ಮೊನ್ನೆ ರಾತ್ರಿ -
ನಾನು ನನ್ನ ದೊಡ್ಡ ಫ್ಯಾಮಿಲಿ ಜೊತೆ ರೆಸಾರ್ಟ್ ನಲ್ಲಿ.
ಅಬ್ಬರದ ಸಂಗೀತ .....ಓಲಾಡುವ ಜನಗಳು .
ಎಷ್ಟ್ ಹೊತ್ತು ನೋಡೋಕೆ ಸಾಧ್ಯ ?
ನೀರಿಗಿಳಿದ ಮೇಲೆ ಚಳಿಯೇನು? ಮಳೆಯೇನು?
ಸರೀ ದಬಾಲ್ ಗುಚ್ಚಿ ಶುರುವಾಯ್ತು ನೋಡಿ ......
ನನ್ ಕುಟುಂಬದ ಸದಸ್ಯರ, ಸ್ನೇಹಿತರ, ಮಕ್ಕಳ ನಡುವೆ ನಾನೂ....
ಹಾಡೂ ಸಂತೋಷಕೇ ...ಎಂದು ಕಿರುಚುತ್ತಾ ಕುಣಿದಿದ್ದೂ ಆಯ್ತು.
ಕುಲದಲ್ಲಿ ಮೇಲೆ ಯಾವುದೋ ಹುಚ್ಚಪ್ಪಾ .....ಈ ತರಹದ ಹಾಡಿಗೆ ಹೆಜ್ಜೆ ಹಾಕೋದು ಮಜಾ ಅನಿಸುತ್ತೆ ಕೌಂಟ್ ಡೌನ್ ಶುರುವಾಯ್ತು ....ಹ್ಯಾಪ್ಪಿ ನ್ಯೂ ಇಯರ್ ಎಂದು ಎಲ್ಲರನ್ನೂ ತಬ್ಬಿ ವಿಶ್ ಮಾಡಿದ್ದಾಯ್ತು .
ನಂತರ .......ಶುರುವಾಯ್ತು.....ಶವದ ಎದುರು ತಮಟೆ ಬಾರಿಸ್ತಾರಲ್ಲಾ ಆ ಮ್ಯೂಸಿಕ್ !!!!ಹೆಣ ಎಲ್ಲಿದೆ ಅಂದೇ ನನ್ ಫ್ರೆಂಡ್ ಗೆ. ೨೦೧೩ ಮುಗಿತಲ್ಲಾ ಅಂದ್ರು !!!! ಎಲ್ಲಾ ಸಿಕ್ಕಾಪಟ್ಟೆ ಕುಣಿತಿದ್ದಾರೆ.
ನಾ ಹಿಂದೆ ಸರಿದೆ:(
ಮೊನ್ನೆತಾನೇ ನನ್ನ ಮನೆಯ ಎದ್ರಿಗೆ ಇರೋ ಒಬ್ಬ ಕಾಲೇಜ್ ಹುಡುಗ ಮಹಡಿಯಿಂದಾ ಬಿದ್ದು ತೀರಿಕೊಂಡ. ಆ ದಿನವಿಡೀ ಜನಜಂಗುಳಿ, ರಸ್ತೆಯುದ್ದಕ್ಕೂ ಹೂವುಗಳು, ಪಟಾಕಿಯ ಸದ್ದು , ಶವದ ಮೆರವಣಿಗೆ ಮೇಲೇನೆ ನಿಂತ್ಕೊಂಡು ನೋಡಲು ಬಹಳಷ್ಟು ಜನ ನಮ್ಮನೆಯ ಮೆಟ್ಟಿಲು ಹತ್ತಿದರು.ಅವರೊಂದಿಗೆ ನನ್ನದೂ ಸಾವಿನ ನೋಟ. ಶವದ ಎದುರು ತಮಟೆಯ ಸದ್ದು ಕೇಳಿದಾಕ್ಷಣ ನನಗೆ ಒಂಥರಾ ಅನಿಸೋಕೆ ಶುರುವಾಯ್ತು. ಇದು ನನ್ನದೇ ಅಂತಿಮ ಯಾತ್ರೆಯೇನೋ ಅನಿಸಿಬಿಡ್ತು. ಓಡಿ ಬಂದು ಅಳ್ತಾ ನನ್ ಫ್ರೆಂಡ್ ಒಬ್ರಿಗೆ ಪೋನ್ ಮಾಡಿದೆ. ನನ್ನ ರಸ್ತೆಯಲ್ಲಿರೋ ಜನ ಕಣ್ಮರೆಯಾಗಿದ್ದು ಇದು ೫ ನೆಯವರು. ನಾನೂ ಡಾಕ್ಟರ್ ಹೇಳಿದ ಪ್ರಕಾರ ಸತ್ತಿದ್ರೆ ಈಗಾಗಲೇ ೫ ವರ್ಷ ಆಗ್ತಿತ್ತು ನಾ ಆಚೆ ಹೊರಟರೆ ಜನ ಇವ್ಳು ಬದುಕಿದ್ದಾಳಲ್ಲಾ ? ಹೇಗಿದ್ಲು ಹೇಗಾದಳು ಅಂತಾ ನನ್ನೇ ನೋಡ್ತಾರೆನೋ ಅನಿಸುತ್ತೆ. ನನಗೆ ಸಾವು, ಶವ, ಅಳು ಏನೂ ಹೊಸತಲ್ಲ. ವಿಚಿತ್ರ ಅಂದ್ರೆ .....
ನಾ ಬೆಂಗಳೂರಿಗೆ ಬಂದದ್ದೆ ವಿಲ್ಸನ್ ಗಾರ್ಡೆನ್ ನಲ್ಲಿರೋ ಮನೆಗೆ. ಅದು ಸ್ಮಶಾನದ ಎದುರಿನ ರಸ್ತೆ.
ಸ್ವಲ್ಪ ಸಮಯದ ಬಳಿಕ ಬಿಳೆಕಹಳ್ಳಿಯಲ್ಲಿ ಮನೆ ಮಾಡಿದ್ದು ಸ್ಮಶಾನದ ತುಸುವೇ ದೂರದಲ್ಲಿ.
ಈಗಲೂ ನಮ್ಮ ಮನೆ ಇರೋದು ಕೆರೆಯ ಹತ್ತಿರ, ಇಲ್ಲೇ ಎದುರುಗಡೆ ಸ್ಮಶಾನ ಉಂಟು.
ಇಷ್ಟೇ ಅಲ್ಲ, ಊರಲ್ಲಿ ನಮ್ಮ ಅಮ್ಮನ ಮನೆ ಇರೋದು ಸಹಾ ಸ್ಮಶಾನ ಕ್ಕೆ ಹೋಗುವ ದಾರಿಯ ಪ್ರಾರಂಭದಲ್ಲಿ.
ಬಹುಷಃ ಕೊನೆಯ ಯಾತ್ರೆಗಳನ್ನು ಬೇಡಾ ಅಂದ್ರೂ ಬೇಕಾದಷ್ಟು ನೋಡಿಬಿಟ್ಟಿದ್ದೇನೆ. ಆದರೇ ..... ಶವದ ಮುಂದೆ ಆ ತಮಟೆ ಬಡಿಯೋ ಸದ್ದು ಇದೆಯಲ್ಲಾ ಏನೋ ಒಂಥರಾ ........ದೇವರಾಣೆ ಭಯ ಅಂತಲ್ಲ, ಆದ್ರೆ ಏನೂ ಅಂತಾ ಹೇಳೋಕೆ ಆಗ್ತಿಲ್ಲ ಏನೋ

No comments:
Post a Comment