Thursday, 25 December 2014


ಎಲ್ಲವೂ ಸುಳ್ಳಾದರೂ. ....
ನಿನ್ನ ಇರುವಿಕೆಯ ಮಧುರಾನುಭೂತಿ ನಿಜಾ. ...
ಯಾವುದೂ ಶಾಶ್ವತವಲ್ಲ. ..ಆದರೂ
ಬಯಸುತಿದೆ ನಿನ್ನ, ನನ್ನುಸಿರು ನಿಜಾ...
ಹಿಂತಿರುಗಿ ನೋಡಿದಾಗ ..ನನ್ನ ಹೆಜ್ಜೆಗಳೊಡನೆ ನಿನ್ನದೂ ಗುರುತು! !!!
 ಜೊತೆಯಲ್ಲೇ ನಡೆದರು ಗಮನಿಸಿರಲಿಲ್ಲ !!!
ಅದು ಬದುಕಿದ್ದೆ,  ನೀ ಸಿಕ್ಕ ಮೇಲೆ ಸಂತೋಷದಿಂದ ಬದುಕುತಿದ್ದೇನೆ.
ಪ್ರೀತಿಯೋ. ...ಪ್ರೇಮವೋ. ..ಸ್ನೇಹವೋ. ...ಎಲ್ಲವೂ....
ಹುಡುಕಾಟದ ಹಂಬಲವಿಲ್ಲ.

ನನ್ನ ಪದ್ಯಗಳು,
ಬರಿಯ ಸುಂದರ ಪದಗಳ ಜೋಡಣೆಗಳಲ್ಲ
ನನ್ನ ಎದೆಯೊಳಗೆ ನಿನಗಾಗಿ ಬಚ್ಚಿಟ್ಟ ಪಿಸುನುಡಿಗಳು
ಅದರಲ್ಲಿನ ಗಾಢ ಒಲವ ಓದದೇ, ಅರ್ಥೈಸದೇ, ಅನುಭವಿಸದೇ ...
ದೂರ ಇರುವ ಮೂಢ ಅನಕ್ಷರಸ್ತ ನೀನು .

ಇರಲಿ ಬಿಡು ಪ್ರೀತಿಯಾಳವ ತೋರುವ ವಿರಹದ ಅನುಭವ 
ದುಪ್ಪಟ್ಟು ಮುದ್ದಿಸುವೆಯಲ್ಲಾ ಬಂದಾಗ ನೀ ಸನಿಹ 



No comments:

Post a Comment