Tuesday, 26 January 2016



ಸಾಕೆಂದು ಮುಚ್ಚಲು ಅಣಿಯಾದ ಕಣ್ಣುಗಳಲಿ ತುಂಬಿದ ಕನಸುಗಳಿಗೆ 'ಅವನು' ಎಂದು ಹೆಸರು.



ಬೇಡವಾದ್ದನ್ನು, ಅದು ವಸ್ತುಗಳೇ ಆಗಲೀ...ಸಂಬಂಧಗಳೇ ಆಗಿರಲೀ. ... ಕಿತ್ತು ಎಸೆದ ಮೇಲೆ. ...ಎಷ್ಟೋ ನಿರಾಳ.



ಬೇಕೂ ಅಂದ್ಕೊಂಡಿದ್ದನ್ನು.....ಮಣ್ಣು ಕೊಡವಿ, ತೊಳೆದು, ನಮಗೆ ಬೇಕಾದ ಹಾಗೆ ತಿದ್ದಿ, ತೀಡಿ, ಪಳಗಿಸಿ ಇರಿಸಿಕೊಳ್ಳುವುದು ಜಾಣತನ.



ಎಲ್ಲವೂ ಸಿಕ್ಕ ಮೇಲೆಯೂ....ಏನೋ ಬೇಕು ಎನ್ನುವ ಅತೃಪ್ತ ಭಾವಕ್ಕೆ. ...ಅವನೆಂದು ಹೆಸರು

ದೂರ ನಿಂತರೇ...ಹತ್ತಿರ ಕರೆದಾನೇನೋ....
ದೂರವಿರಲಾಗದ ಚಡಪಡಿಕೆ....
ಸಮೀಪಿಸಲು .....ಆಸೆ... ತಳ್ಳಿಸಿಕೊಳ್ಳುವ ಹೆದರಿಕೆ.
ತುಸುಹೊತ್ತು ದೂರ ನಿಲ್ಲಲು ಯತ್ನಿಸುವೆ
ತುಟಿಗಳ ಹೊಲೆದು.......

ಕಣ್ಣು ಹೊರಳೀತು...
ಕಾಯುವ ಸಹನೆ ನನಗಿಲ್ಲವೇ...
ಎದೆಯ ಬಡಿತದ ಸದ್ದಿಗೆ ....
ತಿರುಗಿಯಾನು ಅವನು


ಶತ್ರುಗಳ ಇರಿವ ಮಾತುಗಳಿಗಂತಲೂ...ಮಿತ್ರರ ಮೌನ ಅಸಹನೀಯ.




ಬಣ್ಣ ಹಚ್ಚಿದ ಮುಖವೇ ಸುಂದರ, ಅದೇ ನಿಜ ಅಂದುಕೊಳ್ತೇವೆ. ಬಣ್ಣ ರಹಿತ ಮೊಗದ ದರುಶನವಾದಾಗ....ಅದನ್ನು ಅರಗಿಸಿಕೊಳ್ಳುವುದು ಅಷ್ಟು ಸುಲಭವಲ್ಲ.



ಮಾತುಗಳಿಂದಾ ನಮ್ಮ ಭಾವನೆಗಳನ್ನು ಸರಿಯಾದ ರೀತಿಯಲ್ಲಿ ವ್ಯಕ್ತಪಡಿಸಲು ಅಸಾಧ್ಯ ಎಂದು ಗೊತ್ತಾದ್ಮೇಲೆ, ಮೌನವೇ ಲೇಸು


ಚೆಂದದ ಕಿರುನಗುವಿನಲಿ....ಜೇನ ಮಾತಿನಲ್ಲಿ. .. ಕನಸುಗಳ ಬಿತ್ತಿದ್ದಾನೆ ಅವ.....ನನ್ನೆದೆಯಲಿ..
ಪ್ರೀತಿ ಧಾರೆಯಲ್ಲಿ ಚಿಗುರಿಸುವುದೂ.....ಅವನದೇ ಜವಾಬ್ದಾರಿ.


ನನ್ನೊಳು....
ಅವನ ಬಳಿ ಆಡುವ. ...
ಮಾತುಗಳಿಲ್ಲ.....
ಅವನ ಮಾತು ಆಲಿಸುತ್ತಾ ....
ಮೈಮರೆವ ತುಡಿತವಷ್ಟೇ ನನ್ನಲಿ....

ದೇವರ ಸನ್ನಿಧಾನದಲಿ ನಿಂತಂತ....ಪ್ರಸನ್ನತೆ
ನಾನಿರಲು ಅವನ ಸಾನಿಧ್ಯದಲಿ

ಎಲ್ಲರೂ ಇದ್ದಾರೆ. ...
ಜೊತೆಗಿದ್ದಾರೆ ಎನ್ನುವ ಭರವಸೆ ಹುಟ್ಟಿಸುತಾರೆ
ಆಸುಪಾಸಿನಲ್ಲಿಯೇ ನಿಂತಿದಾರೆ..
ಅಂತರವನ್ನು ಜತನದಿ ಕಾಪಿಟ್ಟು
ಕೂಗಿದಾಗ ...ಕೇಳೀತೆಂಬ ನಂಬಿಕೆಯಿಲ್ಲ...

ನನ್ನ ಕಣ್ಣುಗಳಲ್ಲಿ ಕಂಡವರು....ನನ್ನ
ಕಂಡೂ...ಕಾಣದವರ ಹಾಗೆ ನಟಿಸುತ್ತಾರೆ....
ಜಗವೇ ಒಂದು ನಾಟಕ ರಂಗ ಬಿಡೀ....
ನಾನೂ ನಟಿಸುತ್ತೇನೆ....
ಏನೂ ಆಗಿಲ್ಲವೇನೋ ಎಂದು
ನೀರ ಮೇಲಿನ ಗುಳ್ಳೆ ನಿಜವಲ್ಲ ಹರಿಯೇ.....
ಹಾಡಿಕೊಳ್ಳುತ್ತೇನೆ.....ಗಧ್ಗದಿತ ದನಿಯಲ್ಲಿ.


ಯಾವುದೋ ಆಕರ್ಷಣೆಯಿಂದ, ಗೌರವ, ಅಭಿಮಾನದಿಂದ ಹುಟ್ಟಿದ "ಪ್ರೀತಿ".....ಹೆಚ್ಚು ದಿನ ಉಳಿಯದು



ಮಾತು ಕೇಳುವುದು ಓಕೆ, ಮಾತು ಆಡೋದು ಬೇಜಾರು. ....ಅಂತೇನಲ್ಲ, ಎದುರಿಗಿರುವವರು ಯಾರು ಎಂಬುದು ಮುಖ್ಯ. ಎಷ್ಟು ಆಸಕ್ತಿಯಿಂದ ಮಾತನಾಡ್ತಾರೆ ಅನ್ನೋದು ಮುಖ್ಯ.


No comments:

Post a Comment