Tuesday, 26 January 2016

ಕಣ್ಣೀರು ತುಂಬಿದ ಕಂಗಳು ... ಕಾಲ ಬಳಿ ಕುಳಿತ ಅವನು ಮೆತ್ತಗೆ ಅವಳ ಪಾದಗಳ ಕೈಯಲ್ಲಿ ಹಿಡಿದು ಒತ್ತಿದ.
ತಗ್ಗಿದ ಮೊಗವೆತ್ತಿ ಅವನೆಡೆಗೆ ದೃಷ್ಟಿ ಬೀರಿದಳು. ಅವನ ತುಂಟ ಹೂ ನಗೆಯಲ್ಲಿ ಏನೋ ಏನೋ ಭಾವ !!!!
ಮಾತುಗಳಲಿ ಏಕೆ ಹೇಳಬೇಕು ಪ್ರೀತಿಸುವ ವಿಷಯ ? ಪ್ರೀತಿಯ ಹೇಳಲು ಪದಗಳೆಲ್ಲಾ ಸವಕಲು ಗೊತ್ತಿದೆ ಇಬ್ಬರಿಗೂ.
ಹೌದು ಭಾವನೆಗಳ ವ್ಯಕ್ತಪಡಿಸಲು ಭಾಷೆ ಸೋಲುತ್ತದೆ.


ಧೀರ್ಘಕಾಲದ ಮೌನದ ಮೊಗ್ಗೆ ಬಿರಿದಿದೆ.
ಸೂರ್ಯನುದಯದ ದಿಕ್ಕೇನಾದರೂ ಬದಲಾಯ್ತೇ?
ಅಂತೂ ಆಗಮನದ ಭರವಸೆ ನಿನ್ನದು !!!!
ನದಿಯ ತೀರದಲಿ ಅಲೆದಾಡುವ ಕಣೋ. ತುಸುಹೊತ್ತು ನೀರಿನಲಿ ಕಾಲು ಇಳಿ ಬಿಟ್ಟು ಕೈ ಗಟ್ಟಿಯಾಗಿ ಹಿಡಿದುಕೊಂಡು ಕುಳಿ ತುಕೊಳ್ಳುವ ಆಯ್ತಾ ? ಮೇಲಿನ ಮೆಟ್ಟಿಲಲಿ ನೀನು, ನಿನ್ನ ಪಾದದಡಿ ನಾನು. ಇಣುಕ ಬೇಡವೋ ಪೋಲಿ ಹುಡುಗ!!! ಹರಿವ ನೀರ ನೋಡು, ಓಡುವ ನದಿ ಸಾಗರವ ಸೇರಲೇಬೇಕು ,,,,ಹಾಡ್ತೀಯಾ ?
ಯಾಕೆ ಮೌನ ? ಎಷ್ಟು ದಿನಗಳ ಅಗಲಿಕೆಯಲಿ ಬೆಂದಿರುವೆವು ಅಲ್ಲವಾ ?...

ಗೊತ್ತು ...
ನನ್ನೊಳಗೂ ...ನಿನ್ನೊಳಗೂ ...ಅದೆಷ್ಟೋ ನೋವುಗಳ ಗದ್ದಲ ನಡೆಯುತ್ತಿದೆ.
ಹೇಳು ನೀನು---
ಕಳೆದ ದಿನಗಳು..ಯಾಕೆ ಹೀಗಾಯ್ತು ...ವಿರಹದ ತಾಪ...ಅನುಭವಿಸಿದ ಸಂಕಟ..ಇವನ್ನೇ ಮಾತನಾಡೊಣವ ? ಸುರಿಸಬೇಕ ಕಣ್ಣೀರು??
ಎಲ್ಲ ಬದಿಗೊತ್ತಿ...
ಏನೂ ಆಗಿಲ್ಲವೇನೋ ...ಮುಂದೆ ಏನೇನೋ ಆಗುತ್ತೇನೋ...ಅಂತ ಸುಂದರ ಕನಸು ಕಲ್ಪನೆ ಬಗ್ಗೆ ಮಾತನಾಡೋಣವಾ ?
ಯಾವುದೂ ಬೇಡ ....
ತುಟಿಗಳಲಿ ತುಟಿಯ ಬಂಧಿಸಿ ಸುಮ್ಮನಿದ್ದುಬಿಡುವ ಅಲ್ವೇನೋ? ಕಾಲ ನಿಂತು ಬಿಡಲೀ....ಕ್ಷಣ ಹೊತ್ತಾದರೂ ಎಲ್ಲವನ್ನೂ ಮರೆಯುವ, ನಮ್ಮಲ್ಲಿ ನಾವು ಬೆರೆತು ಕಳೆದುಹೋಗುವ... ಆ ಹೊತ್ತಿನ ಸುಖ ನಮ್ಮದಾಗಿಸುವ ... ಬೇಕಾಗುತ್ತೆ ನಾವು ಬಲವಾಗಲು ಅಲ್ಲವೇನೋ???
ತಡವಾಗಿ ಬಂದರೂ ಜಡಿಮಳೆಯಂತೆ ನಿನ್ನೊಲವು ಕಣೋ ....
ನೆನೆಯ ಬೇಕಿದೆ ನಾನು.

ಪ್ರೀತಿ ಎಂದರೆ. ..
ಕಣ್ಮುಂದೆ ನಿನ್ನದೇ ಮೊಗ ಕಣೋ
ಬೇಡಿದ್ದು ನಾ ಹಿಡಿಯಷ್ಟು...
ನೀ ಸುರಿದೆಯಲ್ಲೋ
ನಿನ್ನೊಲವ ನಸರಿ ...

ನನ್ನೆದೆಯ ತುಂಬಾ!!!!

ನನ್ನ ಕಣ್ಣ ಹನಿಗಳು ಜಾರಿ....
ಅವನ ಬೊಗಸೆಯಲ್ಲಿ ಬಿದ್ದು. ..
ಅವನೊಲವಿಗೆ ಮುತ್ತಾದವು
ಮೆತ್ತಗೆ ಎದೆಗಪ್ಪಿದ ಅವುಗಳ
ತುಟಿಗಳಲಿ ಕಿರು ನಗೆ......

ಮಾತುಗಳು ಮನದಲ್ಲೇ ಉಳಿದವು.


ಬಾನಲ್ಲಿ ಕವಿದ ಕಾರ್ಮೋಡ
ಮಳೆ ಬರುವ ಸೂಚನೆ
ನನ್ನ ಮನಕೂ ಕವಿದಿದೆ ಬೇಸರದ ಮೋಡ
ನೀ ಬಳಿಯಿರದ ವೇದನೆ.




No comments:

Post a Comment