ಅವಳು ಪ್ರೀತಿಯಿರುವ ಹೃದಯ ಅರೆಸುತ್ತಾ ಅಲೆಯುತಿಹಳು. ಹೆಜ್ಜೆ ಹೆಜ್ಜೆಗೂ ಸಿಕ್ಕಿದ್ದು ಮುಖವಾಡಗಳ ಮನುಷ್ಯರು (!)
ಸುಸ್ತಾಗಿ ಕಣ್ ಮುಚ್ಚಿ ಕುಸಿದು ಕುಳಿತಾಗ ..... ಕೇಳಿತು.....
"ಹುಡುಕಾಟ ಕೊನೆಗೊಳಿಸು".
ಕನಸೋ .... ಭ್ರಮೆಯೊ... ಗೊಂದಲ.
ಏನಾಗುವುದು ಕಥೆ ? ಸುಖಾಂತ್ಯವೋ ..... ? ದುಃಖಾಂತ್ಯವೋ ...? ನಿಮ್ಮ ಇಷ್ಟಕ್ಕೆ ಬಿಟ್ಟಿದ್ದು.
ತುಂಬು ಕುಟುಂಬ ಚೆಂದವೇ. ಎಲ್ಲರಲ್ಲೂ ಪ್ರೀತಿ ವಿಶ್ವಾಸ ಇದ್ದಾಗ. ತುಂಬು ಕುಟುಂಬ ಯಾಕೆ, ಅತ್ತೆ -ಮಾವ ಜೊತೆಯಲ್ಲಿರುವಾಗ, ಮಕ್ಕಳು- ಗಂಡನ ಜೊತೆಗೆ ಬದುಕುವುದೂ ನನಗಂತೂ ಸುಲಭ ಅನಿಸಿಲ್ಲ. ನಾನೂ ಹೇಗಿರಬೇಕು ಅಂತಾ ಕಲೀತಾ ಇದ್ದೇನೆ. ಅಮ್ಮನೇ ಆಗಲೀ , ಅತ್ತೆಯೇ ಆಗಲೀ .. ಹಿರಿಯರು ನಾನೇ ಬಲ್ಲವಳು/ನು ಎಂದು ಎಲ್ಲಾ ವಿಷಯಗಳಿಗೂ ಸಲಹೆ ಕೊಡೋದು, ಕೇಳದೆ ಇದ್ದರೂ ಮೂಗು ತೂರಿಸಿಕೊಂಡು ಬರೋದು ಬಿಡಬೇಕು. ಎಷ್ಟು ಬೇಕೋ ಅಷ್ಟು ಮಾತು ಆಡಿದರೆ ಕಿರಿ ಕಿರಿ ಇರೋಲ್ಲ ಅಲ್ವಾ ? ಈಗಿನವರು ಬುದ್ದಿವಂತರೇ, ತಮ್ಮ ನಿರ್ಧಾರಗಳನ್ನು ತಾವೇ ತೆಗೆದುಕೊಳ್ಳಲು ಸಮರ್ಥರಿರುತ್ತಾರೆ. ಹಿರಿತನ ಇದೆ ಅನ್ನೋ ಕಾರಣಕ್ಕೆ ಪ್ರತಿಯೊಂದನ್ನೂ/ ಪ್ರತಿಯೊಬ್ಬರನ್ನೂ ನಿಯಂತ್ರಿಸಲು ಹೋದಾಗ ಮನೆಯಲ್ಲಿ ಅಶಾಂತಿ. ಇದು ನೇರವಾಗಿ ಮನೆಯ ಯಜಮಾನನಿಗೆ, ಮಕ್ಕಳ ಬೆಳವಣಿಗೆಗೆ ಪೆಟ್ಟು. ಗೃಹಿಣಿ/ ಸೊಸೆ ಎಷ್ಟು ಶಾಂತವಾಗಿ ಎಲ್ಲದನ್ನೂ ನಿಭಾಯಿಸಲು ಸಾಧ್ಯವೋ ಅದಕ್ಕೆ ಮನೆಯ ಹಿರಿಯರ ಬೆಂಬಲ ಅವಶ್ಯಕ. ಯಾರನ್ನು ಯಾರೂ ದೂರುವ ಹಾಗಿಲ್ಲ ಇಲ್ಲಿ. ನಾನು ನೋಡಿದ ಹಾಗೆ ಈಗಿನ ಅತ್ತೆಗಳು ಬಹಳಷ್ಟು ಸಮಯವನ್ನು ಧಾರಾವಾಹಿಗಳನ್ನು ನೋಡುವುದರಲ್ಲಿ ನಿರತರಾಗಿರ್ತಾರೆ. ಚಪಲಕ್ಕೆ ತಿನ್ನೋದು, ಸದಾ ಟೀ.ವಿ ನೋಡ್ತಾ ಕೂರೋದು ಮಾಡೋದು ಬಿಟ್ಟು , ಮೊಮ್ಮಕ್ಕಳಿಗೆ ಊಟ ತಿನ್ನಿಸೋದು, ಸ್ಕೂಲ್ ವ್ಯಾನ್ ಹತ್ತಿಸೋದು, ಕಥೆ ಹೇಳೋದು, ವಾಕಿಂಗ್ , ಪಾರ್ಕ್ ಅಂತಾ ಕರೆದುಕೊಂಡು ಹೋಗೋದು.... ಇವೆಲ್ಲಾ ಮಾಡಿದರೆ ಎಷ್ಟು ಚೆನಾಗಿರುತ್ತೆ ಅಲ್ವಾ ? ಧಾರಾವಾಹಿಲಿ ಇವನ್ನೂ ತೋರಿಸ್ರಪಾ ಪ್ಲೀಸ್. ಬರೀ ಫಿಟ್ಟಿಂಗ್ ಇಡೋದು, ಅತ್ತೆ ಸೊಸೆ ಜಗಳ ಆಡೋದು, ಒಬ್ಬ ಎರೆಡೆರಡು ಸಂಬಂಧಗಳಲ್ಲಿ ಹೆಣಗಾಡೋದು ಅಷ್ಟೇ ಬೇಡಾ smile emoticon ಪ್ರೀತಿ- ವಿಶ್ವಾಸದಿಂದಾ ಹೇಗೆ ಬದುಕಬಹುದು ಅದು ಎಷ್ಟು ಚೆನಾಗಿರುತ್ತೆ ಅನ್ನೋದನ್ನೂ ತೋರಿಸಿ ಪ್ಲೀಸ್.
ಮೊನ್ನೆ ಅಮ್ಮ ಬಂದಿದ್ದಾರೆ ನಮ್ಮನೆಗೆ , ನನ್ ಮಗ --ಅಜ್ಜಿ ಇರೋದ್ಯಾಕೆ ಊಟ ಮಾಡಿಸುತ್ತೆ, ನೀನು ತಟ್ಟೆಗೆ ಹಾಕೊಡಮ್ಮ ಅಂತ ತಟ್ಟೆಗೆ ಹಾಕಿಸ್ಕೊಂಡು ಎರಡು ಸರ್ತಿ ಖುಷಿಯಿಂದ ಊಟ ಮಾಡಿತು. ಅಮ್ಮನಷ್ಟೇ ಮುದ್ದು ಅಜ್ಜಿನೂ ಅಲ್ವಾ ಮಕ್ಕಳಿಗೆ ? ನನ್ ಫ್ರೆಂಡ್ಸ್ ಯಾರಾದರೂ ಅಜ್ಜಿಯರಿದ್ದರೆ ಪ್ಲೀಸ್ ಸೊಸೆ ಮೇಲೋ, ಮಗಳ ಮೇಲೋ ಸಿಟ್ಟು ಇದ್ದರೂ ಪರವಾಗಿಲ್ಲ , ಮೊಮ್ಮಕ್ಕಳಿಗೆ ಪ್ರೀತಿ ತೋರಿಸೋದು ಬಿಡಬೇಡಿ.
No comments:
Post a Comment