"ವ್ಯಸನ" ಎನ್ನುವುದು ಮನಸ್ಸಿನ ಒಂದು ವಿಕಲ್ಪ.ಯಾವುದೇ ವ್ಯಸನಕ್ಕೆ ಬಲಿಯಾದ ವ್ಯಕ್ತಿ,ತಾನು ವ್ಯಸನಕ್ಕೆ ಬಲಿಯಾಗಿದ್ದೇನೆ,ಎಂದು ಅರಿವಾದೊಡನೆ ಖಿನ್ನನಾಗುತ್ತಾನೆ.ಹಾಗೂ ಅದನ್ನು ಬಿಡಲು ಯತ್ನಿಸುತ್ತಾನೆ.ಇಲ್ಲಿ ವಿಶೇಷವೆಂದರೆ ವ್ಯಸನಕ್ಕೆ ಬಲಿಯಾಗುವ ಮೊದಲಿನ ಮಾನಸಿಕ ಸ್ಥಿತಿ, ಅದು ಖಿನ್ನತೆಯಾಗಿರಬಹುದು, ನಿರಾಶೆಯಾಗಿರಬಹುದು, ಸುಖ ಅಥವ ದುಃಖ ಆಗಿರಬಹುದು. ಅದೇನೇ ಆಗಿದ್ದರೂ, ಒಂದು ಸಾರಿ ಯಾವುದೇ ವ್ಯಸನಕ್ಕೆ ಒಳಗಾದ ವ್ಯಕ್ತಿ ಅದರಿಂದಾ ಹೊರಬರಲು ಹಾಗೂ ಆಗದಿದ್ದಾಗ ಮತ್ತೆ ಅದೇ ವ್ಯಸನದಿಂದಾ ಚಿಂತಿತ ಹಾಗೂ ವ್ಯಕುಲನಾಗುತ್ತಾ ಹೋಗುತ್ತಾನೆ. ಇದು ಒಂದು ವಿಷದ ಚಕ್ರದಂತೆ.ಇಲ್ಲಿ ವ್ಯಸನಕ್ಕೆ ಮಾದಕ ವಸ್ತುಬೇಕು ಎಂದು ಬಯಸುವವರು ಯಾರು?ಹಾಗೂ ಅದರಿಂದಾ ಹೊರಬರಲು ಯತ್ನಿಸುವವರು ಯಾರು? ಎಂಬ ಪ್ರಶ್ನೆ ಉಧ್ಭವವಾಗುತ್ತದೆ.ಎರಡೂ ನಮ್ಮಒಳಗಿನ ಮನಸ್ಸೇ, ಎರಡು ರೀತಿಯ ದ್ವಂದ್ವ ವ್ಯಕ್ತಿತ್ವಗಳಾಗಿರುತ್ತವೆ.ಇದು ಒಂದೇ ವ್ಯಕ್ತಿಯ ಮನಸ್ಸಿನ ಅನೇಕ ಸ್ಥರಗಳಲ್ಲಿ ಒಂದಾಗಿರುತ್ತದೆ. ಹಾಗಾಗಿ ವ್ಯಸನ ಅದರಿಂದಾ ಉಂಟಾಗುವ ಮಾನಸಿಕ ಹಾಗೂ ದೈಹಿಕ ಪರಿಣಾಮ,ಮತ್ತೆ ಮತ್ತೆ ಅದೇ ವ್ಯಸನದ ಸುತ್ತಾ ನಮ್ಮ ಮನಸ್ಸನ್ನು ಸೆಳೆಯಲು ಪ್ರೇರೇಪಿಸುತ್ತದೆ.ಇದಕ್ಕೆ ನಮ್ಮನ್ನು ನಾವೇ ಕೇಳಿಕೊಂಡಾಗ ವ್ಯಸನಕ್ಕಾಗಿ ಹಂಬಲಿಸುತ್ತಿರುವವರು ಯಾರು? ಹಾಗೂ ಅದರಿಂದ ಮುಕ್ತವಾಗಬೇಕೂ ಎಂದು ಹಂಬಲಿಸುತ್ತಿರುವವರು ಯಾರು?ವಾಸ್ಥವವಾಗಿ ಎರಡೂ ನಮ್ಮಲ್ಲಿಯ ಮಾನಸಿಕ ಸ್ಥರಗಳೇ
ಆಗಿರುತ್ತವೆ.ಇನ್ನು ಮಾನಸಿಕ ಸ್ಥಿತಿಯನ್ನು ಸರಿ ಮಾಡಲು ಯಾವುದೋ ಒಂದು ಮಾದಕ ವಸ್ತುಗಳನ್ನು ಸೇವಿಸಿದಾಗ, ಅದು ಭೌತಿಕ ಶರೀರದ ಮೇಲೆ ಅಪಾರವಾದ ಪರಿಣಾಮ ಉಂಟುಮಾಡುತ್ತದೆ.ಭೌತಿಕ ಶರೀರ ನಮ್ಮದಲ್ಲ. ಅದರ ಮೇಲೆ ನಮ್ಮ ಹಕ್ಕು ಇರುವುದೇ ಇಲ್ಲ. ಅದನ್ನು ನಾವು ಬಾಡಿಗೆಗೆ ಪದೆದುಕೊಂದಿರುತ್ತೇವೆ. ಅದನ್ನು ಹಾಳು ಮಾಡಲು ನಮಗೆ ಹಕ್ಕೆ ಇಲ್ಲ. ಒಂದು ವೇಳೆ ಹಾಳು ಮಾಡಿದರೆ ಅದು ಪ್ರಕೃತಿಗೆ ವಿರುದ್ಧ, ಎಂಬ ಪ್ರಜ್ಞೆ ನಮಗೆ ಇದ್ದರೆ,ಬಹಳಷ್ಟು ದೇಹದ ಮೇಲಿನ ದಬ್ಬಾಳಿಕೆಯನ್ನು ನಾವು ಸಾಕಷ್ಟು ಕಡಿಮೆ ಮಾಡಬಹುದಾಗಿದೆ. ದೇಹ ನಮ್ಮದಲ್ಲ ಎಂದರೆ ಅರ್ಥವೇನೂ?ಎಂದು ಪ್ರಶ್ನೆ ಮಾಡುವವರು, ಯಾವುದೇ ಅನೈಚ್ಚಿಕ ಸ್ನಾಯು ನಮ್ಮ ವಶದಲ್ಲಿ ಇಲ್ಲ, ಉದಾಹರಣೆಗೆ: ನಮ್ಮ ಹೃದಯದ ಬಡಿತ ನಮ್ಮ ವಶದಲ್ಲಿ ಇಲ್ಲ ಎಂದು ಅರ್ಥ ಮಾಡಿಕೊಂಡರೆ ಗೊತ್ತಾಗುತ್ತದೆ, ಅದು ನಮ್ಮದಲ್ಲ ಅದರFriday, 22 February 2013
Subscribe to:
Post Comments (Atom)
No comments:
Post a Comment