Sunday, 21 December 2014

olavigaagi...

Naalku godegala naduve naa obbaleE
naaneke koragali
Sonu nigam na romantic songs
Jothege ninna madhura nenapugalive
Khushiyagiralu innenu bekide nannolaveE ? ಮಾತುಗಳೇಕೆ ಬೇಕು ನೀ ಬಳಿಯಿರಲು ?
ನಿನ್ನ ಹೂನಗೆಯ ಕಂಡಾಗ ಮೂಗಳಾಗುವುದೇ ಮಿಗಿಲು.
ತುಂಟತನ, ಚೆಲ್ಲಾಟ ಎಲ್ಲಾ ನಿನಗೇ ಮೀಸಲು
ಅದು...ನೀ ನನ್ನ ಎಂದೂ ಅಗಲದಂತೆ ಪ್ರೀತಿಸಲು. ಮರೆಯಬೇಕೆಂದೇ ನಿನ್ನ ಮತ್ತೇರುವಷ್ಟು ಕುಡಿದೆ
ಮತ್ತಿನಲ್ಲೂ ನಿನ್ನ ಹೆಸರನೇ ತೊದಲಿದೆ.
ಕನಸಾಗಿ ಕಾಡುವೆ ನೀ ನಿದಿರೆಯಲೂ ...
ಚಿರನಿದ್ರೆಯೇ ಬೇಕೇನೋ ನಿನ್ನ ನೆನಪಾಗದಿರಲು.

ನಿಮ್ಮ ನಿಟ್ಟುಸಿರು ನನ್ನೆದೆಯ ಸುಡುತ್ತಿದೆ ನನ್ನೊಲವೇ. ....
ತಬ್ಬಿ ಸಂತೈಸಲು ನಾ ಬೇಡವೇ? ಭೂತ-ಭವಿಷ್ಯದ ಗೊಡವೆ ಮರೆಸುವ
ನಿನ್ನೊಡನೆಯ ವರ್ತಮಾನದ ಸುಖ ಸ್ಥಿರವಾಗಬಾರದೇ ನನ್ನೊಲವೇ ?

ನಿನಗೊಂದು ಮುದ್ದಾದ ಹೆಸರನಿಡಲೇ
ಮುದ್ದು ಹೆಚ್ಚಾದಾಗಲೆಲ್ಲ ಪೆದ್ದು ಎನ್ನಲೇ? ನಿನ್ನ ನಗುವಿಗೆ ನನ್ನ ನಗುವೆ ಕಾರಣವಾದರೆ ಹೇಳಿಬಿಡು
ನೋವಿನಲ್ಲೂ ನಗುವುದ ರೂಡಿಸಿಕೊಳುವೆ ನಾನು...

No comments:

Post a Comment