Sunday, 21 December 2014

ನಿರೀಕ್ಷೆ, ಕನಸುಗಳನ್ನು ಚಿಗುರಿಸಿದ
ನನ್ನೊಲವೇ. ..
ಹೀಗೆ ಮೌನವಾಗಿ 
ನನ್ನ ಕೊಲ್ಲುವುದು ತರವೇ???
ಹಂಚಿಕೊಂಡ ಮೇಲೂ ....
ಮನಸ್ಸು, ಕನಸು... ಎಲ್ಲವನೂ
ಹೇಗೆ ತಾನೇ ಸಹಿಸಲಿ
ಈ ಅಗಲಿಕೆಯನು ???
ಮನಸು ಬಯಸಿದಾಗಲೆಲ್ಲಾ ...
ನಿನಗೆ ಕರೆನೀಡುವೆ
ನಾನಿರುವೆಡೆ ಬಂದು ಅಪ್ಪಿಕೊಳ್ಳಬಾರದೇ ನನ್ನೊಲವೆ ?
ನಿನ್ನ ಮನದಾಳದಲ್ಲಿಯೇ ಇದ್ದು ಕೊನೆಯುಸಿರಿನವರೆಗೆ
ನಿನ್ನ ಜೊತೆ ಸಾಂಗತ್ಯ ನಿಭಾಯಿಸುವೆ.

No comments:

Post a Comment