Wednesday, 27 January 2016

ಹುಟ್ಟಿದಾಗಲೇ ಸಾವಿನ ದಿನಾಂಕ ನಿಗದಿ ಮಾಡಿಕೊಂಡು ಹುಟ್ಟುತ್ತೇವೆ. ಇರೋದನ್ನು ಅನುಭವಿಸುತ್ತಾ...ಇದ್ದಷ್ಟೂ ಹೊತ್ತು... ಆದಷ್ಟೂ ಬೇರೆಯವರನ್ನು ಗೋಳು ಹೊಯ್ಕೊಳ್ಳದೇ ತಾವೂ ಖುಷಿ ಆಗಿರಬೇಕು.
ಸಾವು ನಿಗೂಢ. ಎಂತವರೇ ಆಗಲೀ....ಸಾವಿಗೆ ಅಸಾಹಾಯಕರಾಗಿ ಶರಣಾಗುವುದು ಅನಿವಾರ್ಯ. ಯಮ ಧರ್ಮರಾಜ ಯಾವಾಗ ನಮ್ಮೆಡೆಗೆ ನೋಡ್ತಾನೆಯೋ ಅರಿಯದ ನಾವು, ಮಕ್ಕಳೋ, ಸಣ್ಣ ವಯಸ್ಸಿನವರೋ ಮರಣಿಸಿದರೆ ಅಯ್ಯೋ ಎಂದು ಹಲುಬುತ್ತೀವಿ. ಆದರೆ ಜರ್ಜರಿತ ದೇಹದೊಡನೆ ಬದುಕಿರುವ ನಮ್ಮವರಿಗೇ, ಬಿಡುಗಡೆಯಾಗಲೀ ಅಂತಾ ಹೋಗಲಿ ಬಿಡೀ ಅಂದುಬಿಡ್ತೇವೆ.
ಹುಟ್ಟಿದವರೆಲ್ಲರೂ ಎಂದೆಂದಿಗೂ ಇದ್ದುಬಿಟ್ಟರೆ ಮುಂದೆ ಹು...ಟ್ಟುವವರಿಗೆ ಜಾಗವೆಲ್ಲಿ ? ಮರೆವು ಎಂಬ ಶಾಶ್ವತವಾದ ಮುಸುಕನ್ನು ಯಮನು ನಮ್ಮ ಮೇಲೆಳೆದುಬಿಡುತ್ತಾನೆ. ಒಳ್ಳೆಯದೋ ಕೆಟ್ಟದ್ದೋ ಯಾವ ಕೆಲಸವಾದರೂ ಅದರ ನೆನಪು ನಮಗೆ ಉಳಿಯುವುದಿಲ್ಲ. ನಮ್ಮ ಜೀವನಕಥೆ ಹೇಗೋ ಮುಗಿದುಹೋಗಿಬಿಡುತ್ತದೆ. ನಮ್ಮ ಜನ್ಮ ಕಳೆಯುತ್ತದೆ. ನಾವು ಮಾಡಿದ ಕೆಲಸಗಳ ನೆನಪು ಇರುವುದಿಲ್ಲ. ಇದು ಸಂತೋಷ ಪಡಬೇಕಾದ ವಿಷಯ.
ಸಾವಿನ ಬಗ್ಗೆ ಹೀಗೆ ಯೋಚಿಸಬಹುದು, ಆದರೆ ನಮ್ಮೊಡನೆ ಇದ್ದವರೊಬ್ಬರು ಇಲ್ಲವಾದಾಗ .....
ನೋವು ..........
ನೆನ್ನೆಯಿಂದ ಯಾಕೋ ' ಸಾವು' ಕಣ್ಮುಂದೆ ಸುಳಿದಾಡತೊಡಗಿದೆ.
ಸಾವು ಎಲ್ಲಾರಿಗೂ ಬರುತ್ತೆ, ಅದುವರೆಗೂ ಹೇಗೆ ಬದುಕಬೇಕು ಎಂದು ಯೋಚಿಸಿ smile emoticon


ನನ್ನ ಹೃದಯದ ಮಿಡಿತಕೆ ..
ನಿನ್ನ ಪ್ರೀತಿಯೇ ಉಸಿರು
ಸಮಯದ ಪರಿವೆಯಿರದೇ ...
ಸದಾ ಜನಿಸಿದೆ
ನಿನ್ನದೇ ಹೆಸರು.

ಏಕೋ ನೀನು ನೆನಪಾಗುತ್ತೀ ಕಣೋ
ಎನ್ನುವುದಿಲ್ಲ ನಾ...ನಿನ್ನ ಮರೆತಿದ್ದರೇ ತಾನೇ ?
ಹೌದು, ಒಮ್ಮೊಮ್ಮೆ ತುಂಬಾ ಬೇಕೆನಿಸುತ್ತೀ ...ತಪ್ಪೇನು
ನಾನು ನಿನ್ನವನೆಂದು ನೀನಿತ್ತ ಮಾತು ನೆನಪಿಸಲೇನೋ?


ಸೂರ್ಯನನ್ನೇ ಮರೆಮಾಚುವ ಕಾರ್ಮೋಡ
ಗವ್ವನೇ ಕವಿದ ಕತ್ತಲು.....
ಪ್ರಪಂಚವೇ ನಾಶವಾಯಿತೇನೋ
ಹೆದರಿಕೆ ಒಳಗೊಳಗೇ
ನಾಲ್ಕು ಗೋಡೆಗಳ ನಡುವೆ ನಾನು ಮತ್ತು ನಿಶ್ಯಬ್ಧ...
ನೀನು ಬೇಕೆನಿಸುವಾಗ. ...ನಿಟ್ಟುಸಿರು. ..ಉಹುಂ. ..
ಏನಾದರೂ ಆಗಲಿ ಎನ್ನುವ ನಿರ್ಲಿಪ್ತತೆ.
ಸಾಕು ಎಂದು ಪುಸ್ತಕವ ಮುಚ್ಚಿ ಎದ್ದೆ...
ಪುಟಗಳು ಪಟ ಪಟನೆ ತೆರೆಯುತೊಡಗಿದವು.
ಮುಗಿದಿಲ್ಲ ನಿಜಾ...ಹಿಂತಿರುಗಿ ಸುಮ್ಮನೆ ನಕ್ಕು ಬಿಟ್ಟೆ. ..
ಬದುಕೇ ನೀನು ಸುಂದರ ಎನ್ನುವ ಧೈರ್ಯವಿಲ್ಲ
ನಗುವಿನಲಿ ಏನಿತ್ತು? ಏನಿಲ್ಲ ? ಗೊತ್ತಿಲ್ಲ. ...

ಖಾಲಿ ಖಾಲಿ ಎನಿಸುತ್ತಿದೆ...
ಒಂದಷ್ಟು ಕನಸುಗಳು ದೊರೆತರೆ
ಸರಾಗ ಉಸಿರಾಟ, ಬದುಕು ನಿರಾಳ
ಚಣಕಾಲ ನೀ ಬರಬಾರದೇನೋ?


ತುಂತುರು ಮಳೆ. ...
ತಣ್ಣನೆಯ ಗಾಳಿ. ....
ನಿನ್ನ ತುಂಟಾಟದ ನೆನಪುಗಳು...
ಸಧ್ಯಕ್ಕೆ ಸಾಕು ಕಣೋ. ..
ಮುಂದಿನದು ಮುಂದುವರೆಸೋಣ.......
ನೀ ಬರುತ್ತೀಯಾ ಅಲ್ವೇನೋ?

ನೀನೆಷ್ಟು ದಿನ ದೂರ ಇದ್ದರೂ. ....
ನನ್ನೆಡೆಗೇ ಮರಳುತ್ತೀಯ ಬಲ್ಲೆ
ಆದರೇ.....
ನಿನ್ನಾಗಮನಕೆ-
ಕಾಯುವುದು ಕಷ್ಟ. .....
ನಿನ್ನ ಅಗಲಿಕೆಯ ವೇದನೆ ತೀವ್ರ ಕಣೋ
ಮರೆಯಬಹುದೇ ನಿನ್ನ ಚೆಂದದ ಮೊಗವ....
ಸುಂದರ ನಗುವ...
ಹೇಗೆ ಮರೆತೇನು ಹೇಳು?
ನೀನಿತ್ತ ಒಲವ.
ಬೆಸೆದ ಬೆರಳುಗಳ ಬಿಸಿ
ನೊಸಲ ಚುಂಬಿಸಿದ ಹಸಿ ಇನ್ನೂ ಇದೇ...
ಬಯಸಿ ಅದನೇ ....ಮನಸು ...
ಕಣ್ಣುಗಳು ತೇವ ಕಣೋ.


ಕೊನೆಯ ಮುತ್ತಿಟ್ಟು ಬಂದ ಮೇಲೆಯೂ....
ಅವಳು. ..
ಎಂದೂ ಬಾರದವನಿಗಾಗಿ...
ಚಂದದಿ ಅಲಂಕರಿಸಿಕೊಂಡು ಕಾಯುತ್ತಾಳೆ
ಹೌದು, ಅವಳು ಬದುಕಬೇಕು. .....
ಉಸಿರಿರುವವರೆಗೆ.
ಅವಳ ಬದುಕಿನ ಅಗತ್ಯವಿದೆ. ..
ಅವಳನ್ನು ಪ್ರೀತಿಸುವ ಹೃದಯಗಳಿಗೆ.
\

ಹೇಯ್ ನೋಡೋ ....
ಬಿಚ್ಚಿಟ್ಟ ಹೆರಳಲಿ ....
ನಿನ್ನ ಬೆರಳಾಡಿಸುವಿಕೆಯ ನೆನಪುಗಳದೇ ಘಮಲು
ಬಿಗಿದಿರಿಸಲು ಮನಸ್ಸೇ ಇಲ್ಲ ನನ್ನಲಿ
ಹೇಗೆ ಹಾರಾಡುತ್ತಿವೆ ನೋಡು ಈ ಮುಂಗುರುಳು ??...
ನಿನ್ನಂತೆಯೇ ....
ತುಂಟತನದಿ ಮುತ್ತಿಕ್ಕುತ್ತಿವೆ ಕಣೋ ... ಕೆನ್ನೆಗೆ ... ಹಣೆಗೆ
ಅವಕ್ಕೇಕೆ ನೀ ಅವಕಾಶವೀಯುವಿಯೋ ನಾ ಕಾಣೆ
ನೀನೇ ಬಂದೊಮ್ಮೆ ....
ಸರಿಸಬಾರದೇನೋ ????

ಬೇರೇನೂ ಯೋಚಿಸಲಾಗುತ್ತಿಲ್ಲ ಕಣೋ....
ಬರೀ....ನಿನ್ನ ನೆನಪುಗಳ ಕಾಟ
ಮನಸಿಗೆ....ನೀ ಬೇಕೆನ್ನುವ ಹಠ.
ಕಾಯುವುದು ಕಷ್ಟ. ...
ಆದರೇ. ..ಅನಿವಾರ್ಯ...
ಎಲ್ಲದಕ್ಕೂ ಕೊನಯಿದೆ...
ಕಾಯುವ ಸಹನೆ ನನಗಿದೆ....
ಸಹನೆ ಕೊನೆಯಾಗುವ ಮುನ್ನ ...
ಬರಬಾರದೇನೋ ???


ಕಾರ್ಮೋಡ ಬಾನಲ್ಲಿ ....
ಮಳೆ ಬರುವ ಹಾಗಿದೆ
ನನ್ನ ಮನಕೂ ಬೇಸರದ
ಮೋಡ ಮುಸುಕಿದೆ ನೀನಿರದೇ
...
ನನಗೂ ನಿನ್ನೊಡನೆ
ಮಳೆಯಲ್ಲಿ ನೆನೆಯುವಾಸೆ.
ನೆನೆದು ಮಳೆ ಹನಿಯಲಿ
ಚಳಿಯಲಿ ನಡುಗಿ ಬಿಗಿದಪ್ಪುವಾಸೆ
ತಡವಾಗಿಯಾದರೂ ನಲ್ಲಾ
ನೀ ಬರಬಾರದೇ ?
ನಿನ್ನೊಲವ ಜಡಿಮಳೆಯಂತೆ
ಸುರಿಸಬಾರದೇ ?






ನನ್ನೊಳಗೆ ಅವಿತ ತುಂಟತನ
ಹಣಕುವುವುದು ಆಗಾಗ. .
ನಿನ್ನ ಮುದ್ದು ಮೊಗ ಕಣ್ಮುಂದೆ ಬಂದಾಗ...
ನೀನು ಬೇಕೆನಿಸುವಾಗ...
ನೀ ಕೋಪಿಸಿದರೇ....?...
ತಪ್ಪು ನನ್ನದೇನಲ್ಲ ಹೋಗೋ.

ಮಳೆಯೆಂದರೇ...
ಗುಡುಗು -ಆರ್ಭಟ
ಮಿಂಚು -ಸೆಳೆತ
ಸಿಡಿಲ -ಹೊಡೆತ
ನೀರಿನ ಸುರಿತ...
ಎಲ್ಲವೂ ಒದ್ದೆ-ಮುದ್ದೆ
ಅಲ್ಲಲ್ಲಿ ಗೊಚ್ಚೆ...
ನೆಲವ ತೊಳೆಯುವಿಕೆ
ಮಳೆಯೆಂದರೇ...
ಕೆಲವೊಮ್ಮೆ ಬಯಸುವ ಹಿತ
ಇನ್ನೊಮ್ಮೆ ಪಿರಿ ಪಿರಿ
ಥೇಟ್ ನಿನ್ನಂತೆಯೇ ಈ ಮಳೆ
ಹೌದು ಕಣೋ. .....
ಮಳೆ ಸುರಿಯತೊಡಗಿದಾಗ .....ನೀ ನೆನಪಾಗುತ್ತೀ.

ನಿನ್ನ ---
ಕಣ್ಣ ಮಿಂಚಿನ ಸೆಳೆತಕ್ಕೆ
ನಗೆಯ ಮೋಡಿಗೆ
ಸಿಲುಕಬಾರದೆಂದು
ನನ್ನ ನಯನಗಳ ಅದುಮಿದೆ...
ಯಾಕ್ಹೀಗೆ ನೀ ನುಸುಳಿ
ನನ್ನ ಕಾಡಿಸುತ್ತಿರುವೇ..?
ಇದಂತೂ ನಿಜಾ
ನಾ ಸಿಲುಕಿ, ನೀ ಸಿಕ್ಕ ಮೇಲೆ
ಒಳಗೊಳಗೇ ಒಂಥರಾ
ಹಿತವೆನಿಸಿದೆ ಕಣೋ....


ಪ್ರೀತಿಯ ಕುರಿತು
ಪ್ರೀತಿಯ ಕವನ
ಬರೆಯಲು ಹೊರಟರೆ .....
ಪದಗಳೆ ಸಿಗಲಿಲ್ಲ
ಪ್ರೀತಿಸುವ...
ನನ್ನವನು ಬಳಿಯಲಿರದೆ
ಬರೆಯಲು ನನ್ನ
ಮನಸ್ಸಿಗೂ ಮನಸ್ಸಿಲ್ಲ!

ಮೋಡ ಕವಿದೊಡನೆಯೇ......
ನಿನ್ನ ನೆನಪುಗಳು ಕಾಡುವುದು
ಮಳೆ ಸುರಿಯತೊಡಗಿದಾಗ...
ಮನ ನಿನ್ನ ಸನಿಹವ ಬೇಡುವುದು ಕಣೋ...
ನೆಪಗಳೆಲ್ಲವ ಸರಿಸಿ ...
ಬಂದು ಬಿಡೋ... ಚೆಲುವ
ಒಲವ ಸುರಿವೆ.
ಮಳೆಯಲಿ ನೆನೆದು....ಬಿಸಿಯಾಗುವ
ಮನ ತಣಿಯಲಿ.

No comments:

Post a Comment