1.ನನ್ನ ಕಣ್ಣು ಕಂಡು
ನಿನ್ನ ಮೊಗದಲ್ಲಿ ಕಿರುನಗೆ
ಮತ್ತೆ-ಮತ್ತೆ ನೋಡುವಂತೆ
ಮನದಲ್ಲಿ
ಅರಿಯಲಾರದ ತಲ್ಲಣ
ಮುದ್ದು ವದನ ನಿನ್ನದು
ತಿಳಿನೀರ ಕೆಂದಾವರೆ
ನುಡಿಸಿತೆನ್ನ ದೇಹವೀಣೆ
ಹಿತವಾದ ಕಂಪನ
ಬಾಳ ಹಾದಿಯಲಿ
ಸಿಕ್ಕ ಗೆಳೆಯನೆ ನೀನು
ಒಂದಷ್ಟು ದೂರ ಕೈಹಿಡಿದು
ಜೊತೆ ಬರುವೆಯೇನು
ಇದ್ದಷ್ಟು ಸಮಯ ಜೊತೆಯಾಗಿ
ಬದುಕುವ
ನಾ ನಿನಗೆ, ನೀ ನನಗೆ
ಒಪ್ಪಿಗೆಯಾದರೆ ಕರಾರು
ನೀಡೊಂದು ಮುಗುಳ್ನಗೆ.
2.ನಾ ನಕ್ಕಾಗೆಲ್ಲಾ ಅಮ್ಮ ಕೇಳುತ್ತಾರೆ
ಯಾಕೆ ಮಗು, ಸುಮ್ಮನೆ ಈ ನಗು?
ಹೇಳುವುದಾದರೂ ಹೇಗೆ ನಾ
ನಿನ್ನ ಸವಿ ನೆನಪುಗಳ ಕಚಗುಳಿ ಕಾರಣವೆಂದು.
ನಿನ್ನ ಮೊಗದಲ್ಲಿ ಕಿರುನಗೆ
ಮತ್ತೆ-ಮತ್ತೆ ನೋಡುವಂತೆ
ಮನದಲ್ಲಿ
ಅರಿಯಲಾರದ ತಲ್ಲಣ
ಮುದ್ದು ವದನ ನಿನ್ನದು
ತಿಳಿನೀರ ಕೆಂದಾವರೆ
ನುಡಿಸಿತೆನ್ನ ದೇಹವೀಣೆ
ಹಿತವಾದ ಕಂಪನ
ಬಾಳ ಹಾದಿಯಲಿ
ಸಿಕ್ಕ ಗೆಳೆಯನೆ ನೀನು
ಒಂದಷ್ಟು ದೂರ ಕೈಹಿಡಿದು
ಜೊತೆ ಬರುವೆಯೇನು
ಇದ್ದಷ್ಟು ಸಮಯ ಜೊತೆಯಾಗಿ
ಬದುಕುವ
ನಾ ನಿನಗೆ, ನೀ ನನಗೆ
ಒಪ್ಪಿಗೆಯಾದರೆ ಕರಾರು
ನೀಡೊಂದು ಮುಗುಳ್ನಗೆ.
2.ನಾ ನಕ್ಕಾಗೆಲ್ಲಾ ಅಮ್ಮ ಕೇಳುತ್ತಾರೆ
ಹೇಳುವುದಾದರೂ ಹೇಗೆ ನಾ
ನಿನ್ನ ಸವಿ ನೆನಪುಗಳ ಕಚಗುಳಿ ಕಾರಣವೆಂದು.
No comments:
Post a Comment