ಬಹುಷಃ ನಾನು ಏನು ಆಸೆ ಪಡ್ತಿನೋ ಅದೆಲ್ಲಾ ಆಗುತ್ತೆ / ಸಿಗುತ್ತೆ . ಬರೆಯುವ ತಿಕ್ಕಲು ಇತ್ತು. ವಿರಹ- ಪ್ರೇಮ ಪದ್ಯ, ಸಣ್ಣ ಕಥೆ , ಏನೋ ಕೊರೆತ ಬರೀತಾ ಬರೀತಾ ಖುಶೀ ಸಿಗ್ತು ಇಲ್ಲಿ. ಮೊನ್ನೆಯೊಮ್ಮೆ ನನ್ನವನು ಒಂದು ಹುಟ್ಟಿದ ಹಬ್ಬದ ಸಂಭ್ರಮಕ್ಕೆ ಒಬ್ಬನೇ ಹೋಗಿದ್ದ, ಅವರು ನನ್ನವನ ಶಟಲ್ ಕಾಕ್ ಫ್ರೆಂಡ್. ಅಲ್ಲಿ ನನ್ನ ಫೇಸ್ ಬುಕ್ ಅಣ್ಣ -ತಮ್ಮಗಳೂ ಬಂದಿದ್ರಂತೆ. ಇವ್ರು ಲೋಕೇಶ್ ನಮ್ ಸುಜಾತಾ ಸಿಸ್ಟರ್ /ಸುಜಾತಾ ಮೇಡಂ ಯಜಮಾನರು ಅಂತಾ ಸುಮಾರು ಜನಕ್ಕೆ ಪರಿಚಯ ಆದನಂತೆ ! ಮನೆಗೆ ಬಂದು ಬಯ್ಕೊತಿದ್ದ ನನ್ನವ -ಬರೆಯೋದರಲ್ಲಿ ಏನ್ ಫೇಮಸ್ ಏ ನೀನು ? ಹೋಗೆ ವೆಂಕಮ್ಮನ್ ಗಂಡ ವೆಂಕಮ್ಮನ್ ಗಂಡ ಅಂತಾರೆ ನನ್ನ, ಇನ್ಮೇಲೆ ನಿನ್ ಜೊತೆಗೆ ಬುಕ್ ಬಿಡುಗಡೆ ಅಂತಾ ಬರೊಲ್ಲ.
ಹ ಹ ಹಾ ... ಐ ಲವ್ ಹಿಂ. ಎಲ್ಲಿಗಾದರೂ ನನ್ನ ಕರೆದುಕೊಂಡು ಹೋಗ್ತಾನೆ, ಬರೀ ಅಂತಾ ಪ್ರೋತ್ಸಾಹಿಸ್ತಾನೆ . ಓದಲಿಕ್ಕೆ ಎಷ್ಟೆಲ್ಲಾ ಪುಸ್ತಗಳ ತಂದು ಕೊಡ್ತಾನೆ.
ಚಟುವಟಿಕೆಯ ಹುಡುಗಿ ಮೂಲೆಯಲ್ಲಿ ಕುಳಿತು ಸ್ವಲ್ಪ ದಿನಗಳು ಅತ್ತಿದ್ದು ಕಳೆದ ಮೇಲೆ ... ಈಗ.... ಸಣ್ಣವಳಿರುವಾಗ ನನಗೆ ಪ್ರಿಯವಾದ ಯಕ್ಷಗಾನ, ನಾಟಕ ಮತ್ತೆ ಮಾಡಬೇಕು ಅನಿಸತೊಡಗಿದೆ. ಬಣ್ಣದ ಸೆಳೆತವೕ ಹಾಗೇನೋ ... !!! ದೇಹಕ್ಕೆ ಯವ್ವನ ಇಲ್ಲ, ಮುಪ್ಪೇನೂ ಅಲ್ಲ smile emoticon ಮನಸಿನ್ನೂ ಮುಗ್ದವಾಗಿದೆ. ನಾ ಚೆಂದ ಇಲ್ಲ, ಆದರೆ ಕೆಟ್ಟದಾಗಂತೂ ಇಲ್ಲ. ಗೆಜ್ಜೆ ಕಟ್ಟಿ ತಿತ್ತಿ ತ್ತೈ .... ತಿತ್ತಿತ್ತೈ... ಎಂದು ಕುಣಿಯುವ ತಾಖತ್ ಮನಸಿಗಿದೆ. ನಾಟಕದಲ್ಲಿ ಅಳುವ ಪಾತ್ರ ಮಾಡಿ ಎಲ್ಲರನ್ನೂ ಅಳಿಸಬೇಕು ಎನ್ನುವ ಆಸೆಯಿದೆ. ೨ ವರುಷಗಳ ಕೆಳಗೆ ನಾಟಕದ ಅಭಿನಯಕ್ಕೆ offer ಬಂದರೂ ಯಾಕೋ ಅಂಜಿಕೆ , ಮಾಡಲಿಲ್ಲ frown emoticonವಿಷಾದವಿದೆ.
ಯಾವಾಗ ಯಾರು ಸಿಕ್ಕಿ ಯಾವ ದಿಕ್ಕಿಗೆ ಪಯಣವೋ ಬಲ್ಲವರಾರು ????? ಬದುಕಬೇಕಿದೆ .... ಸುಖ ಎನ್ನುವುದು ಅರಸಿಕೊಂಡು ಹೋದರೆ ಮಾತ್ರ ಸಿಗುತ್ತದೆ ಅಂತಲ್ಲ, ಕೆಲವೊಮ್ಮೆ ಇರೋ ಜಾಗಕ್ಕೆ ಸುಖವೇ ಹುಡುಕಿಕೊಂಡು ಬರುವ ಸಾಧ್ಯತೆಗಳಿರುತ್ತವೆ.. ಅದರೆ ಅದನ್ನು ಪಡೆಯುವುದು ಬಿಡುವುದು ಆ ಕ್ಷಣದ ನಿರ್ಧಾರವಾಗಿರಬೇಕು..
No comments:
Post a Comment