ರಾತ್ರಿಯಿಡೀ ಅಲ್ಲಿಂದ ಇಲ್ಲಿಗೆ ಓಡಾಡುತ್ತಾ, ಏನೋ ಓದುತ್ತಾ, ಟೀ ವಿ ನೋಡ್ತಾ ನಿದ್ರಿಸದ ನಾನು ಬೆಳಗಿನ ನಿದ್ರೆಯನ್ನು ತುಂಬಾ ಎಂಜಾಯ್ ಮಾಡ್ತೇನೆ . ನನ್ ಪಪ್ಪಿ 'ಡಾಲಿ' ಬಂದಮೇಲೆ ಅದಕ್ಕೂ ಸಂಚಕಾರ . ಅದು ನನ್ ಮಕ್ಕಳ ಹಾಗೆ ತುಂಟ , ಚೂಟಿ ಎರಡು ತಿಂಗಳ ಮರಿ ಸಖತ್ ಸ್ಟ್ರಾಂಗ್ . ಕಟ್ಟು ಬಿಚ್ಚಿದರೆ ಮನೆ ತುಂಬಾ ಕುಣಿತ , ಅಕ್ಕನ ಹೌದು ಅದು ನನ್ನ ಮಗಳಿಗೆ ಮತ್ತು ಮಗನಿಗೆ ತಂಗಿ smile emoticon ಅವಳ ಬಾತ್ ರೂಂ ಗೆ ಓಡಿ ಬಂದು ಬಕೆಟ್ ನಲ್ಲಿರೋ ನೀರು ಕುಡಿಯುತ್ತೆ, ಸೂಸು ಮಾಡುತ್ತೆ, ಅವಳ ನಿಲುವುಗನ್ನಡಿಯ ಮುಂದೆ ನಿಂತು ತನ್ನನ್ನು ತಾನೇ ನೋಡಿಕೊಂಡು ಬಾಲ ಅಲ್ಲಾಡಿಸ್ಕೊಳ್ತ ಖುಷಿಪಡುತ್ತೆ . ಎಷ್ತೆಷ್ಟೊತ್ತಿಗೋ ಎದ್ದು ಹಸಿವೆ ಎಂದು ಅಳುತ್ತೆ, ಸಿಕ್ಕಾಪಟ್ಟೆ ಸೂಸು ಮಾಡಿ ಮನೆನೆಲ್ಲಾ ಗಬ್ಬು ಮಾಡುತ್ತೆ, ಎಲ್ಲಾ ವಸ್ತುಗಳೂ ನನಗೆ ಕಚ್ಚೋಕೆ ಇರೋದು ಅಂತಾ ಕಚ್ಚುತ್ತೆ, ತುಂಬಾ ಮುದ್ದು ಮಾಡಿಸ್ಕೊಳ್ಳುತ್ತೆ,ಹಾಕಿದ ರಂಗೋಲಿ ಕೆಡಿಸುತ್ತೆ , ಪೆಡಿಗ್ರಿ ಬೇಕು , ನೀರು ಬೇಕು, ಆಚೆ ಹೋಗಬೇಕೂ ಅಂತಾ ಹೇಳುತ್ತೆ, ಬುಲೆಟ್ ಸೌಂಡ್ ಅದಾಗ ಎದ್ದು ಬಾಲ ಅಲ್ಲಾಡಿಸಿಕೊಂಡು ಕುಯ್ ಗುಡುತ್ತೆ, ಅಣ್ಣ ಶಾಲೆಯಿಂದ ಬರುವ ವೇಳೆ ಅದಕ್ಕೆ ಗೊತ್ತು, ಮುದ್ದು ಮರಿಗೆ ನಾನೆ ಅಮ್ಮ smile emoticon ಶಾಂಪು ಮಾಡೋಕೆ ,ತಿನ್ನಿಸೋಕೆ, ಸೂಸು ಕಕ್ಕ ಶುದ್ದ ಮಾಡೋಕೆ smile emoticonಯಾರೋ ಏನೋ ಇದು ನಂ ಕೈಲಿ ಸೇವೆ ಮಾಡಿಸ್ಕೊಂಡು ನಮ್ಮನೇಲಿ ಹಾಯಾಗಿರೋಕೆ ? ಯಾರ ರುಣವೋ ಏನೋ ....
ನಾನಂತೂ ಜನ್ಮ ಪುನರ್ಜನ್ಮ ಅಂತೆಲ್ಲಾ ಯೋಚಿಸೋದು ಜಾಸ್ತಿ smile emoticon ಋಣ , ಕರ್ಮ ಅಂತೆಲ್ಲ ತಲೆಕೆಡಿಸಿಕೊಳ್ಳುವುದು ಜಾಸ್ತಿನೆ.
ಹೋಗಲೀ ಬಿಡೀ ... ನಾನು ಇವಳ ದೆಸೆಯಿಂದ ಬೇಗ ಏಳುವುದು, ವಾಕಿಂಗ್ ಹೋಗುವುದು, ಮನೆಯನ್ನು ಬೇಗ ಬೇಗ ಕ್ಲೀನ್ ಮಾಡೋದು ಕಲಿತಿದ್ದೇನೆ. ಒಂದಷ್ಟು ಲವ ಲವಿಕೆ ಅಂತೂ ಇದೆ ಸುಳ್ಳಲ್ಲ smile emoticon
ಅಷ್ಟೇ ಅಲ್ಲ ಇನ್ನೂ ಹೇಳ್ತೇನೆ ಕೇಳಿ ---
ನೆನ್ನೆಯಿಂದಾ ನನ್ನ ಮೀನುಗಳು ಮೇಲಕ್ಕೆ ಬಂದು ಅಡ್ದಾಡ್ತಿವೆ, ಅಕ್ವೇರಿಯಂನ ಫಿಲ್ಟರ್ ಕೆಲಸ ಮಾಡೋದು ನಿಲ್ಲಿಸಿದೆ . ೩ ಮೀನುಗಳು ಕೊನೇಯುಸಿರು ಎಳೆದವು. ಪಾಪ ಪೂರಾ ಮೀನುಗಳು ಸತ್ತರೆ, ಅದನ್ನು ಕೊಟ್ಟವರು ನನ್ನ ಶಪಿಸಿಯಾರು ಎಂಬ ಭಯ, ಇಂದು ಧೈರ್ಯ ಮಾಡಿ , ಓಹೋ ನಾನೇನು ಪೆದ್ದಿನ ಅಂತಾ aquarium ನ ಎಲ್ಲಾ ಭಾಗಗಳನ್ನೂ ಬಿಚ್ಚಿದೆ, ಫಿಲ್ಟರ್ ಬಿಚ್ಚಿದರೆ ಅದರ ತುಂಬಾ ಮೀನುಗಳ ಕಲ್ಮಶ smile emoticon ಅಯ್ಯೋ ನಾನೇನು ಮಾಡಿದ್ದೇನೋ ಇದನ್ನೂ ತೊಳಿಯಬೇಕಯ್ತಾ ಅನಿಸ್ತು ಒಂದು ಕ್ಷಣ.
ಇದನೆಲ್ಲಾ ಯಾಕೆ ಹೇಳಿದೆ ಅಂದರೆ ---
ನಾನೇ ಮಲಗಿದಲ್ಲ್ಲೇ ಮಲಗಿ, ನನ್ನ ದೇಹವೇ ಅಸಹ್ಯ ಎನಿಸಿದ ಮೇಲೆ ಮತ್ಯಾವುದೂ ಅಸಹ್ಯ ಎನಿಸಿಲ್ಲ ನಿಜಾ. ನಮ್ಮವರು, ನಮಗೆ ಬೇಕಾದವರ ಅವಗುಣಗಳು, ಅಸಹ್ಯಗಳು ನಮ್ಮ ಅವಗಾಹನೆಗೆ ಬರುವುದು ಅಪರೂಪ ಅಲ್ವಾ ? ಅಷ್ಟಕ್ಕೂ ನಾವು ಮಾಡುವ ಯಾವುದೇ ಕೆಲಸವನ್ನು ಶ್ರದ್ದೆ, ಪ್ರೀತಿಯಿಂದಾ ಮಾಡಬೇಕು ಅಷ್ಟೇ , ಅಸಹ್ಯ ಅನಿಸೋಲ್ಲ, ಎಲ್ಲರೂ ನಮ್ಮವರೇ ಅನ್ಕೊಂಡ್ರೆ ಕಷ್ಟ ಕಡಿಮೆ

No comments:
Post a Comment