ನಾನೇ ಟವೆಲ್ ಕೊಡಬೇಕು.
ಮಗಳಿಗೆ ಜಡೆ ಹಾಕೋಕೆ ನಾನೇ ಬೇಕು.
ಮಗನಿಗೆ ಮಮ್ಮಮ್ ಮಾಡಿಸೋಕೆ ನನ್ನ ಅಗತ್ಯ ಉಂಟು .
ನನ್ನ ಸಂಸಾರದ ಸಣ್ಣ ಸಣ್ಣ ಅಗತ್ಯಗಳಿಗೂ ನಾನೇ ಬೇಕು.
ಅಡುಗೆ, ಮನೆಕೆಲಸ .......ಒಂದಾ ಎರಡಾ ??????
ನನ್ನದು ಬದಲಾಗದ ಎರಡು ಸ್ವಭಾಗಳಿವೆ.
೧.ಯಾವಾಗಲೂ ನೆಗೆಟಿವ್ ಯೋಚನೆಗಳೇ ನನಗೆ.
೨.ನಾನು ಮೊದಲೇ ಪ್ರತಿಯೊಂದನ್ನೂ ಪ್ಲಾನ್ ಮಾಡೋದು ಜಾಸ್ತಿ.
ನನ್ನಿಂದಾ ಯಾರಿಗೂ ತೊಂದರೆಯಾಗದಂತೆ ಸಾಕಷ್ಟು ಪ್ಲಾನ್ ಮಾಡಿದ್ದೇನೋ ಆಯ್ತು.
ಆದರೇ.........
ನಾನು ಸುಮಾರು ದಿನ ಮಲಗಿದೆ.
ಊಟ -ತಿಂಡಿ ಹೋಟೆಲ್ ನಿಂದಾ ಬಂತು.
ಮಗ ಏನೂ ಹಠವಿಲ್ಲದೆ ಓಡಾಡಿಕೊಂಡಿದ್ದ.
ಮಗಳು -ನನ್ನವನು ಮನೆಕೆಲಸ ಹಂಚಿಕೊಂಡರು.
ಮನೆ ನೀಟಾಗಿತ್ತು.
ಪ್ರತಿಯೊಬ್ರೂ ಅವರವರ ಕೆಲಸ ಅವ್ರೆ ಮಾಡ್ಕೊಂಡ್ರು.
ನನ್ನ ಅಗತ್ಯ ಇರಲೇಯಿಲ್ಲ
ಪ್ರಪಂಚ ಏನೂ ಬದಲಾಗಿರಲಿಲ್ಲ
ಸರಿ ನನಗೂ ಮಲಗೀ ಮಲಗೀ ಸಾಕೆನಿಸಿತು, ಎದ್ದೆ.
ಮಗ -ನಾನು ಏಳೋಲ್ಲ, ಸ್ಕೂಲ್ ಗೆ ನಾ ಹೋಗೊಲ್ಲ , ತಿಂಡಿ ನೀನೇ ತಿನ್ನಿಸು , ನಾ ನಿನ್ ಮಾತು ಕೇಳೋಲ್ಲ .....ಶುರು ಹಠ.
ನೀ ಎದ್ದಿದಿಯಲ್ಲಾ ಪೂಜೆ ನೀನೇ ಮಾಡಿಬಿಡೇ ನನಗೆ ಅರ್ಜೆಂಟ್ -ಮನೆಯವರ ಓಟ .
ಅಮ್ಮಾ ನನಗೆ ಲೇಟ್ ಆಯ್ತು ತಿಂಡಿ ಕೊಡು -ಮಗಳ ತರಾತುರಿ.
ನನಗೆ ಭಾರೀ ಗೊಂದಲ
ಯಾಕೆ ಹೀಗೇ ???????

No comments:
Post a Comment