ನನ್ನ ಕಥೆ ಕೆಲವರಿಗೆ ಇಷ್ಟವಂತೆ :-) ನಾ ಓದಿದ ಕಥೆಯೊಂದನ್ನು ಹೇಳ್ತೇನೆ .ಕೇಳಿ ನಿದ್ರಿಸಿ :-)
ಒಬ್ಬ ಒಂದು ಕುದುರೆಯನ್ನು ಸಾಕಿದ್ದ .ಅವನ ಹೆಸರು ಖಲೀಫಾ ಅಂದುಕೊಳ್ಳೋಣ ? ಅವನು ಆ ಕುದುರೆಗೆ ಸ್ವತಹ ಮೈ ಉಜ್ಜಿ ,ಮೇವು ಹಾಕಿ ಪ್ರೀತಿಯಿಂದಾ ಸಾಕಿದ್ದ .ಬಹಳಾ ಚೆನ್ನಾಗಿ ಓಡುತಿತ್ತು . ಈ ಕುದುರೆ ಮೇಲೆ ಒಬ್ಬನ ಕಣ್ಣು ಬಿತ್ತು .ನನಗೆ ಕೊಡು ಎಂದು ಕಾಡಿದ .ಆದರೆ ,ಬಹಳಾ ಪ್ರೀತಿಯ ಕುದುರೆ !ಖಲೀಫಾ ಕೊಡಲಿಕ್ಕೆ ಒಪ್ಪಲಿಲ್ಲ .
ಖಲೀಫಾ ಒಂದಿನ ಕುದುರೆಯೇರಿ ಹೋಗ್ತಾಯಿದ್ದಾಗ ,ದಾರಿಯಲ್ಲಿ ಓರ್ವ ಭಿಕ್ಷುಕ ನರಳುತ್ತಾ ಬಿದ್ದಿದ್ದನ್ನು ನೋಡಿದ .ಕುದುರೆಯಿಳಿದು ಬಂದು ಭಿಕ್ಷುಕನನ್ನು ಉಪಚರಿಸಿದ .ಭಿಕ್ಷುಕ ಹೇಳಿದ -ನನಗೆ ಹುಷಾರಿಲ್ಲ ,ದಯವಿಟ್ಟು ವೈದ್ಯರ ಹತ್ತಿರ ಕರೆದುಕೊಂಡು ಹೋಗು .
ಸರಿ ಎಂದು ಖಲೀಫಾ ,ಅವನನ್ನು ಕುದುರೆ ಮೇಲೆ ಹತ್ತಿಸಿ ,ತಾನು ಇನ್ನೇನು ಹಾರಿ ಕುಳಿತುಕೊಳ್ಳಬೇಕು ಎಂದುಕೊಳ್ಳುವಷ್ಟರಲ್ಲಿ ಭಿಕ್ಷುಕ ಕುದುರೆಯನ್ನು ಜೋರಾಗಿ ಓಡಿಸಿಕೊಂಡು ಹೋದ . ಹೋಗ್ತಾ ಹೇಳಿದ -ಹೇಯ್ ಕುದುರೆ ನಾ ಕೇಳಿದಾಗ ಕೊಡಲಿಲ್ಲ ನೀನು ? ಈಗ ನೋಡು ಹೇಗೆ ಅಪಹರಿಸಿದೆ ?
ಖಲೀಫಾ ಅವನ ಹಿಂದೆ ಓಡಿ ಹೋಗಿ ಕೂಗಿ ಹೇಳಿದ -ಆಯ್ತು ಕುದುರೆ ನೀನೇ ಇಟ್ಟುಕೋ,ಆದರೆ ಹೇಗೆ ಈ ಕುದುರೆ ಪಡೆದೆ ಎಂದು ದಯವಿಟ್ಟು ಯಾರಿಗೂ ಹೇಳಬೇಡ .
ಯಾಕೆ ? ಯಾಕೆ ? ಯಾಕೆ ?
ನಿಮಗೆ ಗೊತ್ತಾ ?
ಜನಕ್ಕೆ ಈ ತರಹದ ಮೋಸ ಆಗ್ತಿದೆ ಅಂತಾ ತಿಳಿದರೆ ,ನಿಜವಾಗಲೂ ಅಸಾಹಾಯಕರಾಗಿ,ರೋಗಗ್ರಸ್ಥ ರಾಗಿ ಬೀದಿಯಲ್ಲಿ ಬಿದ್ದ ಬಡವರಿಗೆ ಸಹಾಯ ಮಾಡಲು ಮುಂದೆ ಬರೋಲ್ಲ .
ಒಂದು ಮೋಸದಿಂದಾ ಒಬ್ಬ ವ್ಯಕ್ತಿಗೆ ,ಸಂಸ್ಥೆಗೆ ಅನ್ಯಾಯವಾಗಬಹುದು ನಿಜ .ಆದರೆ ಅದಕ್ಕಿಂತಲೂ ಭಯಾನಕ ಅಂದ್ರೆ ಜನ ,ಮನುಷ್ಯನಲ್ಲಿಯ ಪ್ರಾಮಾಣಿಕತೆಯಲ್ಲಿ ,ವಿಶ್ವಾಸದಲ್ಲಿ ,ಒಳ್ಳೆಯತನದಲ್ಲಿ ನಂಬಿಕೆ ಕಳೆದುಕೊಳ್ಳೋದು .

No comments:
Post a Comment