ಅಂದು ದೀಪಾವಳಿ, ಅಮ್ಮ ನನಗೆ ಎಣ್ಣೆ ಒತ್ತಿ ನೀರು ಹಾಕಿದ್ದರು, ತಲೆ ಒರೆಸಿಕೊಳ್ಳುತ್ತಾ ಕನ್ನಡಿ ಮುಂದೆ ನಿಂತಿದ್ದೆ. ಕನ್ನಡಿಯ ಮೂಲೆಗೆ ಚುಚ್ಚಿಟ್ಟ ಒಂದು ದೊಡ್ಡ ಸೂಜಿ ಕಂಡಿತು. ಅದು ..... ಆಗೆಲ್ಲಾ u pin ಬಳಸಿ ಉಲ್ಲನ್ ಶಾಲ್ ಹಾಕೋದು ಕಲಿತ ಹೊಸತು. ಉಲ್ಲನ್ ಸಮೇತ ಇದ್ದ ಸೂಜಿ. ಅದನ್ನು ತೆಗೆದುಕೊಂಡು ನಾನೇ ಮೂಗಿಗೆ ಮೆತ್ತಗೆ ಚುಚ್ಚಿಕೊಂಡೆ . ಅರ್ಧ ಒಳಗೆ ಹೋಗಿಯೇ ಬಿಡ್ತು , ಮತ್ತಷ್ಟು ಮೆತ್ತಗೆ ಒತ್ತಿದೆ, ಮೂಗಿನ ಈಚೆ ತುದಿಗೆ ಬಂದು ಕೈಗೆ ಸಿಕ್ಕಿತು , ಅಮ್ಮಾ ಮೂಗು ಚುಚ್ಚಿಕೊಂಡೆ ಅಂತಾ ಕಿರುಚಿದೆ . ಅಮ್ಮ ಬಂದು ಸೂಜಿ ಪೂರ್ತಿ ಸುರಿದು ಉಲ್ಲಾನ್ ಕಟ್ಟಿದರು . ಎಲ್ಲರಿಗೂ ಆಶ್ಚರ್ಯ ಸುಧಿ ಅವಳಿಗೆ ಅವಳೇ ಮೂಗು ಚುಚ್ಚಿಕೊಂಡಳಂತೆ ಅಂತ smile emoticon
ನಮ್ ಕಡೆ ಹೆಣ್ಣು ಮಕ್ಲು ದೊಡ್ಡವರು ಆಗ್ತಿದ್ದ ಹಾಗೆ, ಸೋದರ ಮಾವನ ಜವಾಬ್ದಾರಿ ಅವಳಿಗೆ ಮೂಗು ಚುಚ್ಚಿಸೋದು . ಆಗ ಹೆಚ್ಚು ನೋವಾಗೋಲ್ಲ, ಇಲ್ಲಾಂದ್ರೆ ಮದುವೆಯಾಗುವಾಗ ಗಂಡನ ತೊಡೆ ಮೇಲೆ ಕುತ್ಕೊಂಡು ಮುಗು ಚುಚ್ಚಿಸ್ಕೊಬೇಕಾಗುತ್ತೆ ಅಂತ ಹೆದರಿಸೋರು . ನನಗಿಂತ ೫ ವರ್ಷ ಹಿರಿಯವಳಾದ ಅಕ್ಕ ಮೂಗು ಚುಚ್ಚಿಸಿಕೊಳ್ಳುವಾಗಿನ ಆರ್ಭಟ ನೋಡಿ ಹೆದರಿಬಿಟ್ಟಿದ್ದೆ ನಾನು. ಅತ್ತೆ, ಮಾವ , ಅತ್ತಿಗೆ , ಅಮ್ಮ ಎಲ್ರೂ ಅಕ್ಕನನ್ನು ಬಿಗಿಯಾಗಿ ಹಿಡ್ಕೊಂಡು ಮೂಗು ಚುಚ್ಚಿದರೆ, ಅವ್ಳು ನೋವಿಗೆ, ಎಲ್ರಿಗೂ ಹೊಡೆದು ರಂಪ ಮಾಡಿದ್ಲು, ಆಗ ಸರ್ಯಾಗಿ ಚುಚ್ಚದೆ, ಮತ್ತೆ ಸ್ವಲ್ಪ ದಿನಗಳ ನಂತರ ಚುಚ್ಚುವ ಕಾರ್ಯಕ್ರಮ ಇತ್ತು . ಪಜೀತಿ , ಇಷ್ಟು ದಪ್ಪದ ಮೂಗು , ನೋವು ಅನುಭವಿಸಿದ್ದು ನೋಡಿದ್ದೆ .
ಅದಕ್ಕೆ ನನಗೆ ನಾನೆ ಯಾರೂ ಇಲ್ಲದಾಗ ,ಮೂಗು ಚುಚ್ಚಿಕೊಂಡು ನೋವು ಮಾಡಿಕೊಂಡೆ, ಯಾರ ಮುಂದೆಯೂ ಅತ್ತು ಅವಮಾನ ಅನುಭವಿಸೋದು ನನಗೆ ಈಗಲೂ ಇಷ್ಟವಾಗುವುದಿಲ್ಲ.
ಮುಂದೇನೋ ಆಗಬಾರದ್ದು ಆಗುತ್ತೆ , ನೋವೆ ಆಗುತ್ತೆ ಅದನ್ನು ಎದುರಿಸೋಕೆ ಈಗಲೇ ತಯಾರಾಗಬೇಕು ಅನ್ನೋ ಸ್ವಭಾವ . ಅಪರೂಪಕ್ಕೆ ನನ್ನ ಮಗ ಹೊಟ್ಟೆಯಲ್ಲಿರುವಾಗ ,ಹೊಟ್ಟೆ ಸಿಕ್ಕಾಪಟ್ಟೆ ದೊಡ್ಡ ಇತ್ತು, ನೀರು ತುಂಬಾ ಇದೆ ಅಂದಿದ್ರು , ನಾನು ಮಗು ಹೇಗೆ ಹುಟ್ಟುತ್ತೋ ಏನೋ ಎಂದು ಸ್ಕ್ಯಾನಿಂಗ್ ಮಾಡಿಸುವಾಗ, ಹೇಗಾದರೂ ಇರಲಿ ಹೇಗಿರುತ್ತೆ ಹೇಳಿ ನಾನೀಗಲೆ ಅದು ಹೇಗಿದ್ರು ಒಪ್ಪಿಕೊಳ್ಳೋಕೆ ರೆಡಿ ಆಗ್ತೇನೆ ಅಂತ ಡಾಕ್ಟರ್ ಗೆ ಕೇಳಿ ಬಯ್ಯಿಸಿಕೊಂಡಿದ್ದೆ .
ನೋವು ಅಂದ್ರೆ ಅದ್ಯಾಕೆ ಭಯವೋ ?ನನಗಂತೂ ನಾ ಬಯಸಿದಂತಹ ಬದುಕು, ಕೇಳಿದ್ದನ್ನೆಲ್ಲಾ ಇಲ್ಲಾ ಅನ್ನದೇ ತಂದುಕೊಡುವ ಗಂಡ, ಜಾಣ ಮುದ್ದು ಮಕ್ಕಳು, ಸಾಕಷ್ಟು ಎಲ್ಲವೂ ಇದ್ದರೂ ..ನನ್ನ ಮುಖದಲ್ಲಿ ನಗು ಇಲ್ಲ ? ಯಾಕೆ ಅಂತಾ ಎಲ್ರು ಕೇಳ್ತಾರೆ. ಇರುವುದನೆಲ್ಲಾ ಬಿಟ್ಟು ಇನ್ನೇನು ಬಯಸುತ್ತೇನೆಯೋ ನಾನರಿಯೆನು frown emoticon
ಸ್ವಲ್ಪ ಅನಾರೋಗ್ಯದ ಕಹಿ, ಸದಾ ಮತ್ತೊಬ್ಬರ ಸಮಸ್ಯೆ , ಕಷ್ಟಗಳನ್ನು ನನ್ನದೇ ಎಂದು ಅನುಭವಿಸುವ ಮೃದುತನ /ಹುಚ್ಚುತನ ಇರಬೇಕು, ನಾ ನಗುವುದು ಕಡಿಮೆ frown emoticon
ಹಾ.... ನೋವು ಅಂದ್ರೆ ದೈಹಿಕ ನೋವುಗಳು ಸಾಕಷ್ಟು ಅನುಭವಿಸಿದ್ದರೂ , ಆ ನೋವಿಗೆ ಭಯ ಪಡುತ್ತೇನೆ. ಅದಷ್ಟೇ ಅಲ್ಲ, ಒಂದು ಸಣ್ಣ ಬಿರುಮಾತು, ನಾ ಹಚ್ಚಿಕೊಂಡವರ ಮೌನ, ನೆಗ್ಲಿಜೆನ್ಸ್ ಇದೆಲ್ಲಾ ನನ್ನನ್ನು ತುಂಬಾ ನೋಯಿಸುತ್ತೆ. ಇನ್ನು ರುತುಸ್ರಾವದ ನೋವು, ಸುಮ್ ಸುಮ್ನೆ ಏನೇನೋ ಯೋಚಿಸಿ, ಅದು negetive ಆಗಿಯೇ ಜಾಸ್ತಿ ಯೋಚಿಸಿ, ತಲೆಕೆಡಿಸ್ಕೊಂಡು ಬರುವ ತಲೆನೋವಿಗೆ ಸಹ ಹೆದರಿ ಮಾತ್ರೆಗಳ ತರಿಸಿಟ್ಟುಕೊಳ್ಳುವ ಹೆಣ್ಣು ನಾನು smile emoticon ನೋವು ತಡೆಯೋಕೆ ಆಗದೆ ಸತ್ತು ಹೋಗಿಬಿಡಬೇಕು ಅನಿಸಿಬಿಡುತ್ತೆ .
ಸಾವಿನ ಬಗ್ಗೆ ಅತಿಯಾಗಿ ಮಾತಾಡುವ ನಾನು ಬಹುಷಃ ಬದುಕನ್ನು ತುಂಬಾ ಪ್ರೀತಿಸ್ತೇನೆ. ಬರುವುದಾದರೆ ಬರಲಿ ಸಾವು ನಿದ್ರೆಯಲಿ, ಅದುವರೆಗೂ ನನ್ನವರಿಗೆ, ನಾನು ಪ್ರೀತಿಸುವವರಿಗೆ, ಯಾರಿಗೂ ಹೊರೆಯಾಗದಂತೆ, ಆದಷ್ಟು ಕಡಿಮೆ ತೊಂದರೆ ಕೊಡ್ತಾ ... smile emoticon ನಾನು ಬದುಕಬೇಕು.

No comments:
Post a Comment